Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಮರೆಯದೆ ವಿಶ್ ಮಾಡಿದ ಸೂಪರ್ ಸ್ಟಾರ್
ಮೇ 13 ರಂದು ಮಾದಕ ತಾರೆ ಸನ್ನಿ ಲಿಯೋನ್ ಹುಟ್ಟುಹಬ್ಬವಿತ್ತು. ಸನ್ನಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭಾಶಯ ಮಹಾಪೂರವನ್ನೇ ಕಳುಹಿಸಿದ್ದಾರೆ. ಪತಿ ಡೇನಿಯಲ್ ವೆಬರ್ ಮತ್ತು ಮಕ್ಕಳ ಜೊತೆ 38ನೇ ಜನುಮದಿನವನ್ನ ಸನ್ನಿ ಆಚರಿಸಿದ್ದಾರೆ.
ಈ ವರ್ಷ ಸನ್ನಿ ಲಿಯೋನ್ ಬರ್ತಡೇಯನ್ನ ಮತ್ತಷ್ಟು ಸ್ಪೆಷಲ್ ಆಗಿಸಿದ್ದು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್. ಸನ್ನಿ ಹುಟ್ಟುಹಬ್ಬಕ್ಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಹೃದಯಪೂರ್ವಕವಾಗಿ ಶುಭಕೋರಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕನ್ನಡಿಗನ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದ ಸನ್ನಿ ಲಿಯೋನ್
''ಡಿಯರ್ ಸನ್ನಿ ಲಿಯೋನ್ ಹುಟ್ಟುಹಬ್ಬದ ಶುಭಾಶಯಗಳು. ಈ ದಿನ ನಿನಗೆ ಅದ್ಭುತವಾಗಿರಲಿ. ಈ ವರ್ಷ ನಿನಗೆ ಒಳ್ಳೆಯದು ತರಲಿ. ಈ ಹುಟ್ಟುಹಬ್ಬ ಈ ದಿನವನ್ನ ಮತ್ತಷ್ಟು ವಿಶೇಷವಾಗಿಸಲಿ'' ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.
ಅಮೀರ್ ಖಾನ್ ಮಾಡಿರುವ ಈ ಟ್ವೀಟ್ ಗೆ ಸನ್ನಿ ಲಿಯೋನ್ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ, ಸನ್ನಿ ಬಗ್ಗೆ ಅಮೀರ್ ಖಾನ್ ಒಳ್ಳೆಯ ಭಾವನೆ ಹೊಂದಿದ್ದಾರೆ. ಅದೇ ರೀತಿ ಸನ್ನಿ ಕೂಡ ಅಮೀರ್ ಬಗ್ಗೆ ಗೌರವಾನ್ವಿತ ಪ್ರೀತಿ ಹೊಂದಿದ್ದಾರೆ.
ಸನ್ನಿ ಲಿಯೋನ್ ಬಿಕಿನಿ ಫೋಟೋ: ಥ್ರಿಲ್ ಆದ ಪಡ್ಡೆ ಹೈಕ್ಳು
ಈ ಹಿಂದೆ ಸಂದರ್ಶನವೊಂದರಲ್ಲಿ ಅಮೀರ್ ಖಾನ್ ಗೆ ಸಂದರ್ಶಕರೊಬ್ಬರು ''ಸನ್ನಿ ಲಿಯೋನ್ ಜೊತೆ ನಟಿಸುತ್ತೀರಾ, ಆಕೆ ಈ ಹಿಂದೆ ನೀಲಿತಾರೆಯಾಗಿದ್ದರು'' ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆ ಕೇಳಿದ್ದಕ್ಕೆ ಆ ಸಂದರ್ಶಕನ ವಿರುದ್ಧ ಹಲವು ಸೆಲೆಬ್ರಿಟಿಗಳು ಕಿಡಿಕಾರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೀರ್ ಖಾನ್ ''ಸನ್ನಿ ಲಿಯೋನ್ ನಾನು ನಿನ್ನ ಜೊತೆ ಬಹಳ ಸಂತೋಷದಿಂದ ನಟಿಸುತ್ತೇನೆ. ನನಗೆ ನಿನ್ನ ಹಿಂದಿನ ಬದುಕಿನ ಬಗ್ಗೆ ಯಾವುದೇ ಸಮಸ್ಯೆ ಇಲ್ಲ'' ಎಂದು ಹೇಳಿದ್ದರು. ಅದಕ್ಕೆ ಧನ್ಯವಾದ ಹೇಳಿದ್ದ ಸನ್ನಿ ಲಿಯೋನ್ ''ನಿಮ್ಮ ಈ ಮಾತು ಹೇಳಿ ಹೃದಯ ತುಂಬಿ ಬಂತು. ನನ್ನ ಬೆಂಬಲಿಸಿದ್ದಕ್ಕೆ ಥ್ಯಾಂಕ್ ಯೂ ಸೋ ಮಚ್'' ಎಂದಿದ್ದರು.