ಹಾಲಿವುಡ್‌ ನಟನಿಗಾಗಿ ವಿಶೇಷ ಶೋ ಆಯೋಜಿಸಲಿರುವ ಅಮೀರ್ ಖಾನ್: ಕಾರಣ?

ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟಿಸಿರುವ ಹೊಸ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಬಿಡುಗಡೆಗೆ ತಯಾರಾಗಿದೆ. ಕನ್ನಡ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗಲಿರುವ ದಿನಾಂಕದಂದೇ ಈ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.

Recommended Video

ಕೆಜಿಎಫ್2 ರಿಲೀಸ್ ದಿನವೇ ಅಮೀರ್ ಖಾನ್ ಸಿನಿಮಾ ರಿಲೀಸ್‌ ಆಗ್ತಿರೋದು ಯಾಕೆ?

'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಬಗ್ಗೆ ಅಮೀರ್ ಖಾನ್‌ಗೆ ದೊಡ್ಡ ನಿರೀಕ್ಷೆ ಇದೆ. ಸಿನಿಮಾದಲ್ಲಿ ಮೊದಲ ಬಾರಿಗೆ ಸಿಖ್ ಸಮುದಾಯದ ವ್ಯಕ್ತಿಯಾಗಿ ಅಮೀರ್ ಖಾನ್ ನಟಿಸಿದ್ದಾರೆ. ಸಿನಿಮಾದಲ್ಲಿ ತೆಲುಗಿನ ನಾಗ ಚೈತನ್ಯ ಸಹ ಇದ್ದಾರೆ. ಕರೀನಾ ಕಪೂರ್ ಈ ಸಿನಿಮಾದ ನಾಯಕಿ.

ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ಆದರೆ ಹಾಲಿವುಡ್‌ ನಟ ಒಬ್ಬರಿಗಾಗಿ ಸಿನಿಮಾದ ವಿಶೇಷ ಪ್ರದರ್ಶನವನ್ನು ಅಮೀರ್ ಖಾನ್ ಮಾಡಲಿದ್ದಾರೆ. ಹೀಗೆ ಒಬ್ಬ ನಟರಿಗಾಗಿ ಸಿನಿಮಾದ ವಿಶೇಷ ಪ್ರದರ್ಶನ ಮಾಡಲು ಕಾರಣವೂ ಇದೆ.

ಪುಸ್ತಕ ಆಧರಿಸಿದ ಸಿನಿಮಾ 'ಫಾರೆಸ್ಟ್ ಗಂಪ್'

ಪುಸ್ತಕ ಆಧರಿಸಿದ ಸಿನಿಮಾ 'ಫಾರೆಸ್ಟ್ ಗಂಪ್'

''ಲಾಲ್ ಸಿಂಗ್ ಛಡ್ಡಾ' ಸಿನಿಮಾವು 1986ರಲ್ಲಿ ಬಿಡುಗಡೆ ಆದ ವಿನ್‌ಸ್ಟನ್ ಗ್ರೂಮ್ ರಚಿತ 'ಫಾರೆಸ್ಟ್ ಗಂಪ್' ಪುಸ್ತಕದ ಕತೆಯನ್ನು ಆಧರಿಸಿದೆ. ಇದೇ ಕತೆಯನ್ನು ಆಧರಿಸಿ ಹಾಲಿವುಡ್‌ನಲ್ಲಿ 'ಫಾರೆಸ್ಟ್ ಗಂಪ್' ಹೆಸರಿನ ಸಿನಿಮಾ 1994ರಲ್ಲಿ ಬಿಡುಗಡೆ ಆಗಿದೆ. ಹಾಲಿವುಡ್‌ನ ಈವರೆಗೆ ಅತ್ಯುತ್ತಮ ಸಿನಿಮಾಗಳಲ್ಲಿ 'ಫಾರೆಸ್ಟ್ ಗಂಪ್' ಸಿನಿಮಾ ಸಹ ಒಂದು. ಈ ಸಿನಿಮಾದಲ್ಲಿ ಟಾಮ್ ಹ್ಯಾಂಕ್ಸ್ ಫಾರೆಸ್ಟ್ ಗಂಪ್ ಪಾತ್ರದಲ್ಲಿ ನಟಿಸಿದ್ದರು. ಈಗ ಅವರಿಗಾಗಿಯೇ ಅಮೀರ್ ಖಾನ್ ತಮ್ಮ ಸಿನಿಮಾದ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಿದ್ದಾರೆ.

ಆಸ್ಕರ್ ಗೆದ್ದಿದ್ದ ಟಾಮ್ ಹ್ಯಾಂಕ್ಸ್

ಆಸ್ಕರ್ ಗೆದ್ದಿದ್ದ ಟಾಮ್ ಹ್ಯಾಂಕ್ಸ್

'ಫಾರೆಸ್ಟ್ ಗಂಪ್' ಸಿನಿಮಾದಲ್ಲಿ ಟಾಮ್ ಹ್ಯಾಂಕ್ಸ್ ಅತ್ಯದ್ಭುತವಾಗಿ ನಟಿಸಿದ್ದರು. ಆ ಸಿನಿಮಾದ ನಟನೆಗೆ ಟಾಮ್ ಹ್ಯಾಂಕ್ಸ್‌ಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅತ್ಯುತ್ತಮ ನಟನೆ ಮಾತ್ರವೇ ಅಲ್ಲದೆ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ಎಡಿಟಿಂಗ್ ಹಾಗೂ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ ವಿಭಾಗದಲ್ಲಿ ಆಸ್ಕರ್ ಬಂದಿತ್ತು. ಆಸ್ಕರ್ ಮಾತ್ರವೇ ಅಲ್ಲದೆ ಹಲವು ಪ್ರಶಸ್ತಿಗಳನ್ನು ಈ ಸಿನಿಮಾಕ್ಕಾಗಿ ಟಾಮ್ ಹ್ಯಾಂಕ್ಸ್‌ ಪಡೆದುಕೊಂಡರು.

ಅಮೆರಿಕದಲ್ಲಿ ವಿಶೇಷ ಪ್ರದರ್ಶನ ಆಯೋಜನೆ

ಅಮೆರಿಕದಲ್ಲಿ ವಿಶೇಷ ಪ್ರದರ್ಶನ ಆಯೋಜನೆ

'ಫಾರೆಸ್ಟ್ ಗಂಪ್' ಸಿನಿಮಾದಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ್ದ ಪಾತ್ರದಲ್ಲಿ ಇದೀಗ ಅಮೀರ್ ಖಾನ್ ನಟಿಸಿದ್ದು, 'ಫಾರೆಸ್ಟ್ ಗಂಪ್' ಕತೆಯನ್ನು ಭಾರತೀಯ ಪರಿಸ್ಥಿತಿಗೆ ಒಗ್ಗಿಸಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಟಾಮ್ ಹ್ಯಾಂಕ್ಸ್‌ರ ಅತ್ಯುತ್ತಮ ಸಿನಿಮಾದ ರೀಮೇಕ್ ಅನ್ನು ಅವರಿಗೆ ತೋರಿಸಲು ಅಮೀರ್ ಖಾನ್ ಉತ್ಸುಕರಾಗಿದ್ದಾರೆ. ಸಿನಿಮಾ ಬಿಡುಗಡೆಗೆ ತುಸು ಮುಂಚೆ ಸ್ವತಃ ಅಮೀರ್ ಖಾನ್ ಅಮೆರಿಕಕ್ಕೆ ಹಾರಲಿದ್ದು, ಅಲ್ಲಿ ನಟ ಟಾಮ್ ಹ್ಯಾಂಕ್ಸ್‌ಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದಾರೆ. ಸಿನಿಮಾದ ಬಗ್ಗೆ ಟಾಮ್ ಹ್ಯಾಂಕ್ಸ್‌ ಅವರ ಅಭಿಪ್ರಾಯ ಪಡೆದುಕೊಳ್ಳಲು ಅಮೀರ್ ಖಾನ್ ಹೀಗೆ ಮಾಡುತ್ತಿದ್ದಾರೆ.

100 ನಗರಗಳಲ್ಲಿ ಸಿನಿಮಾದ ಚಿತ್ರೀಕರಣ

100 ನಗರಗಳಲ್ಲಿ ಸಿನಿಮಾದ ಚಿತ್ರೀಕರಣ

'ಲಾಲ್ ಸಿಂಗ್ ಛಡ್ಡಾ' ಸಿನಿಮಾವನ್ನು ಭಾರತದ ಸುಮಾರು 100 ಭಿನ್ನ ನಗರಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾರ್ಗಿಲ್‌ನಿಂದ ಹಿಡಿದು ಕನ್ಯಾಕುಮಾರಿ ವರೆಗೆ ಹಲವು ನಗರ, ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಆಗಿದೆ. ಸಿನಿಮಾದಲ್ಲಿ ಅಮೀರ್ ಖಾನ್ ಆತ್ಮೀಯ ಗೆಳೆಯನ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ಸಿನಿಮಾದ ನಾಯಕಿ ಕರೀನಾ ಕಪೂರ್. ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರುಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ಬಹಳ ತಡವಾಗಿದೆ. ಅಲ್ಲದೆ ಚಿತ್ರೀಕರಣದ ಸಮಯದಲ್ಲಿಯೇ ಕರೀನಾ ಕಪೂರ್ ಎರಡನೇ ಮಗುವಿಗೆ ಜನ್ಮ ಸಹ ನೀಡಿದ್ದರಿಂದ ಚಿತ್ರೀಕರಣ ಇನ್ನಷ್ಟು ತಡವಾಯಿತು. ಇದೀಗ ಸಿನಿಮಾ ಪೂರ್ಣಗೊಂಡಿದ್ದು, ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಅದೇ ದಿನ ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಸಹ ಬಿಡುಗಡೆ ಆಗಲಿದೆ.

More from Filmibeat

English summary
Actor Aamir Khan organizing special screening of his new movie Lal Singh Chaddha for Hollywood actor Tom Hanks in America.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X