ಬೆಂಗಳೂರಿನ ಚೆಲುವೆ ಜೊತೆ ಅಮೀರ್ ಖಾನ್ ಅಫೇರ್, 59ನೇ ವಯಸ್ಸಿನಲ್ಲಿ 3ನೇ ಮದ್ವೆಗೆ ರೆಡಿಯಾದ ಸೂಪರ್ ಸ್ಟಾರ್..!

ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ದಾಂಪತ್ಯ ಜೀವನ ಮುರಿದು ಬೀಳುತ್ತೆ.

ಇನ್ನೂ ಕೆಲವೊಮ್ಮೆ ಅಷ್ಟೇ ವೇಗದಲ್ಲಿ ಮತ್ತೊಬ್ಬರ ಮೇಲೆ ಪ್ರೇಮಾಂಕುರವೂ ಆಗುತ್ತೆ. ಹೊಸ ವ್ಯಕ್ತಿಯ ಪ್ರವೇಶದಿಂದ ಬದುಕಿನಲ್ಲಿ ಮತ್ತೊಮ್ಮೆ ಹೊಸ ಉಲ್ಲಾಸ ಹುಮ್ಮಸ್ಸು ಮೂಡುತ್ತೆ. ಅಮೀರ್ ಖಾನ್‌ಗೆ ಕೂಡ ಇಂತಹದ್ದೇ ಅನುಭವ ಆಗುತ್ತಿದೆಯಾ ಗೊತ್ತಿಲ್ಲ. ಆದರೆ, ಅಮೀರ್ ಖಾನ್ ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಅಖಂಡ ಮುಂಬೈ ಸದ್ಯ ಮಾತನಾಡಿಕೊಳ್ಳುತ್ತಿದೆ.

Aamir Khan finds love again with a Bangalore woman after Reena Dutta and Kiran Rao

ಹೌದು, ಅಮೀರ್ ಖಾನ್‌ಗೆ ಈಗ 59ರ ಹರೆಯ. ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರದ ಸುಖ ದುಃಖಗಳನ್ನು ಅಮೀರ್ ಖಾನ್ ಅನುಭವಿಸಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎದೆಯೆತ್ತರಕ್ಕೆ ಬೆಳೆದಿದ್ದಾರೆ.

ಆ ಪೈಕಿ ಜುನೈದ್ ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ಇರಾ ಮದುವೆಯಾಗಿ ಮನೆ ಗಂಡ ಎಂದು ನೆಮ್ಮದಿಯಿಂದ ಇದ್ದಾರೆ. ಇನ್ನು ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗ ಅಮೀರ್ ಖಾನ್‌ಗೆ ಇದ್ದಾನೆ. ಹೀಗಿರುವಾಗ ಇದೀಗ ಅಮೀರ್ ಖಾನ್ ತಮ್ಮ 59ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಲು ಅಣಿಯಾದಂತೆ ಇದೆ. ಇಂತಹದ್ದೊಂದು ಅನುಮಾನ ಅನೇಕರನ್ನು ಈಗ ಕಾಡುತ್ತಿದೆ.

ಹೌದು ಅಸಲಿಗೆ ಅಮೀರ್ ಖಾನ್ ಹೆಸರು ಹಿಂದೆ ದಂಗಲ್ ಚಿತ್ರದ ನಾಯಕಿ ಫಾತಿಮಾ ಸನಾ ಶೇಖ್ ಜೊತೆ ಥಳುಕು ಹಾಕಿಕೊಂಡಿತ್ತು. ಕಿರಣ್ ರಾವ್ ಅವರಿಂದ ಅಮೀರ್ ದೂರವಾಗಲು ಇದೇ ಕಾರಣವೆಂದು ಕೂಡ ಹೇಳಲಾಗಿತ್ತು. ಹೀಗಾಗಿಯೇ ಫಾತಿಮಾ ಸನಾ ಶೇಖ್ ಅವರ ಜೊತೆ ಅಮೀರ್ ಮದುವೆಯಾಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅಮೀರ್ ಖಾನ್ ಮದುವೆಯಾಗಲು ಸಿದ್ಧವಾಗಿರುವುದು ಫಾತಿಮಾ ಸನಾ ಶೇಖ್ ಅವರ ಜೊತೆ ಅಲ್ಲ ಬದಲಿಗೆ ಬೆಂಗಳೂರಿನ ಚೆಲುವೆಯ ಜೊತೆ ಎನ್ನುವುದೇ ಮುಂಬೈನಲ್ಲಿ ಈ ಕ್ಷಣಕ್ಕೆ ಪ್ರಸಾರವಾಗುತ್ತಿರುವ ಮತ್ತೊಂದು ಬ್ರೇಕಿಂಗ್ ನ್ಯೂಸ್.

ಕಿರಣ್ ರಾವ್ ಅವರಿಂದ ದೂರವಾಗಿರುವ ಅಮೀರ್ ಖಾನ್ ಈ ಬಾರಿ ಬೆಂಗಳೂರಿನ ಬೆಡಗಿಯ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ. ಆ ಬೆಡಗಿ ಯಾರು..? ಬೆಂಗಳೂರಿನಲ್ಲಿ ಇರುವುದು ಎಲ್ಲಿ ? ಅಮೀರ್ ಖಾನ್ ಮತ್ತು ಈ ಚೆಲುವೆ ಮೊದಲು ಭೇಟಿಯಾಗಿದ್ದು ಎಲ್ಲಿ ? ಹೀಗೆ ಹಲವಾರು ಪ್ರಶ್ನೆಗಳಿಗೆ ಇನ್ನು ಉತ್ತರ ಸಿಗಬೇಕಿದೆ ಆದರೂ ಅಮೀರ್ ಖಾನ್ ತೀರಾ ಇತ್ತೀಚೆಗೆ ತಮ್ಮ ಹೊಸ ಪ್ರಿಯತಮೆಯನ್ನು ತನ್ನ ಇಬ್ಬರು ಮಾಜಿ ಪತ್ನಿಯರಿಗೆ ಮತ್ತು ತಮ್ಮ ಮೂವರು ಮಕ್ಕಳಿಗೆ ಪರಿಚಯಿಸಿದ್ದಾರೆ, ಎಲ್ಲರೂ ಜೊತೆಯಲ್ಲಿಯೇ ಕುಳಿತು ಭರ್ಜರಿ ಭೋಜನವನ್ನು ಮಾಡಿದ್ದಾರೆ ಎಂದು ಫಿಲ್ಮ್‌ ಫೇರ್ ವರದಿ ಮಾಡಿದೆ. ಅಮೀರ್ ಖಾನ್ ಅವರ ಅತ್ಯಾಪ್ತ ವ್ಯಕ್ತಿಯೇ ಈ ಸುದ್ದಿಯನ್ನು ಖಚಿತ ಪಡಿಸಿದ್ದು ಕುಟುಂಬದ ಖಾಸಗಿತನವನ್ನು ಗಮನದಲ್ಲಿಟ್ಕೊಂಡು ನಾನು ಆ ಹುಡುಗಿಯ ಹೆಸರು ಹಿನ್ನೆಲೆ ಹೇಳಲಾರೆ ಎಂದು ವ್ಯಕ್ತಿ ಹೇಳಿದ್ದಾರೆ ಎಂದು ಫಿಲ್ಮ್ ಫೇರ್ ಪ್ರಕಟಿಸಿದೆ. ಸದ್ಯ ಈ ಸುದ್ದಿ ಬಾಲಿವುಡ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

More from Filmibeat

Read more about: aamir khan marriage bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X