1000 ಕೋಟಿಯ 'ಮಹಾಭಾರತ'ಕ್ಕೆ ಅಮೀರ್ ಖಾನ್ ಹಾಕಿದ್ರು ಬ್ರೇಕ್.!
ಅಮೀರ್ ಖಾನ್ ಅವರ ಕನಸಿನ ಚಿತ್ರ 'ಮಹಾಭಾರತ' ಚಿತ್ರವನ್ನ ನಿಲ್ಲಿಸಲಿದ್ದಾರೆ ಎಂಬ ಸುದ್ದಿ ಈಗ ಚಿತ್ರಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ. 1000 ಕೋಟಿ ಬಜೆಟ್ ನಲ್ಲಿ ಅಮೀರ್ ನಟನೆ ಮತ್ತು ನಿರ್ದೇಶನ ಮಾಡಬೇಕೆಂದುಕೊಂಡಿದ್ದ ಮೆಗಾ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಎಲ್ಲ ಪ್ರಿ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದೆ ಎನ್ನಲಾಗಿತ್ತು.
ಈ ಮಧ್ಯೆ ಈ ಸಿನಿಮಾ ಆಗೋದು ಅನುಮಾನವೆನ್ನಲಾಗುತ್ತಿದೆ. ಹೌದು, ಸ್ವತಃ ಅಮೀರ್ ಖಾನ್ ಈ ಪ್ರಾಜೆಕ್ಟ್ ನ್ನ ನಿಲ್ಲಿಸಲು ಮುಂದಾಗಿದ್ದಾರಂತೆ. ಈ ಸಿನಿಮಾಗಾಗಿ ಅಗತ್ಯವಿರುವ ದೊಡ್ಡ ಮೊತ್ತ ಹಾಗೂ ಅದಕ್ಕೆ ಬೇಕಾಗುವ ಸಮಯನ್ನ ಪರಿಗಣಿಸಿ ಈ ಚಿತ್ರವನ್ನ ಕೈಬಿಡಲು ನಿರ್ಧರಿಸಲಾಗಿದೆಯಂತೆ.
ಅಂದ್ಹಾಗೆ, 'ಮಹಾಭಾರತ' ಚಿತ್ರವನ್ನ 1000 ಕೋಟಿ ಬಜೆಟ್ ಹಾಕಿ, ಮೂರು ಭಾಗಗಳಾಗಿ ತೆರೆಗೆ ತರಲು ಚಿಂತಿಸಲಾಗಿತ್ತು. ಮುಂಬೈನ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ ಎಂಬ ಸುದ್ದಿ ಇತ್ತು. ನಂತರ ಚೀನಾದ ದೊಡ್ಡ ಕಂಪನಿಯೊಂದು ಈ ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾಯಿತು. ಆದ್ರೀಗ, ಹಣದ ಸಮಸ್ಯೆ ಎದುರಾಗಬಹುದು ಎಂಬ ಕಾರಣದಿಂದಲೇ ಪ್ರಾಜೆಕ್ಟ್ ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಈ ಸಿನಿಮಾಗಾಗಿ ಸುಮಾರು ಐದು ವರ್ಷ ಸಮಯ ಬೇಕಾಗುತ್ತೆ. ಈ ಮಧ್ಯೆ ಮೂರ್ನಾಲ್ಕು ಸಿನಿಮಾಗಳನ್ನ ಮಾಡುವ ಅವಕಾಶವನ್ನ ಮಿಸ್ ಮಾಡಿಕೊಳ್ಳಬೇಕಾಗುತ್ತೆ ಎಂಬ ಆಲೋಚನೆಯೂ ಕಾಡಿದೆಯಂತೆ.ಇಷ್ಟೇ ಅಲ್ಲದೇ 'ಬಾಹುಬಲಿ' ಖ್ಯಾತಿ ನಟ ಪ್ರಭಾಸ್ ಅವರನ್ನ ಕೂಡ ಈ ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ಮಾಡಲಾಗಿದೆಯಂತೆ.
ಇಷ್ಟೆಲ್ಲಾ ಸುದ್ದಿ ಮಾಡಿದ್ದ ಈ ಸಿನಿಮಾ ಸೆಟ್ಟೇರಲ್ಲ ಅಂದ್ರೆ ಇದು ನಿಜಕ್ಕೂ ಬಾಲಿವುಡ್ ಗೆ ದೊಡ್ಡ ನಿರಾಸೆಯಾಗಲಿದೆ. ಸದ್ಯಕ್ಕೆ ನವೆಂಬರ್ 7 ರಂದು ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ಫಾತೀಮಾ ಸನಾ ಖಾನ್ ಅಭಿನಯದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications