For Quick Alerts
  ALLOW NOTIFICATIONS  
  For Daily Alerts

  'ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ' ಎಂದು ಹೇಳಿ ಬೇಷರತ್ ಕ್ಷಮೆ ಕೇಳಿದ್ದ ಆಮೀರ್ ಖಾನ್

  |

  ಬಾಲಿವುಡ್ ನ ಖಾನ್ ತ್ರಯರಾದ ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಸದ್ಯ ಮೂವರು ಉತ್ತಮ ಸ್ನೇಹಿತರಾಗಿದ್ದಾರೆ. ಮೂವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಿದೆ. ಆದರೆ ಒಂದು ಕಾಲದಲ್ಲಿ ಈ ಮೂವರು ನಟರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ.

  ಒಂದು ಕಾಲದಲ್ಲಿ ಬಾಲಿವುಡ್ ಅಂದರೆ ಸಾಕು ಮೂವರು ಖಾನ್ ತ್ರಯರ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಮೂವರು ಸ್ಟಾರ್ ಕಲಾವಿದರ ಅಬ್ಬರ ಅಷ್ಟು ಜೋರಾಗಿತ್ತು. ಆದರೆ ಮೂವರು ಖಾನ್ ಗಳು ಮಾತ್ರ ಒಬ್ಬರ ಹೆಸರನ್ನು ಮತ್ತೊಬ್ಬರು ಹೇಳುತ್ತಿರಲಿಲ್ಲ. ಮೂವರು ಮೂಗು ಮುರಿದುಕೊಂಡು ಓಡಾಡುತ್ತಿದ್ದರು. ಅಷ್ಟರ ಮಟ್ಟಿಗೆ ವೈರಿಗಳಾಗಿದ್ದರು.

  ಅಮಿರ್ ಖಾನ್ ಜೊತೆ ನಟಿಸಿದ್ದ ನಟ ಇಂದು ಬೀದಿಯಲ್ಲಿ ತರಕಾರಿ ಮಾರುತ್ತಿದ್ದಾನೆಅಮಿರ್ ಖಾನ್ ಜೊತೆ ನಟಿಸಿದ್ದ ನಟ ಇಂದು ಬೀದಿಯಲ್ಲಿ ತರಕಾರಿ ಮಾರುತ್ತಿದ್ದಾನೆ

  ಆ ಸಮಯದಲ್ಲಿ ಆಮೀರ್ ಖಾನ್, ಶಾರುಖ್ ಖಾನ್ ಬಗ್ಗೆ ಹೇಳಿರುವ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಮಾಡಿತ್ತು. ಶಾರುಖ್ ಖಾನ್ ಅವರ ರಬ್ ನೇ ಬನಾದಿ ಜೋಡಿ ಮತ್ತು ಆಮೀರ್ ಖಾನ್ ಅವರ ಘಜ್ನಿ ಸಿನಿಮಾ ರಿಲೀಸ್ ಗೂ ಮೊದಲು ಆಮೀರ್ ಖಾನ್, ಶಾರುಖ್ ಖಾನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಶಾರುಖ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಮುಂದೆ ಓದಿ...

  ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ- ಆಮೀರ್ ಖಾನ್

  ಶಾರುಖ್ ಖಾನ್ ನನ್ನ ಕಾಲು ನೆಕ್ಕುತ್ತಿದ್ದಾನೆ- ಆಮೀರ್ ಖಾನ್

  ಆಮೀರ್ ಖಾನ್ ತನ್ನ ಬ್ಲಾಗ್ ನಲ್ಲಿ, 'ನಾನು ಮರದ ಕೆಳಗೆ ಕಣಿವೆ ಅಂಚಿನಲ್ಲಿ, ಸಮುದ್ರ ಮಟ್ಟದಿಂದ ಸುಮಾರು 5 ಸಾವಿರ ಅಡಿ ಎತ್ತರದಲ್ಲಿ ಕುಳಿತಿದ್ದೇನೆ. ಅಮ್ಮಿ, ಐರಾ ಮತ್ತು ಜುನೈದ್ ನನ್ನ ಪಕ್ಕಲ್ಲಿದ್ದಾರೆ. ನಾವು ನೆಚ್ಚಿನ ಬೋರ್ಡ್ ಆಟ ಆಡುತ್ತಿದ್ದೇವೆ. ಶಾರುಖ್ ನನ್ನ ಕಾಲುಗಳನ್ನು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ತಿನಿಸುತ್ತಿದ್ದೇನೆ. ನಾನು ಇನ್ನೇನು ಹೇಳಬಹುದು?' ಎಂದು ಬರೆದುಕೊಂಡಿದ್ದರು.

  ಆಮೀರ್ ಖಾನ್ ನಟನೆಯ 'ಪಿಕೆ' ಸಿನಿಮಾದ ಸೀಕ್ವಲ್ ಗೆ ತಯಾರಿ: ನಾಯಕ ಯಾರು?ಆಮೀರ್ ಖಾನ್ ನಟನೆಯ 'ಪಿಕೆ' ಸಿನಿಮಾದ ಸೀಕ್ವಲ್ ಗೆ ತಯಾರಿ: ನಾಯಕ ಯಾರು?

  ಆಮೀರ್ ಖಾನ್ ವಿರುದ್ಧ ರೊಚ್ಚಿಗೆದ್ದಿದ್ದ ಶಾರುಖ್ ಅಭಿಮಾನಿಗಳು

  ಆಮೀರ್ ಖಾನ್ ವಿರುದ್ಧ ರೊಚ್ಚಿಗೆದ್ದಿದ್ದ ಶಾರುಖ್ ಅಭಿಮಾನಿಗಳು

  ಸಾಮಾನ್ಯವಾಗಿ ಆಮೀರ್ ಖಾನ್ ವಿವಾದ ಮತ್ತು ಈ ರೀತಿಯ ಹೇಳಿಕೆಗಳಿಂದ ದೂರ ಇರುವವರು. ಆದರೆ ದಿಢೀರನೇ ಈ ಹೇಳಿಕೆ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆಮೀರ್ ಖಾನ್ ವಿರುದ್ಧ ಶಾರುಖ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದರು.

  ಸ್ಪಷ್ಟನೆ ನೀಡಿದ ಆಮೀರ್ ಖಾನ್

  ಸ್ಪಷ್ಟನೆ ನೀಡಿದ ಆಮೀರ್ ಖಾನ್

  ಈ ಘಟನೆ ಬಳಿಕ ಇಬ್ಬರು ಸ್ಟಾರ್ ನಟರ ನಡುವಿನ ಶೀತಲ ಸಮರ ಮತ್ತಷ್ಟು ಜಾಸ್ತಿಯಾಗಿತ್ತು. ಬಳಿಕ ಒಂದು ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಶಾರುಖ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದರು. ಕಳೆದ 20 ವರ್ಷಗಳಲ್ಲಿ ಶಾರುಖ್ ಖಾನ್ ವಿರುದ್ಧ ಒಂದು ಮಾತನ್ನು ಸಹ ಆಡಿಲ್ಲ ಎಂದು ಆಮೀರ್ ಖಾನ್ ಹೇಳಿದರು.

  ಅತಿ ಹೆಚ್ಚು ಫ್ಲಾಪ್ ಸಿನಿಮಾ ನೀಡಿದ ಬಾಲಿವುಡ್ ನಾಯಕ ನಟರುಅತಿ ಹೆಚ್ಚು ಫ್ಲಾಪ್ ಸಿನಿಮಾ ನೀಡಿದ ಬಾಲಿವುಡ್ ನಾಯಕ ನಟರು

  Yash Next Movie : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? | Filmibeat Kannada
  ಶಾರುಖ್ ಖಾನ್ ಎಂದರೆ ನಮ್ಮನೆ ನಾಯಿ ಎಂದಿದ್ದ ಆಮೀರ್

  ಶಾರುಖ್ ಖಾನ್ ಎಂದರೆ ನಮ್ಮನೆ ನಾಯಿ ಎಂದಿದ್ದ ಆಮೀರ್

  'ನಾನು ಮತ್ತು ಪತ್ನಿ ಕಿರಣ್ ರಾವ್ ಇಬ್ಬರು ಪಂಚಗಾನಿಯಲ್ಲಿ ಮನೆಯನ್ನು ಖರೀದಿ ಮಾಡಿದ್ದೀವಿ. ನಮ್ಮ ಮನೆಯಲ್ಲಿ ಶಾರುಖ್ ಎನ್ನುವ ನಾಯಿ ಇದೆ. ಶಾರುಖ್ ಖಾನ್ ವಿರುದ್ಧ ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಉದ್ದೇಶ ಹೊಂದಿಲ್ಲ' ಎಂದು ಹೇಳಿ ಬೇಷರತ್ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

  English summary
  Bollywood Actor Aamir Khan has once written on his blog Shahrukh Khan is licking my feet. later aamir Khan clarifies his statement to SRK as his dog.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X