For Quick Alerts
  ALLOW NOTIFICATIONS  
  For Daily Alerts

  ಕಾರ್ಗಿಲ್‌ಗೆ ತೆರಳುತ್ತಿದ್ದಾರೆ ನಟ ಅಮೀರ್ ಖಾನ್

  |

  'ಕಾರ್ಗಿಲ್' ಸುಲಭಕ್ಕೆ ನೆನಪಿನಿಂದ ಮಾಸುವ ಹೆಸರಲ್ಲ. 1999 ರಲ್ಲಿ ಭಾರತ-ಪಾಕಿಸ್ತಾನ ನಡುವೆ ಭೀಕರ ಯುದ್ಧಕ್ಕೆ ಸಾಕ್ಷಿಯಾದ ಸ್ಥಳ ಕಾರ್ಗಿಲ್. ಪಾಕಿಸ್ತಾನ ಸೈನ್ಯವನ್ನು ಭಾರತೀಯ ವೀರಯೋಧರು ಸೆದೆಬಡಿದು ಹಿಮ್ಮೆಟ್ಟಿಸಿದ್ದಕ್ಕೆ ಸಾಕ್ಷಿಯಾದ ಸ್ಥಳವದು ಕಾರ್ಗಿಲ್.

  ಕಾರ್ಗಿಲ್ ಯುದ್ಧ ನಡೆದ ಸ್ಥಳಕ್ಕೆ ತೆರಳುತ್ತಿರುವ ನಟ ಅಮೀರ್ ಖಾನ್, ಅಲ್ಲಿ ಸಿನಿಮಾದ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ. ಕೆಲವೇ ದಿನಗಳಲ್ಲಿ ಅಮೀರ್ ಖಾನ್ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಚಿತ್ರೀಕರಣ ನಡೆಸಲಿದ್ದಾರೆ.

  ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಕಾರ್ಗಿಲ್ ಯುದ್ಧದ ಸನ್ನಿವೇಶಗಳಿದ್ದು, ಆ ಸನ್ನಿವೇಶಗಳನ್ನು ಅದೇ ಕಾರ್ಗಿಲ್‌ನಲ್ಲಿಯೇ ಚಿತ್ರೀಕರಣ ಮಾಡಲು ಅಮೀರ್ ಖಾನ್ ಇಚ್ಛಿಸಿದ್ದಾರೆ. ಹಾಗಾಗಿ ಕೆಲವೇ ದಿನಗಳಲ್ಲಿ ಅಮೀರ್ ಖಾನ್ ಹಾಗೂ 'ಲಾಲ್ ಸಿಂಗ್ ಛಡ್ಡಾ' ಚಿತ್ರತಂಡ ಕಾರ್ಗಿಲ್‌ಗೆ ತೆರಳಲಿದೆ.

  ಕಾರ್ಗಿಲ್ ಪ್ರದೇಶದಲ್ಲಿ ಪ್ರಸ್ತುತ ಮಂಜು ಸುರಿಯುತ್ತಿದ್ದು, ಅದು ಕಡಿಮೆ ಆದ ಕೂಡಲೇ ಚಿತ್ರತಂಡ ಕಾರ್ಗಿಲ್‌ಗೆ ತೆರಳಲಿದೆ. 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಕಾರ್ಗಿಲ್‌ನಲ್ಲಿಯೇ ನಡೆಯಲಿದ್ದು, ಆ ನಂತರ ಪೋಸ್ಟ್ ಪ್ರೊಡಕ್ಷನ್‌ಗೆ ಹೋಗಲಿದೆ ಸಿನಿಮಾ.

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟಿಸಿದ್ದಾರೆ. 'ಫಾರೆಸ್ಟ್ ಗಂಪ್' ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಇದೇ ಕಾದಂಬರಿ ಆಧರಿಸಿ ಇದೇ ಹೆಸರಿನಲ್ಲಿ ಹಾಲಿವುಡ್‌ನಲ್ಲಿ ಸಿನಿಮಾ ಒಂದು ಬಿಡುಗಡೆ ಆಗಿ ಆಸ್ಕರ್ ಸಹ ಗಳಿಸಿತ್ತು.

  ಶಿವಣ್ಣನ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಧ್ರುವ ಸರ್ಜಾ | Filmibeat Kannada

  ಲಾಲ್‌ ಸಿಂಗ್ ಛಡ್ಡಾ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲಿವುಡ್‌ನ ಮೂವರು ಖಾನ್‌ ಗಳಾದ, ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಒಟ್ಟಿಗೆ ನಟಿಸುತ್ತಿದ್ದಾರೆ. ಸಲ್ಮಾನ್ ಹಾಗೂ ಶಾರುಖ್ ಅವರುಗಳು ಅತಿಥಿ ಪಾತ್ರದಲ್ಲಿ ಮಾತ್ರವೇ ನಟಿಸಲಿದ್ದಾರೆ.

  English summary
  Actor Aamir Khan going to Kargil to shoot Lal Singh Chaddha movie. This will be the last schedule of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X