ಪ್ರೇಮಿಯ ಜೊತೆ ಇರಾ ಖಾನ್ ಹಾಟ್ ಲುಕ್: ಪ್ರೀತಿಗೆ 2 ವರ್ಷದ ಸಂಭ್ರಮ!

ಬಾಲಿವುಡ್ ನಟ ಆಮೀರ್ ಖಾನ್ ಮಗಳು ಇರಾ ತಮ್ಮ ಪ್ರೀತಿ ವಿಚಾರದಲ್ಲಿ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಕದ್ದುಮುಚ್ಚಿ ಓಡಾಡುವುದು, ಅಥವಾ ತನ್ನ ಪ್ರೇಮಿಯನ್ನು ಮರೆಮಾಚುವ ಜಾಯಮಾನಕ್ಕೆ ಸೇರಿಲ್ಲ. ಮೊದಲಿನಿಂದಲೂ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಲೇ ಇದ್ದರೆ. ಹಾಗೆ ತಮ್ಮ ಪ್ರಿಯತಮನನ್ನೂ ಕೂಡ ಪರಿಚಯಿಸಿದ್ದಾರೆ.

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಿಯತಮನ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಇರಾ ಪ್ರಿಯತಮ ನೂಪೂರ್ ಶಿಖರ್ ಎಲ್ಲರಿಗೂ ಚಿರಪರಿಚಿತ. ಇನ್ನು ಇತ್ತೀಚೆಗೆ ಇರಾ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಕೊಂಡಿದ್ದು ಫೋಟೋಗಳು ಟ್ರೋಲ್ ಆಗಿದ್ದವು.

ಈಗ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿರುವ ಪ್ರಿಯತಮನಿಗಾಗಿ ಸಂದೇಶವನ್ನು ಕೂಡ ಬರೆದುಕೊಂಡಿದ್ದಾರೆ. ತನ್ನ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ತೆಗೆದಿದ್ದಂತಹ ಬಿಕಿನಿ ಫೋಟೋಗಳನ್ನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇರಾ ನೂಪುರ್ ಪ್ರೀತಿಗೆ 2 ವರ್ಷ!

ಇರಾ ನೂಪುರ್ ಪ್ರೀತಿಗೆ 2 ವರ್ಷ!

ಇನ್ನು ಈಗ ಇರಾ, ಈ ರೀತಿಯಾಗಿ ತನ್ನ ಪ್ರಿಯತಮನ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳಲು ಕಾರಣ ಅವರ ಪ್ರೀತಿಯ ವಾರ್ಷಿಕೋತ್ಸವ. ಹೌದು ಇವರ ಪ್ರೀತಿ ಶುರುವಾಗಿ ಎರಡು ವರ್ಷ ಆಗಿದೆ. ಹಾಗಾಗಿ ಈ ಸಂಭ್ರಮವನ್ನು ಹಂಚಿಕೊಳ್ಳಲು ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡು ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ ಇರಾ ಖಾನ್. ನೂಪುರ್ ಖಾನ್ ಕೂಡ ಇರಾ ಜೊತೆಗಿನ ಪೋಟ್ ಶೇರ್ ಮಾಡಿ ಲವ್ ಯು ಟೂ ಎಂದು ಬರೆದುಕೊಂಡಿದ್ದಾರೆ.

ನೂಪುರ್‌ಗಾಗಿ ಇರಾ ಬರೆದ ಸಂದೇಶ!

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇರಾ ಖಾನ್ ಫೊಟೋ ಹಂಚಿಕೊಂಡು. "ಇದು ಎರಡನೇ ವರ್ಷ.. ಆದರೆ ಯಾವಾಗಿನಿಂದಲೋ ಹೀಗೆ ಇದ್ದೇವೆ ಎನ್ನುವ ಭಾವನೆ ನನ್ನದು.. ಐ ಲವ್ ಯು.. ನಾನು ಪ್ರಾಮಾಣಿಕವಾಗಿ ಸತ್ಯವಾಗಿ ನಿನ್ನನ್ನು ಅತ್ಯಂತ ಪ್ರೀತಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿ ಬಿಟ್ಟಿದೆ.

ಬಿಕಿನಿಯಲ್ಲಿ ಕೇಕ್ ಕತ್ತರಿಸಿ ಇರಾ ಟ್ರೋಲ್!

ಇನ್ನು ಈ ಹಿಂದೆ ತಮ್ಮ ಹುಟ್ಟುಹಬ್ಬವನ್ನು ಬಿಕಿನಿ ಹಾಕಿಕೊಂಡು ಪೂಲ್‌ನಲ್ಲಿ ಆಚರಿಸಿಕೊಂಡಿದ್ದರು ಇರಾ. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೇಕ್ ಕಟ್ ಮಾಡಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿ ತಂದೆ ಆಮೀರ್ ಖಾನ್ ಸೇರಿದಂತೆ ಕುಟುಂಬಸ್ಥರು ಭಾಗಿ ಆಗಿದ್ದರು. ಆದರೆ ಇರಾ ಅವತಾರ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

ಇರಾ ಖಾನ್ ನಟನೆ ಯಾವಾಗ!

ಇರಾ ಖಾನ್ ನಟನೆ ಯಾವಾಗ!

ಇರಾ ಖಾನ್ ಸಿನಿಮಾ ರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿಲ್ಲ ಆದರೆ ಇರಾ ಖಾನ್ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. 2019ರಲ್ಲಿ ಇರಾ ಖಾನ್ ಸಿನಿಮಾ ಒಂದು ನಿರ್ದೇಶನ ಮಾಡಿದ್ದಾರೆ. ಸದ್ಯ ಸಿನಿಮಾರಂಗದಲ್ಲಿ ಯಾವುದೇ ಚಟುವಟಿಕೆಗಳಲ್ಲಿ ಕೂಡಾ ಇರಾ ಸಕ್ರಿಯವಾಗಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಇರಾನ್ ನಾಯಕಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

More from Filmibeat

English summary
Aamir Khan Daughter Ira Share More Hot Bikini Pic With Boyfriend For Love Anniversary And Wrote Nice Massage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X