2ನೇ ಪತ್ನಿಗೆ ವಿಚ್ಛೇದನ ನೀಡಿದ ಬೆನ್ನಲ್ಲೇ ಆಮೀರ್ ಖಾನ್ ನಿಷೇಧಕ್ಕೆ ನೆಟ್ಟಿಗರ ಒತ್ತಾಯ

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಮೊದಲ ಪತ್ನಿಯ ಜೊತೆ 16 ವರ್ಷ ಸಂಸಾರ ನಡೆಸಿ ವಿಚ್ಛೇದನ ನೀಡಿ ಬಳಿಕ ಕಿರಣ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಮೀರ್ ಖಾನ್ 16 ವರ್ಷದ ಬಳಿಕ 2ನೇ ಪತ್ನಿಯಿಂದನೂ ದೂರ ಆಗಿದ್ದಾರೆ.

ಆಮೀರ್ ಖಾನ್ ಈ ನಿರ್ಧಾರ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ನಲ್ಲಿ ಆಮೀರ್ ಖಾನ್ ನಿಷೇಧಿಸುವಂತೆ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ #Boycottaamirkhan ಎಂದು ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಮೀರ್ ಖಾನ್‌ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

'ಇಬ್ಬರೂ ಹಿಂದು ಯುವತಿಯನ್ನು ಮದುವೆಯಾಗಿ 3 ಮುಸ್ಲಿಂ ಮಕ್ಕಳಿಗೆ ಜನ್ಮ ನೀಡಿದ್ದಾರೆ' ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಲವ್ ಜಿಹಾದ್ ಆಮೀರ್ ಖಾನ್ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಆಮೀರ್ ಖಾನ್‌ನನ್ನು ಬ್ಯಾನ್ ಮಾಡಿ ಕಿಡಿ ಕಾರುತ್ತಿದ್ದಾರೆ.

Aamir Khan Brutally trolled by Netizens for divorce from Kiran Rao

ಇನ್ನು ಕೆಲವರು, 'ಕಿರಣ್ ರಾವ್ ಅವರಿಗೆ ಆಮೀರ್ ಖಾನ್ ಜೊತೆ ಇರಲು ಅಸುರಕ್ಷಿತ ಎಂದು ಫೀಲ್ ಆಗುತ್ತಿದೆ' ಎಂದು ಟ್ರೋಲ್ ಮಾಡುತ್ತಿದ್ದಾರೆ. 'ಇಂಥ ಲವ್ ಜಿಹಾದಿಗಳ ಸಿನಿಮಾ ನೋಡಬೇಡಿ' ಎಂದು ಮನವಿ ಮಾಡುತ್ತಿದ್ದಾರೆ. ಆಮೀರ್ ಖಾನ್ 'ಲವ್ ಜಿಹಾದ್‌ನ ಅಂಬಾಸಿಡರ್' ಎಂದು ನೆಟ್ಟಿಗರು ಕರೆಯುತ್ತಿದ್ದಾರೆ.

Aamir Khan Brutally trolled by Netizens for divorce from Kiran Rao

ಇನ್ನು ನಟ ಆಮೀರ್ ಖಾನ್ ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಅಕ್ಕ-ಪಕ್ಕದಲ್ಲೇ ಕುಳಿತು, ಕೈ ಕೈ ಹಿಡಿದು ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ''ನಮ್ಮ ನಿರ್ಣಯದಿಂದ ಕೆಲವರಿಗೆ ಶಾಕ್ ಆಗಿರಬಹುದು, ಕೆಲವರಿಗೆ ಬೇಸರ ಆಗಿರಬಹುದು. ಆದರೆ ನಾವು ನಿಮಗೆ ಹೇಳಲಿಚ್ಛಿಸುವುದು ಇಷ್ಟೆ ನಾವಿಬ್ಬರೂ ಆರಾಮವಾಗಿದ್ದೇವೆ. ಖುಷಿಯಾಗಿದ್ದೇವೆ. ನಾವು ಈಗಲೂ ಒಂದೇ ಕುಟುಂಬ ಆದರೆ ನಮ್ಮ ಸಂಬಂಧ ತುಸು ಬದಲಾಗಿದೆ ಅಷ್ಟೆ'' ಎಂದು ಅಮೀರ್ ಖಾನ್ ಹೇಳಿದ್ದಾರೆ.

Aamir Khan Brutally trolled by Netizens for divorce from Kiran Rao

ಫೋನ್ ಕಾಲ್‌ನಿಂದ ಪ್ರಾರಂಭವಾದ ಪ್ರೀತಿ ಬಳಿಕ ಇಬ್ಬರನ್ನು ಪತಿ-ಪತ್ನಿಯರಾಗಿ ಮಾಡಿತ್ತು. 2005 ಡಿಸೆಂಬರ್ 28ರಂದು ಆಮೀರ್ ಖಾನ್ ಮತ್ತು ಕಿರಣ್ ರಾವ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಬಾಡಿಗೆ ತಾಯಿ ಮೂಲಕ ಮಗ ಅಜಾದ್ ರಾವ್ ಖಾನ್‌ರನ್ನು ಸ್ವಾಗತಿಸಿದರು. 16 ವರ್ಷಗಳ ಸುಂದರ ದಾಂಪತ್ಯ ನಡೆಸಿದ ಆಮೀರ್ ಮತ್ತು ಕಿರಣ್ ರಾವ್ ಈಗ ಬೇರೆ ಆಗುವ ನಿರ್ಧಾರ ಮಾಡಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

More from Filmibeat

English summary
Bollywood Actor Aamir Khan Brutally trolled by Netizens for divorce from Kiran Rao.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X