"ಪತಿಯಾಗಿ ನನ್ನಲ್ಲಿ ನಿನಗೆ ಕಂಡ ಕೊರತೆ ಏನು?" ಆಮೀರ್ ಖಾನ್ ಪ್ರಶ್ನೆಗೆ ಕಿರಣ್ ರಾವ್ ಉತ್ತರ
ಬಾಲಿವುಡ್ ನಟ ಆಮೀರ್ ಖಾನ್ ಸತತ ಸೋಲುಗಳಿಂದ ಕಂಗೆಟ್ಟು ಸದ್ಯ ಸಿನಿಮಾ ಮಾಡುವುದನ್ನು ಕಮ್ಮಿ ಮಾಡಿದ್ದಾರೆ. ಇತ್ತೀಚೆಗೆ ಮಗಳು ಇರಾ ಖಾನ್ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇನ್ನು ಆಮೀರ್ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಈಗಾಗಲೇ 2 ಮದುವೆ ಆಗಿ ಇಬ್ಬರಿಗೂ ಡಿವೋರ್ಸ್ ನೀಡಿ ದೂರಾಗಿದ್ದಾರೆ.
1986ರಲ್ಲಿ ರೀನಾ ದತ್ತರನ್ನು ಮದುವೆ ಆಗಿದ್ದ ಆಮೀರ್ 2002ರಲ್ಲಿ ಆಕೆಗೆ ಡಿವೋರ್ಸ್ ನೀಡಿದ್ದರು. ಬಳಿಕ ಕಿರಣ್ ರಾವ್ ಜೊತೆ 2005ರಲ್ಲಿ ಮದುವೆ ಆಗಿದ್ದರು. 16 ವರ್ಷಗಳ ಕಾಲ ಜೊತೆಯಾಗಿದ್ದ ದಂಪತಿ ಕೆಲ ಸಿನಿಮಾಗಳಲ್ಲಿ ಕೂಡ ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ 3 ವರ್ಷಗಳ ಹಿಂದೆ ಪರಸ್ಪರ ಒಪ್ಪಿ ದೂರಾಗಲು ನಿರ್ಧಿಸಿದ್ದರು.

ಡಿವೋರ್ಸ್ ಬಳಿಕ ಕೂಡ ಅಮೀರ್ ಖಾನ್ ಮತ್ತು ಕಿರಣ್ ರಾವ್ ಆತ್ಮೀಯತೆ ಎಲ್ಲರಿಗೂ ಆಶ್ಚರ್ಯ ತಂದಿದೆ. ಇಬ್ಬರೂ ಇಂದಿಗೂ ಸ್ನೇಹಿತರಾಗಿ ಮುಂದುವರೆದಿದ್ದಾರೆ. 'ಲಪಟ ಲೇಡಿಸ್' ಸಿನಿಮಾ ಪ್ರಚಾರದ ವೇಳೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಿರಣ್ ರಾವ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅಮೀರ್ ಖಾನ್ ಬಂಡವಾಳ ಹೂಡಿದ್ದಾರೆ.
ಮಾರ್ಚ್ 1 ರಂದು 'ಲಪಟ ಲೇಡಿಸ್' ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರದ ವೇಳೆ ಅಮೀರ್ ಖಾನ್ ಅಚ್ಚರಿಯ ಸಂಗತಿಯೊಂದನ್ನು ಹೇಳಿದ್ದಾರೆ. ಡಿವೋರ್ಸ್ ಬಳಿಕ ಕಿರಣ್ ರಾವ್ ಅವರಿಂದ ಫೀಡ್‌ಬ್ಯಾಕ್ ಕೇಳಿದೆ. ಪತಿಯಾಗಿ ನನ್ನಲ್ಲಿ ಏನು ಕೊರತೆಯಿದೆ ಎಂದು ಅಮೀರ್ ಖಾನ್ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಬಳಿ ಕೇಳಿದ್ದಾಗಿ ಹೇಳಿದ್ದಾರೆ.
ಆಮೀರ್ ಖಾನ್ ಮಾತನಾಡುತ್ತಾ "ತಮಾಷೆಯ ವಿಷಯವೆಂದರೆ ಒಂದು ಸಂಜೆ ನಾವು ಒಟ್ಟಿಗೆ ಕುಳಿತಿದ್ದಾಗ ನಾನು ಕಿರಣ್‌ಗೆ ಒಂದು ಪ್ರಶ್ನೆ ಕೇಳಿದೆ. ಒಬ್ಬ ಗಂಡನಾಗಿ ನನ್ನಲ್ಲಿ ಏನು ಕೊರತೆ ಕಾಣುತ್ತಿದೆ? ಜೀವನದಲ್ಲಿ ಮುಂದೆ ಸಾಗುವುದು ಹೇಗೆ? ನಾನು ನನ್ನನ್ನು ಹೇಗೆ ಸುಧಾರಿಸಿಕೊಳ್ಳಬಹುದು? ಎಂದು ಅಮೀರ್ ಖಾನ್ ಕಿರಣ್ ರಾವ್ ಅವರನ್ನು ಕೇಳಿದರಂತೆ. ಅದಕ್ಕೆ ಕಿರಣ್ ರಾವ್ ಪ್ರತಿಕ್ರಿಯಿಸಿ 'ಸರಿ.. ಬರೆದುಕೊಳ್ಳಿ' ಎಂದು ಆಕೆ ದೊಡ್ಡ ಲಿಸ್ಟ್ ಕೊಟ್ಟಿದ್ದರಂತೆ.

"ನೀವು ತುಂಬಾ ಮಾತನಾಡುತ್ತೀರಿ. ನೀವು ಯಾರನ್ನೂ ಮಾತನಾಡಲು ಬಿಡುವುದಿಲ್ಲ. ನೀವು ಹೇಳಿದ್ದೇ ಸರಿ ಎಂದು ವಾದಿಸುತ್ತೀರಿ" ಹೀಗೆ 10-15 ವಿಷಯಗಳ ದೊಡ್ಡ ಪಟ್ಟಿಕೊಟ್ಟಿದ್ದರು" ಎಂದಿ ಆಮೀರ್ ಖಾನ ಮಾಜಿ ಪತ್ನಿ ಕಿರಣ್ ರಾವ್ ಕುರಿತು ಹೇಳಿದ್ದಾರೆ.
ಆಮೀರ್ ಖಾನ್ ಹಾಗೂ ನಟಿ ಫಾತಿಮಾ ಸನಾ ಶೇಖ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇದೇ ಕಾರಣಕ್ಕೆ ಕಿರಣ್ ರಾವ್‌ಗೆ ಡಿವೋರ್ಸ್ ನೀಡಿದ್ದರು ಎನ್ನುವ ಗುಸುಗುಸು ಬಾಲಿವುಡ್ ಗಲ್ಲಿಗಳಲ್ಲಿ ಗುಲ್ಲಾಗಿತ್ತು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಫಾತಿಮಾ ಸನಾ ಶೇಖ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ದಂಗಲ್' ಚಿತ್ರದಲ್ಲಿ ಆಮೀರ್ ಮಗಳ ಪಾತ್ರದಲ್ಲಿ ಮಿಂಚಿದ್ದರು.
'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲೂ ಆಮೀರ್ ಖಾನ್ ಜೊತೆ ಫಾತಿಮಾ ನಟಿಸಿದ್ದರು. ಆಮೀರ್ ಮಗಳು ಇರಾ ಖಾನ್ ನಿಶ್ಚಿತಾರ್ಥ ಸಮಾರಂಭದಲ್ಲಿ ಕೂಡ ಫಾತಿಮಾ ಕಾಣಿಸಿಕೊಂಡಿದ್ದಳು. ಅದೇ ಕಾರಣಕ್ಕೆ ಇವರಿಬ್ಬರ ಡೇಟಿಂಗ್ ವದಂತಿ ಹರಿದಾಡಿತ್ತು. ಸದ್ಯ ಆಮೀರ್ ಖಾನ್ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡುವ ಗೋಜಿಗೆ ಹೋಗುತ್ತಿಲ್ಲ.


Click it and Unblock the Notifications











