ಸಿನಿಮಾ ತಡವಾದರೆ 8 ಕೋಟಿ ರೂ. ದಂಡ ಕಟ್ಟಬೇಕೆಂದು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದ ಆಮೀರ್

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರ ಆತ್ಮಚರಿತ್ರೆ ಬಿಡುಗಡೆಯಾಗಿದೆ. 'ದಿ ಸ್ಟ್ರೇಂಜರ್ ಇನ್ ದಿ ಮಿರರ್' ಆತ್ಮಚರಿತ್ರೆಯಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಬಹಿರಂಗಗೊಂಡಿದೆ. ಓಂ ಪ್ರಕಾಶ್ ಮೆಹ್ರಾ ಅವರ ರೋಚಕ ಸಿನಿಪಯಣವನ್ನು ವಿವರಸಿದ್ದಾರೆ.

ಇದರಲ್ಲಿ ಬಾಲಿವುಡ್ ಖ್ಯಾತ ನಟ, ಮಿಸ್ಟರ್ ಪರ್ಫೆಕ್ಷನ್ ಅಂತಾನೆ ಕರೆಸಿಕೊಳ್ಳುವ ಆಮೀರ್ ಖಾನ್ ಬಗ್ಗೆಯೂ ಬರೆಯಲಾಗಿದೆ. ಆಮೀರ್ ಖಾನ್ ಸಿನಿಮಾ ತಡವಾದರೆ 8 ಕೋಟಿ ರೂ. ದಂಡ ಕೊಡಬೇಕು ಎಂದು ನಿರ್ದೇಶಕ ಓಂ ಪ್ರಕಾಶ್ ಮೆಹ್ರಾ ಅವರಿಗೆ ಎಚ್ಚರಿಕೆ ನೀಡಿದ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.

ಆಮೀರ್ ಖಾನ್ ಜೊತೆ ಓಂ ಪ್ರಕಾಶ್ ಮೆಹ್ರಾ 'ರಂಗ್ ದೇ ಬಸಂತಿ' ಸಿನಿಮಾ ಮಾಡಿದ್ದರು. 2006ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಬಾಕ್ಸ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿದ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಆಮೀರ್ ದಲ್ಜಿಂತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದರು.

Aamir Khan Had Warned Of Charging Rs 8 Cr As Fine While Doing Rang De Basanti says Rakeysh Omprakash Mehra

ರಂಗ್ ದೇ ಬಸಂತಿ ಸಿನಿಮಾದ ಚಿತ್ರೀಕರಣ ಎಲ್ಲಾ ಸರಿಯಾಗಿ ನಡೆಯುತ್ತಿದ್ದರೂ ಆಮೀರ್ ಖಾನ್‌ಗೆ ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತಾ ಎನ್ನುವ ಭಯ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ಕಾಡುತ್ತಿತ್ತು ಎಂದು ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಆಮೀರ್ ಖಾನ್ ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಸಿನಿಮಾ ವಿಚಾರಲ್ಲಿ, ಡೇಟ್ ಫಿಕ್ಸ್ ಮಾಡುವ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್. ಈ ಅನುಭವ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಮೆಹ್ರಾ ಅವರಿಗೂ ಆಗಿದೆ. ನಿಗದಿಯಾದ ದಿನಾಂಕಕ್ಕೆ ಸಿನಿಮಾ ಚಿತ್ರೀಕರಣ ಮುಗಿಸದಿದ್ದರೆ ಡಬಲ್ ಹಣ ಕೊಡಬೇಕಾಗುತ್ತೆ ಎಂದು ಆಮೀರ್ ಷರತ್ತು ಹಾಕಿದ್ದರಂತೆ.

ಈ ಬಗ್ಗೆ ಹೇಳಿರುವ ಮೆಹ್ರಾ "ಆಮೀರ್ ಖಾನ್ ಸಿನಿಮಾಗೆ ಸಹಿ ಮಾಡುವಾಗ ಷರತ್ತು ಕೂಡ ಸೇರಿಸುತ್ತಾರೆ. ಒಂದು ವೇಳೆ ಅವರ ಸಂಭಾವನೆ 4 ಕೋಟಿ ರೂ. ಇದ್ದರೆ ನೀವು ನನಗೆ ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಅಥವಾ ಸರಿಯಾದ ಸಮಯಕ್ಕೆ ಚಿತ್ರೀಕರಣ ಮುಗಿಸದಿದ್ದರೆ ಡಬಲ್ ಅಂದರೆ 8 ಕೋಟಿ ರೂ. ಕೊಡಬೇಕಾಗುತ್ತೆ ಎಂದು ಹೇಳಿದ್ದರು. ನಾನು 8 ಕೋಟಿಯನ್ನು ನೋಡಿಯೇ ಇರಲಿಲ್ಲ. ಇದು ನನಗೆ ಬೇಗ ಸಿನಿಮಾ ಮುಗಿಸಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.

ಇನ್ನು ಆಮೀರ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ. ಆಮೀರ್ ಖಾನ್ ದೂರದೃಷ್ಟಿ ಇರುವ ವ್ಯಕ್ತಿ. ಸರಿ ಮತ್ತು ತಪ್ಪು ಎಲ್ಲವನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಒಂದು ವೇಳೆ ಚಿತ್ರಕ್ಕೆ 10 ದಿನಗಳ ಹೆಚ್ಚಿನ ಚಿತ್ರೀಕರಣ ಅವಶ್ಯಕತೆ ಇದ್ದರೆ ಒಪ್ಪಕೊಳ್ಳುತ್ತಾರೆ. ಆಮೀರ್ ಖಾನ್ ಅವರಿಗೆ ಸಿನಿಮಾ ವಿಚಾರದಲ್ಲಿರುವ ತಿಳುವಳಿಕೆಗೆ ಚಿತ್ರೋದ್ಯಮದಲ್ಲಿ ಯಾರು ಸಾಟಿ ಇಲ್ಲ ಎಂದು ಓಂ ಪ್ರಕಾಶ್ ಮೆಹ್ರಾ ಆತ್ಮಕಥೆಯಲ್ಲಿ ವಿವರಿಸಿದ್ದಾರೆ.

ಓಂ ಪ್ರಕಾಶ್ ಸದ್ಯ ತೂಫಾನ್ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಫರ್ಹಾನ್ ಅಖ್ತರ್ ನಾಯಕನಾಗಿ ನಟಿಸಿರುವ ತೂಫಾನ್ ಸಿನಿಮಾ ಇತ್ತೀಚಿಗಷ್ಟೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Actor Aamir Khan Had Warned Of Charging Rs 8 Cr As Fine While Doing Rang De Basanti says Rakeysh Omprakash Mehra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X