For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್‌ನಿಂದ ಅಣ್ಣನ ಜೀವ ಹೋಯ್ತು: ನಟನ ಸಹೋದರ ಬಿಚ್ಚಿಟ್ಟ ಸತ್ಯ

  By ಫಿಲ್ಮಿಬೀಟ್ ಡೆಸ್ಕ್
  |

  ನಟ ಅಮೀರ್ ಖಾನ್ ಭಾರತದ ದೊಡ್ಡ ಸೂಪರ್ ಸ್ಟಾರ್. ಎಷ್ಟೋ ಮಂದಿ ನಟ-ನಟಿಯರಿಗೆ ಅಮೀರ್ ಖಾನ್ ಆದರ್ಶ. ಅವರ ರೀತಿ ನಟಿಸಬೇಕು, ಅವರು ನೀಡುವಂಥೆ ಭಿನ್ನ ರೀತಿಯ ಗಟ್ಟಿ ಸಂದೇಶವುಳ್ಳ ಸಿನಿಮಾಗಳನ್ನು ನೀಡಬೇಕೆಂದು ಹಲವು ಯುವ ನಟರು ಕೋರಿಕೊಳ್ಳುತ್ತಿರುತ್ತಾರೆ.

  ನೀರು ಉಳಿಸುವ ವಾಟರ್ ಕಪ್ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅಮೀರ್ ಖಾನ್ ಕೊರೊನಾ ಸಮಯದಲ್ಲಿಯೂ ಕೆಲವಾರು ಸಹಾಯಗಳನ್ನು ಮಾಡಿದ್ದಾರೆ. ಅಮೀರ್ ಖಾನ್ ಒಬ್ಬ ಮಾನವೀಯತೆಯುಳ್ಳ ವ್ಯಕ್ತಿ ಎಂದೇ ಚಿರಪರಿಚಿತ.

  ಆದರೆ ಬಾಲಿವುಡ್‌ನ ಖ್ಯಾತ ನಟರೊಬ್ಬರ ಸಹೋದರ ಅಮೀರ್ ಖಾನ್‌ ಬಗ್ಗೆ ಬೇರೆಯದ್ದೇ ಕತೆ ಹೇಳುತ್ತಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ನಟ ಅನುಪಮ್ ಶ್ಯಾಮ್ ಅಮೀರ್ ಖಾನ್‌ ಮೇಲೆ ಗುರುತರವಾದ ಆರೋಪ ಮಾಡಿದ್ದು, ತಮ್ಮ ಸಹೋದರ ಅನುಪಮ್ ಶ್ಯಾಮ್‌ರ ಕೊನೆಯ ದಿನಗಳು ಎಷ್ಟು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.

  ಲಗಾನ್ ಸೇರಿ ಹಲವು ಸಿನಿಮಾಗಳಲ್ಲಿ ನಟನೆ

  ಲಗಾನ್ ಸೇರಿ ಹಲವು ಸಿನಿಮಾಗಳಲ್ಲಿ ನಟನೆ

  ಕಳೆದ ಭಾನುವಾರದಂದು ಅನುಪಮ್ ಶ್ಯಾಮ್ ಕೊನೆ ಉಸಿರೆಳೆದರು. ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಮೀರ್ ಖಾನ್ ನಟನೆಯ 'ಲಗಾನ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅನುಪಮ್ ಶ್ಯಾಮ್ ರಂಗಭೂಮಿಯಲ್ಲಿಯೂ ಬಹಳ ಸಕ್ರಿಯರಾಗಿದ್ದರು. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅನುಪಮ್ ಕೊನೆಯ ದಿನಗಳನ್ನು ಬಹಳ ಕಷ್ಟದಲ್ಲಿ ಕಳೆದಿದ್ದರು.

  ಪ್ರತಾಪ್‌ಘಡದಲ್ಲಿ ಡಯಾಲಿಸಿಸ್ ಕೇಂದ್ರ

  ಪ್ರತಾಪ್‌ಘಡದಲ್ಲಿ ಡಯಾಲಿಸಿಸ್ ಕೇಂದ್ರ

  ಅನುಪಮ್ ನಿಧನನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಅವರ ಸಹೋದರ ಅನುರಾಗ್ ಶ್ಯಾಮ್, ಅಣ್ಣನಿಗೆ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕಿತ್ತು. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತಿತ್ತು. ನಾವು ನಟ ಅಮೀರ್ ಖಾನ್‌ ಸಹಾಯ ಕೇಳಿದೆವು. ಸಹಾಯ ಮಾಡುವುದಾಗಿ ಹೇಳಿದ ಅಮೀರ್ ಖಾನ್ ಉತ್ತರ ಪ್ರದೇಶದ ಪ್ರತಾಪ್‌ಗಢ್‌ನಲ್ಲಿ ಡಯಾಲಿಸಿಸ್ ಸೆಂಟರ್‌ ಸ್ಥಾಪಿಸಿಕೊಡುವುದಾಗಿ ಹೇಳಿದ್ದರು. ಆದರೆ ಆ ನಂತರ ಅವರು ನಮ್ಮ ಕರೆಗಳನ್ನು ಸ್ವೀಕರಿಸುವುದನ್ನೇ ಬಿಟ್ಟುಬಿಟ್ಟರು'' ಎಂದಿದ್ದಾರೆ.

  ''ಅಮೀರ್ ಖಾನ್ ಮಾತಿನಿಂದ ಭರವಸೆ ಮೂಡಿತು''

  ''ಅಮೀರ್ ಖಾನ್ ಮಾತಿನಿಂದ ಭರವಸೆ ಮೂಡಿತು''

  ''ಅಮೀರ್ ಖಾನ್ ಮಾತಿನಿಂದ ನಮಗೆ ಭರವಸೆ ಮೂಡಿತು, ಆದರೆ ಸಹಾಯ ಮಾಡುತ್ತೇನೆ ಎಂದಿದ್ದ ಅಮೀರ್ ಖಾನ್ ಆ ನಂತರ ನಮ್ಮ ಕರೆಗಳನ್ನು ಸ್ವೀಕರಿಸುವುದನ್ನೇ ಬಿಟ್ಟುಬಿಟ್ಟರು ಎಂದಿದ್ದಾರೆ. ಕೊನೆಯ ಸಮಯದಲ್ಲಿ ಅಣ್ಣ ಸಾಕಷ್ಟು ನೋವು ಪಟ್ಟರು. ಅವರು ನಟಿಸುತ್ತಿದ್ದ ಶೋ ಪ್ರಸಾರ ನಿಲ್ಲಿಸಿಬಿಡುತ್ತಾರೆ ಎಂಬ ಸುದ್ದಿಯೂ ಅಣ್ಣನಿಗೆ ತೀವ್ರ ಬೇಸರ ತಂದಿತ್ತು ಎಂದಿದ್ದಾರೆ ಅನುರಾಗ್ ಶ್ಯಾಮ್. ಅನುಪಮ್ ಶ್ಯಾಮ್ ಅವರು 'ಮನ್ ಕಿ ಆವಾಜ್' ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

  ಹಲವು ಸಿನಿಮಾಗಳಲ್ಲಿ ನಟಿಸಿರುವ ಅನುಪಮ್

  ಹಲವು ಸಿನಿಮಾಗಳಲ್ಲಿ ನಟಿಸಿರುವ ಅನುಪಮ್

  ಒಂದು ತಿಂಗಳ ಹಿಂದಷ್ಟೆ ನಾವು ತಾಯಿಯನ್ನು ಕಳೆದುಕೊಂಡೆವು. ಆದರೆ ಆಗ ತಾಯಿಯನ್ನು ನೋಡಲು ಅನುಪಮ್‌ಗೆ ಸಾಧ್ಯವಾಗಿರಲಿಲ್ಲ. ಪ್ರತಾಪ್‌ಘಡದಲ್ಲಿ ಅಮ್ಮ ನೆಲೆಸಿದ್ದಳು. ಅಲ್ಲಿ ಡಯಾಲಿಸಿಸ್ ಸೆಂಟರ್ ಇಲ್ಲದ ಕಾರಣ ಅಲ್ಲಿಗೆ ಅನುಪಮ್ ಹೋಗಲು ಸಾಧ್ಯವಾಗಲಿಲ್ಲ. ಅಲ್ಲೊಂದು ಡಯಾಲಿಸಿಸ್ ಸೆಂಟರ್ ಸ್ಥಾಪಿಸಿಕೊಡುವಂತೆ ಅಮೀರ್ ಖಾನ್ ಅನ್ನು ಕೇಳಿದೆವು, ಅವರೂ ಸಹ ಸರಿ ಎಂದಿದ್ದರು. ಆದರೆ ನಂತರ ನಮ್ಮ ಕರೆಗಳನ್ನು ಸ್ವೀಕರಿಸುವುದು ಬಿಟ್ಟುಬಿಟ್ಟರು. ಜೊತೆಗೆ ಕೊರೊನಾ ಕಾರಣದಿಂದಾಗಿ ದುಡಿಮೆಯೂ ನಿಂತು ಬಿಟ್ಟಿತ್ತು. ಇದೆಲ್ಲವೂ ಅಣ್ಣನ ಆರೋಗ್ಯದ ಮೇಲೆ ಇನ್ನೂ ಹೆಚ್ಚಿನ ಪರಿಣಾಮ ಬೀರಿತು ಎಂದಿದ್ದಾರೆ ಅನುರಾಗ್ ಶ್ಯಾಮ್. ನಟ ಅನುಪಮ್ ಶ್ಯಾಮ್ ಹಲವು ವರ್ಷಗಳಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಲಗಾನ್', 'ದಿಲ್ ಸೇ', 'ಬ್ಯಾಂಡಿಟ್ ಕ್ವೀನ್' ಇನ್ನೂ ಹಲವು ಸಿನಿಮಾಗಳಲ್ಲಿ ಅನುಪಮ್ ಶ್ಯಾಮ್ ನಟಿಸಿದ್ದಾರೆ.

  English summary
  Actor Anupam Shyam died recently. Now his brother Anurag Shyam talked to media and said Aamir Khan promised us to help but he did not received our calls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X