ಕೂಲಿ ವಿವಾದ ; ಆಮಿರ್ ಖಾನ್ ಮನೆಗೆ ಓಡೋಡಿ ಬಂದ ಗೌರಿ, ಹೊಸ ಗರ್ಲ್‌ಫ್ರೆಂಡ್ ಮೇಲೀಗ ಎಲ್ಲರ ಚಿತ್ತ
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ಆ ನಂತರ ಮತ್ತೆ ಮದುವೆಯಾಗುತ್ತಾರೆ. ಮತ್ತೊಂದು ಸಂಬಂಧ ಬೆಳೆಸುತ್ತಾರೆ ಉದಾಹರಣೆಗೆ ಆಮಿರ್ ಖಾನ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳಿಂದ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ. ಆಮಿರ್ ಖಾನ್ ಹೃದಯ ಕದ್ದ ಚಂದ್ರಚಕೋರಿ ಬೆಂಗಳೂರಿನವರು ಎನ್ನುವುದು ಕೂಡ ಜಗಜ್ಜಾಹೀರಾಗಿದೆ. ಆ ಚೆಲುವೆಯ ಹೆಸರು ಗೌರಿ ಎಂದು ಕೂಡ ಎಲ್ಲರಿಗೆ ಗೊತ್ತಾಗಿದೆ.ಬಹುತೇಕರು ಈ ವಿಚಾರವನ್ನು ಮರೆತು ಕೂಡ ಆಗಿದೆ.
ಆದರೆ ಇದೇ ಸಮಯದಲ್ಲಿ ಖುದ್ದು ಆಮೀರ್ ಮತ್ತು ಗೌರಿ ತಮ್ಮ ಸಂಬಂಧದ ಕುರಿತು ಮತ್ತೊಮ್ಮೆ ಸಾರ್ವತ್ರಿಕ ವಲಯದಲ್ಲಿ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಇಬ್ಬರು ಹಲವು ಬಾರಿ ಜೊತೆಯಲ್ಲಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಖುದ್ದು ಆಮಿರ್ ಖಾನ್ ತಮ್ಮ ಸಂಬಂಧದ ಕುರಿತು ಸ್ಪಷ್ಟನೆಯನ್ನು ನೀಡಿರುವ ಹಿನ್ನೆಲೆ ಹಲವರ ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕಿದೆ. ಹೀಗಿರುವಾಗ ಇದೀಗ ಆಮೀರ್ ಖಾನ್ ಮನೆಗೆ ಗೌರಿ ಓಡೋಡಿ ಬಂದಿರುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಅಸಲಿಗೆ ಆಮಿರ್ ಖಾನ್ ಕುರಿತು ಕಳೆದ ಕೆಲ ದಿನಗಳಿಂದ ಸುಳ್ಳು ಸುದ್ದಿಯೊಂದು ಚಾಲ್ತಿಯಲ್ಲಿದೆ. ರಜನಿಕಾಂತ್ ಅಭಿನಯದ ''ಕೂಲಿ'' ಚಿತ್ರಕ್ಕೆ ಸಂಬಂಧಿಸಿದ ಸುದ್ದಿ ಅದು. ''ಕೂಲಿ'' ಚಿತ್ರದಲ್ಲಿ ಆಕ್ಟ್ ಮಾಡಿ ತಪ್ಪು ಮಾಡಿದೆ ಎಂದು ಆಮೀರ್ ಹೇಳಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದ್ದಾರೆ.
ಆದರೆ ವಾಸ್ತವದಲ್ಲಿ ಆಮಿರ್ ಖಾನ್ ಹಾಗೇ ಹೇಳಿಯೇ ಇಲ್ಲ. ಖುದ್ದು ಆಮಿರ್ ಖಾನ್ ತಂಡ ಈ ಕುರಿತು ಸ್ಪಷ್ಟನೆಯನ್ನು ಕೂಡ ನೀಡಿದೆ. ಆದರೂ ಕೂಡ ಹಲವರು ಈ ವಿಚಾರ ಒಪ್ಪಲು ತಯಾರಿಲ್ಲ. ಬದಲಿಗೆ ಆಮಿರ್ ಖಾನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹೀಗಿರುವಾಗ ಇದೀಗ ಆಮಿರ್ ಖಾನ್ ಅವರ ಹೊಸ ಪ್ರೇಯಸಿ ಗೌರಿ ಆತುರಾತುರವಾಗಿ ಆಮಿರ್ ಖಾನ್ ಮನೆಗೆ ಬಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ಗೌರಿ ಏಕಾಏಕಿ ಆಮಿರ್ ಖಾನ್ ಮನೆಗೆ ಬಂದಿದ್ದೇಕೆ ಎನ್ನುವ ಪ್ರಶ್ನೆಗೆ ಸದ್ಯ ಉತ್ತರ ಇಲ್ಲವಾದರು ಕೂಡ ಹಲವರು ''ಕೂಲಿ'' ಕುರಿತು ಹರಿಬಿಡಲಾದ ಸುಳ್ಳು ಸುದ್ದಿಯ ಕುರಿತು ಚರ್ಚೆ ಮಾಡಲು ಆಮಿರ್ ಮನೆಗೆ ಗೌರಿ ಬಂದಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಸೊಶಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ಮನೆಗೆ ಗೌರಿ ಬಂದಿರುವ ವಿಡಿಯೋವನ್ನು ಕೂಡ ವೈರಲ್ ಮಾಡುತ್ತಿದ್ದಾರೆ.
ಅಂದ್ಹಾಗೇ ''ಕೂಲಿ'' ಚಿತ್ರಕ್ಕೆ ಸಂಬಂಧಿಸಿದಂತೆ ಆಮಿರ್ ಖಾನ್ ತಂಡ ಪ್ರತಿಕ್ರಿಯೆಯನ್ನು ನೀಡಿದ್ದು, ಆಮಿರ್ ಖಾನ್ ಇನ್ನೂ ಚಿತ್ರವನ್ನು ನೋಡಿಲ್ಲ.. ಚಿತ್ರದ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ಕೂಡ ನೀಡಿಲ್ಲ.. ಎಂದು ಹೇಳಿದೆ. ಹರಡಿರುವ ಸುಳ್ಳು ಸುದ್ದಿಯನ್ನು ನಂಬದಂತೆ ಮನವಿಯನ್ನು ಕೂಡ ಮಾಡಿಕೊಂಡಿದೆ. ಸದ್ಯದಲ್ಲೇ ''ಕೂಲಿ'' ಚಿತ್ರವನ್ನು ಆಮಿರ್ ಖಾನ್ ನೋಡಲಿದ್ದಾರೆ ಎಂದು ಸ್ಪಷ್ಟನೆಯನ್ನು ಕೂಡ ನೀಡಿದೆ.


Click it and Unblock the Notifications











