ಒಪ್ಪಿಕೊಂಡ ಸಿನಿಮಾದಿಂದ ಹಿಂದೆ ಸರಿದ ಆಮಿರ್ ಖಾನ್!

ಆಮಿರ್ ಖಾನ್ ಅತೀವ ಶಿಸ್ತಿನ ಸಿನಿಮಾ ಕರ್ಮಿ ಎಂಬ ಮಾತು ಬಾಲಿವುಡ್‌ನಲ್ಲಿ ಹರಿದಾಡುತ್ತದೆ. ಅದಕ್ಕೆ ಕಾರಣವೂ ಇದೆ. ವರ್ಷ ಅಥವಾ ಎರಡು ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಆಮಿರ್ ಖಾನ್ ಶಿಸ್ತಿನಿಂದ ಚಿತ್ರೀಕರಣ, ಮೇಕಿಂಗ್, ಪಾತ್ರಕ್ಕೆ ಮೇಕ್‌ಓವರ್‌ಗಳಲ್ಲಿ ತೊಡಗಿಕೊಳ್ಳುತ್ತಾರೆ.

ಆದರೆ ಅವರ ಈ ಹಿಂದಿನ 'ಲಾಲ್ ಸಿಂಗ್ ಛಡ್ಡ' ಸಿನಿಮಾ ಸೋತ ಬಳಿಕ ಆಮಿರ್ ಖಾನ್‌ರ ಸಿನಿಮಾ ಎಡೆಗಿನ ದೃಷ್ಟಿಕೋನ ಬದಲಾಗಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ಒಪ್ಪಿಕೊಂಡ ಮೇಲೆ ಮಾಡದೇ ಇರಲಾರದಾಗಿದ್ದ ಆಮಿರ್ ಖಾನ್ ಈಗ ಸಿನಿಮಾ ಒಂದರಿಂದ ಹಠಾತ್ತನೆ ಹಿಂದೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಮಿರ್ ಖಾನ್, 'ಚಾಂಪಿಯನ್ಸ್' ಹೆಸರಿನ ವಿದೇಶಿ ಸಿನಿಮಾದ ರೀಮೇಕ್‌ನಲ್ಲಿ ನಟಿಸಬೇಕಿತ್ತು. ಆದರೆ ಸಿನಿಮಾದಿಂದ ನಟಿಸುವುದರಿಂದ ಹಿಂದೆ ಸರಿದಿದ್ದಾರೆ ಆಮಿರ್ ಖಾನ್.

Aamir Khan Backed Out From Champions Movie Remake

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ''ಲಾಲ್ ಸಿಂಗ್ ಚಡ್ಡ' ಸಿನಿಮಾದ ಬಳಿಕ ಸ್ಯಾಮಿಷ್ ಸಿನಿಮಾ 'ಚಾಂಪಿಯನ್ಸ್'ನ ರೀಮೇಕ್‌ನಲ್ಲಿ ನಟಿಸಬೇಕಿತ್ತು. ಅದೊಂದು ಅದ್ಭುತವಾದ ಕತೆ ಆದರೆ ನಾನು ನಟಿಸದಿರಲು ನಿರ್ಧರಿಸಿದ್ದೇನೆ'' ಎಂದಿದ್ದಾರೆ.

''ಯಾವುದಾದರೂ ಒಂದು ಸಿನಿಮಾದಲ್ಲಿ ನಟಿಸುತ್ತಿರಬೇಕಾದರೆ ನಾನು ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಂಡು ಬಿಡುತ್ತೇನೆ. ಸಿನಿಮಾದ ಹೊರತಾಗಿ ನನಗೆ ಖಾಸಗಿ ಜೀವನ ಇದೆ ಎಂಬುದನ್ನೇ ಮರೆತುಬಿಟ್ಟಿರುತ್ತೇನೆ. ಹಾಗಾಗಿ ನನಗೆ ಬ್ರೇಕ್ ಒಂದು ಬೇಕಾಗಿದೆ. ನಾನು ನನ್ನ ಕುಟುಂಬದೊಟ್ಟಿಗೆ ಸಮಯ ಕಳೆಯಬೇಕಿದೆ. ಮಗಳು, ತಾಯಿ ಅವರೊಟ್ಟಿಗೆ ಸಮಯ ಕಳೆಯಬೇಕಿದೆ'' ಎಂದಿದ್ದಾರೆ ಆಮಿರ್ ಖಾನ್.

''ನಾನು ಕಳೆದ 35 ವರ್ಷಗಳಿಂದಲೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನಾನು ಸಿನಿಮಾಕ್ಕೆ ಮಾತ್ರವೇ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದೇನೆ. ಅದು ಸರಿಯಲ್ಲ. ನನ್ನನ್ನು ಪ್ರೀತಿಸುವ, ಗೌರವಸುವ ನನ್ನ ಸುತ್ತಲಿನ ಜನರಿಗೆ ನಾನು ಪೂರ್ಣ ನ್ಯಾಯ ಒದಗಿಸುತ್ತಿಲ್ಲ ಎನಿಸುತ್ತದೆ. ಹಾಗಾಗಿ ಸಿನಿಮಾಗಳಿಂದ ಬಿಡುವು ಪಡೆದು ಜೀವನವನ್ನು ಅನುಭವಿಸಬೇಕು ಎಂದು ನಿಶ್ಚಯಿಸಿದ್ದೇನೆ'' ಎಂದಿದ್ದಾರೆ ಆಮಿರ್ ಖಾನ್.

ಆದರೆ 'ಚಾಂಪಿಯನ್ಸ್' ಸಿನಿಮಾದಿಂದ ಪೂರ್ಣವಾಗಿ ಹೊರಗೆ ಹೋಗಿಲ್ಲ ಆಮಿರ್ ಖಾನ್. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುವ ನಿರ್ಣಯ ಮಾಡಿದ್ದ ಆಮಿರ್ ಖಾನ್ ಇದೀಗ ಆ ಯೋಚನೆಯಿಂದ ಹೊರಗೆ ಬಂದಿದ್ದಾರೆ, ಆದರೆ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬ ಮಾಹಿತಿ ಶೀಘ್ರದಲ್ಲಿಯೇ ಹೊರಬೀಳಲಿದೆ.

ಆಮಿರ್ ಖಾನ್‌ರ ಈ ಹಿಂದಿನ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ಅದರಲ್ಲಿಯೂ ಹಿಂದೂಪರ ಸಂಘಟನೆಗಳು ಸಿನಿಮಾದ ವಿರುದ್ಧ ಮಾಡಿದ ಅಭಿಯಾನದಿಂದಲೂ ಸಿನಿಮಾಕ್ಕೆ ಹೊಡೆತ ಬಿತ್ತು ಇದು ಸಹಜವಾಗಿ ಆಮಿರ್ ಖಾನ್‌ ಬೇಸರಕ್ಕೆ ಕಾರಣವಾಗಿರಬಹುದು. ಅಲ್ಲದೆ, ಒಂದು ವಿದೇಶಿ ಸಿನಿಮಾದ ರೀಮೇಕ್‌ ಬಳಿಕ ಮತ್ತೊಂದು ವಿದೇಶಿ ಸಿನಿಮಾದ ರೀಮೇಕ್‌ ಮಾಡುವುದು ಬೇಡವೆಂದು 'ಚಾಂಪಿಯನ್ಸ್' ಸಿನಿಮಾದಿಂದ ಹಿಂದೆ ಸರಿದಿರುವ ಸಾಧ್ಯತೆಯೂ ಇದೆ.

More from Filmibeat

English summary
Actor Aamir Khan backed out from Champions movie remake. He said I am not acting in the movie, I will produce it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X