ನಿದ್ದೆಯಿಂದ ಎದ್ದು ಆಪರೇಷನ್ ಸಿಂಧೂರ್ ಬಗ್ಗೆ ಕೊನೆಗೂ ಮಾತನಾಡಿದ ಆಮಿರ್ ಖಾನ್, ಭುಗಿಲೆದ್ದ ಆಕ್ರೋಶ..!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯರ ಪ್ರಾಣವನ್ನು ಬಲಿ ಪಡೆದ ಭಯೋತ್ಫಾದಕರ ವಿರುದ್ಧ, ಭಾರತ ನಡೆಸಿದ ಮಹತ್ವದ ಕಾರ್ಯಾಚರಣೆ ಆಪರೇಷನ್ ಸಿಂಧೂರ್ ಕುರಿತು ಆ ಭಾಷೆ ಈ ಭಾಷೆ ಎನ್ನದೇ ಚಿತ್ರರಂಗದ ಹಲವಾರು ತಾರೆಯರು ಮಾತನಾಡಿದ್ದಾರೆ. ಭಾರತದ ವೀರ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಕ್ರಮಕ್ಕೆ ಹಲವಾರು ಜನ ಮೆಚ್ಚುಗೆ ಸೂಚಿಸಿದ್ದಾರೆ.

ನಮ್ಮ ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ಅವರನ್ನೊಳಗೊಂಡಂತೆ ಹಲವಾರು ಜನದೇಶದ ಜೊತೆ ನಾವು ಇದ್ದೇವೆ ಎನ್ನುವ ಸ್ಪಷ್ಟವಾದ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಪತ್ರವನ್ನು ಕೂಡ ಬರೆದಿದ್ದಾರೆ.ವಿಶ್ವಮ್ಯಾಪ್‌ನಲ್ಲಿಯೇ ಪಾಕಿಸ್ತಾನ ಇರಬಾರದು ಆ ತರಹದ ಪಾಠವನ್ನು ಪಾಕಿಸ್ತಾನಕ್ಕೆ ಭಾರತ ಕಲಿಸಬೇಕೆಂದು ಆಗ್ರಹಿಸಿದ್ದಾರೆ.

Aamir Khan Faces Backlash Over Operation Sindoor Remark Netizens Ask Where Were You

ಆದರೆ.. ಇಲ್ಲಿಯವರೆಗೆ ಈ ವಿಚಾರದ ಕುರಿತು ಕೆಲವರು ಮೌನ ವಹಿಸಿದ್ದಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಮೌನಕ್ಕೆ ಶರಣಾದವರ ಸಂಖ್ಯೆ ಹೆಚ್ಚಿದೆ. ಆ ಪೈಕಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಕೂಡ ಒಬ್ಬರು.

ಹೌದು, ಆಪರೇಷನ್ ಸಿಂಧೂರ್ ಕುರಿತು ಎಲ್ಲರೂ ಮಾತನಾಡುತ್ತಿದ್ದರು ಕೂಡ ಆಮಿರ್ ಖಾನ್ ಸುಮ್ಮನಾಗಿದ್ದರು. ಅವರ ಈ ಮೌನಕ್ಕೆ ಕಾರಣ ಅವರಿಗೆ ಗೊತ್ತಾದರೂ ಆಮಿರ್ ಖಾನ್ ಕುರಿತು ಸೋಶಿಯಲ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಆಮಿರ್ ಖಾನ್ ದೇಶಾಭಿಮಾನದ ಕುರಿತು ಚರ್ಚೆ ನಡೆಯುತ್ತಿತ್ತು. ಅಸಹನೆ, ಅಸಮಾಧಾನದ ಎಲೆ ಎದ್ದಿತ್ತು.

ಹೀಗಿರುವಾಗ ಇದೀಗ ಕದನ ವಿರಾಮ ಘೋಷಿಸಿದ ನಂತರ ಆಮಿರ್ ಖಾನ್ ಮಾತನಾಡಿದ್ದಾರೆ. ಈ ಕುರಿತು ಆಮಿರ್ ಖಾನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ''ಆಪರೇಷನ್ ಸಿಂಧೂರ್‌ ನ ವೀರರಿಗೆ ನನ್ನ ನಮನಗಳು. ನಮ್ಮ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ಅಚಲ ಬದ್ಧತೆಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ಸಂಕಲ್ಪಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ''. 'ಜೈ ಹಿಂದ್' ಎಂದಿದ್ದಾರೆ.

ಆಮಿರ್ ಖಾನ್ ಅವರ ಈ ಮಾತುಗಳಿಗೆ ಕೂಡ ಈಗ ಆಕ್ರೋಶ ವ್ಯಕ್ತವಾಗುತ್ತಿದೆ. ಆಪರೇಷನ್ ಸಿಂಧೂರ್ ಕುರಿತು ಮೆಚ್ಚುಗೆಯ ಮಾತುಗಳನ್ನು ಆಮಿರ್ ಖಾನ್ ಹೇಳಿದ್ದರು ಕೂಡ ಅನೇಕರು ಆಮಿರ್ ಖಾನ್ ವಿರುದ್ದ ಕೆಂಡ ಕಾರುತ್ತಿದ್ದಾರೆ. ಇಷ್ಟು ದಿನ ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ನಿದ್ದೆ ಮಾಡುತ್ತಿದ್ರಾ ಎಂದು ಕಾಲೆಳೆಯುತ್ತಿದ್ದಾರೆ.

ಮಾತನಾಡದೇ ಇದ್ದರೆ ತಮ್ಮ ಸಿತಾರೆ ಜಮೀನ್ ಪರ ಚಿತ್ರವನ್ನು ಜನ ಬಹಿಷ್ಕಾರ ಮಾಡುತ್ಥಾರೆ ಎನ್ನುವ ಭಯದಲ್ಲಿ ಆಮಿರ್ ಖಾನ್ ಮಾತನಾಡಿದ್ದಾರೆ ಎನ್ನುವ ಅಭಿಪ್ರಾಯವನ್ನು ಕೂಡ ಹಲವಾರು ಜನ ವ್ಯಕ್ತಪಡಿಸಿದ್ದಾರೆ. ಆಮಿರ್ ಖಾನ್ ದೇಶ ವಿರೋಧಿ, ಆಪರೇಷನ್ ಸಿಂಧೂರ್ ಕುರಿತು ಮಾತನಾಡಿದರೂ ಕೂಡ ಆಮಿರ್ ಖಾನ್ ಅಭಿನಯದ ಚಿತ್ರಗಳನ್ನು ನೋಡಬೇಡಿ ಬಹಿಷ್ಕರಿಸಿ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕರೆಯನ್ನು ಕೊಡುತ್ತಿದ್ದಾರೆ. ಟ್ರೋಲಿಗರು ಈ ವಿಚಾರದಲ್ಲಿ ಆಮಿರ್ ಖಾನ್ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಅಂದ್ಹಾಗೇ ಆಪರೇಷನ್ ಸಿಂಧೂರ್ ಕುರಿತು ಆಮಿರ್ ಖಾನ್ ಐದು ದಿನಗಳ ನಂತರವಾದರೂ ಕೂಡ ಮಾತನಾಡಿದ್ಧಾರೆ. ಆದರೆ ಶಾರುಖ್ ಖಾನ್ ಇನ್ನು ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಶಾಂತಿಯ ಮಂತ್ರವನ್ನು ಪಠಿಸಿ ಟ್ರೋಲ್ ಆದ ನಂತರ ಸಲ್ಮಾನ್ ಖಾನ್ ತಮ್ಮ ಫೋಸ್ಟ್ ಡಿಲೀಟ್ ಮಾಡಿದ್ದಾರೆ. ಕೇವಲ ಇವರಷ್ಟೇ ಅಲ್ಲ ಅಜಯ್ ದೇವಗನ್, ಐಶ್ವರ್ಯ ಸೇರಿ ಇನ್ನು ಕೆಲವರು ತಾರೆಯರು ಆಪರೇಷನ್ ಸಿಂಧೂರ್ ಕುರಿತು ಇಲ್ಲಿಯವರೆಗೆ ಒಂದು ಮಾತನ್ನು ಕೂಡ ಮಾತನಾಡಿಲ್ಲ.

More from Filmibeat

English summary
Aamir Khan recently made a statement about Operation Sindoor, which led to widespread backlash online. Many social media users criticized him and questioned his previous silence, repeatedly asking, “Where were you?”
Read more about: aamir khan kashmir
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X