For Quick Alerts
  ALLOW NOTIFICATIONS  
  For Daily Alerts

  ಆಮೀರ್ ಖಾನ್ ಫಿಟ್ನೆಸ್ ಕೋಚ್ ಜೊತೆ ಮಗಳ ಲವ್ವಿ ಡವ್ವಿ

  |

  ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಚಿಕ್ಕವಯಸ್ಸಿನಲ್ಲೇ ತನ್ನ ಮೇಲೆ ದೌರ್ಜನ್ಯ ನಡೆದಿತ್ತು ಎಂದು ಶಾಕಿಂಗ್ ಹೇಳಿಕೆ ನೀಡುವ ಮೂಲಕ ಸದ್ದು ಮಾಡಿದ್ದ ಇರಾ ಇದೀಗ ಪ್ರೀತಿ, ಪ್ರೇಮದ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ.

  ಇರಾ ಖಾನ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ವಿಚಾರ ಬಾಲಿವುಡ್ ನಲ್ಲಿ ವೈರಲ್ ಆಗಿದೆ. ಆಮೀರ್ ಖಾನ್ ಪುತ್ರಿ ಇನ್ನು ಬಾಲಿವುಡ್ ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ನಿರ್ದೇಶನ ಮತ್ತು ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಇರಾ ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪ್ರೀತಿಯ ವಿಚಾರದ ಮೂಲಕ ಸದ್ದು ಮಾಡುತ್ತಿದ್ದಾರೆ. ಮುಂದೆ ಓದಿ..

  ಅಮೀರ್ ಖಾನ್ ಮಗಳ ಮೇಲೆ ಎಳವೆಯಲ್ಲಿಯೇ ಲೈಂಗಿಕ ದೌರ್ಜನ್ಯ!

  ಆಮೀರ್ ಖಾನ್ ಫಿಟ್ನಸ್ ಕೋಚ್ ಜೊತೆ ಮಗಳ ಡೇಟಿಂಗ್

  ಆಮೀರ್ ಖಾನ್ ಫಿಟ್ನಸ್ ಕೋಚ್ ಜೊತೆ ಮಗಳ ಡೇಟಿಂಗ್

  ಸದ್ಯ ಇರಾ ಪ್ರೀತಿಯಲ್ಲಿ ಬಿದ್ದಿರುವುದು ತಂದೆ ಆಮೀರ್ ಖಾನ್ ಫಿಟ್ನೆಸ್ ಕೋಚ್ ನೂಪುರ್ ಶಿಖಾರೆ ಜೊತೆ. ಹೌದು, ಇರಾ ಮತ್ತು ನೂಪುರ್ ಇಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫೋಟೋಗಳನ್ನು ಹಂಚೊಕಂಡಿದ್ದಾರೆ.

  ಲಾಕ್ ಡೌನ್ ಬಳಿಕ ಪ್ರೀತಿ ಪ್ರಾರಂಭ

  ಲಾಕ್ ಡೌನ್ ಬಳಿಕ ಪ್ರೀತಿ ಪ್ರಾರಂಭ

  ಫೋಟೋಗೆ ಒಬ್ಬರಿಗೊಬ್ಬರು ಕಾಮೆಂಟ್ಸ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಸದಾ ಜೊತೆಯಲ್ಲಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಇಬ್ಬರ ನಡುವೆ ಪ್ರೀತಿ ಶುರುವಾಗಿದೆಯಂತೆ. ಅಲ್ಲದೆ ಇರಾ ಖಾನ್ ಅವರಿಗೂ ಫಿಟ್ನೆಸ್ ತರಬೇತಿ ಮಾಡುತ್ತಿರುವುದು ಇದೆ ನೂಪುರ್.

  ಮನೆಯವರಿಗೂ ಗೊತ್ತು ಪ್ರೀತಿಯ ವಿಚಾರ

  ಮನೆಯವರಿಗೂ ಗೊತ್ತು ಪ್ರೀತಿಯ ವಿಚಾರ

  ಮೂಲಗಳ ಪ್ರಕಾರ ಇಬ್ಬರು ಇರಾ ಖಾನ್ ಅವರ ತೋಟದ ಮನೆಯಲ್ಲಿ ಒಟ್ಟಿಗೆ ಕಾಲಕಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಬ್ಬರು ತಮ್ಮ ಮನೆಯಲ್ಲೂ ಪ್ರೀತಿಯ ವಿಚಾರ ಹೇಳಿಕೊಂಡಿದ್ದಾರೆ. ಆಮೀರ್ ಖಾನ್ ಮಾಜಿ ಪತ್ನಿ ರೀನಾ ದತ್ತಾ ಈ ವಿಚಾರವನ್ನು ಹೇಗೆ ತೆಗೆದುಕೊಂಡರು ಎಂಬುವುದರ ಬಗ್ಗೆ ತಿಳಿದುಬಂದಿಲ್ಲ. ಅಲ್ಲದೆ ಆಮೀರ್ ಖಾನ್ ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆನೀಡಿಲ್ಲ.

  6 ಗಂಟೆ ಆದ್ರೆ ಒಂದು ಸಲ ಗಡಿಯಾರ ನೋಡಿ ಸಿಗ್ನಲ್ ಕೊಡ್ತಾ ಇದ್ರು ರಾಜ್ ಕುಮಾರ್ | Jaggesh and DR Rajkumar
  ಇರಾ ಜೊತೆ ನೂಪುರ್ ದೀಪಾವಳಿ ಹಬ್ಬ ಆಚರಣೆ

  ಇರಾ ಜೊತೆ ನೂಪುರ್ ದೀಪಾವಳಿ ಹಬ್ಬ ಆಚರಣೆ

  ಇತ್ತೀಚಿಗೆ ಇರಾ ಮತ್ತು ನೂಪುರ್ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ದೀಪಾವಳಿ ಸಮಯದ ಫೋಟೋ ಇದಾಗಿದ್ದು, ಹಬ್ಬದ ಸಾಂಪ್ರದಾಯಿಕ ಉಡುಪಿನಲ್ಲಿ ಇಬ್ಬರು ಮಿಂಚಿದ್ದಾರೆ. ನೂಪುರ್ ಬಾಲಿವುಡ್ ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳಿಗೆ ಫಿಟ್ನೆಸ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ನಟಿ ಮತ್ತು ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಅವರಿಗೂ ತರಬೇತಿ ನೀಡುತ್ತಿದ್ದಾರೆ.

  English summary
  Bollywood Actor Aamir Khan Daughter Ira Khan is Dating Amir khan Fitness coach Nupur Shikare.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X