'ಲಾಲ್‌ ಸಿಂಗ್ ಚೆಡ್ಡ' ವಿರುದ್ಧ ಬಹಿಷ್ಕಾರದ ಕೂಗು, ಬಾಲಿವುಡ್‌ಗೆ ಮತ್ತೊಮ್ಮೆ ಸೋಲಿನ ರುಚಿ?

ಬಾಲಿವುಡ್‌ನಲ್ಲಿ ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ ಆಮೀರ್ ಖಾನ್ ಅಭಿನಯದ 'ಲಾಲ್‌ಸಿಂಗ್ ಚಡ್ಡ' ಸಿನಿಮಾ. ಈ ಸಿನಿಮಾ ಚಿತ್ರತಂಡಕ್ಕೆ ಮಾತ್ರವಲ್ಲ ಇಡೀ ಬಾಲಿವುಡ್‌ಗೆ ಅತ್ಯಂತ ಮುಖ್ಯ.

ಈ ಸಿನಿಮಾ ಸೆಟ್ಟೇರಿ ವರ್ಷಗಳೇ ಕಳೆದಿವೆ. ಕೊರೊನಾ ಕಾರಣದಿಂದಾಗಿ ಸಿನಿಮಾದ ಶೂಟಿಂಗ್ ತಡವಾಗಿದ್ದು ಚಿತ್ರದ ರಿಲೀಸ್ ಕೂಡ ತಡವಾಗಿದೆ. ಇದೀಗ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಚಿತ್ರದ ಪ್ರಚಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ.

'ಲಾಲ್‌ ಸಿಂಗ್ ಚಡ್ಡ' ಚಿತ್ರದ ಹೆಸರು ಸದ್ಯ ಟ್ರೆಂಡಿಂಗ್‌ನಲ್ಲಿ ಇದೆ. ಆದರೆ ಇದು ಚಿತ್ರಕ್ಕೆ ಪ್ಲಸ್ ಆಗುವಂತಿಲ್ಲ. ಯಾಕೆಂದರೆ ಸಿನಿಮಾ ಬಾಯ್‌ಕಾಟ್ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ಇದ್ದಕ್ಕಿದ್ದ ಹಾಗೆ ಈ ಬಹಿಷ್ಕಾರದ ಕೂಗು ಕೇಳಿ ಬರುತ್ತಿರುವುದು ಯಾಕೆ ಎನ್ನುವುದನ್ನು ಮುಂದೆ ಓದಿ....

'ಲಾಲ್‌ಸಿಂಗ್ ಚಡ್ಡ' ಬಹಿಷ್ಕಾರದ ಕೂಗು!

'ಲಾಲ್‌ಸಿಂಗ್ ಚಡ್ಡ' ಬಹಿಷ್ಕಾರದ ಕೂಗು!

ಈ ಹಿಂದೆಯೂ 'ಲಾಲ್‌ಸಿಂಗ್ ಚಡ್ಡ' ಸಿನಿಮಾವನ್ನ ಬಹಿಷ್ಕಾರ ಮಾಡುವಂತೆ ಕೂಗು ಕೇಳಿಬಂದಿತ್ತು. ಆಮೀರ್ ಖಾನ್ ನೀಡಿದ ಒಂದು ಹೇಳಿಕೆಯಿಂದಾಗಿ ಸಿನಿಮಾವನ್ನ ಬಹಿಷ್ಕರಿಸಬೇಕು ಎನ್ನುವ ವಿಚಾರ ಸದ್ದು ಮಾಡಿತ್ತು. ಇದೀಗ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಮತ್ತೆ ಕೇಳಿ ಬರುತ್ತಿದೆ. ಕಾರಣ ಈ ಹಿಂದೆ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕೊಟ್ಟ ಹೇಳಿಕೆಗಳು. ಹಾಗಾಗಿ ಬಾಲಿವುಡ್‌ ಫ್ಲಾಪ್ ಲಿಸ್ಟ್‌ಗೆ ಈ ಚಿತ್ರವೂ ಸೇರಿ ಬಿಡುತ್ತದೆ ಎನ್ನುವ ಆತಂಕ ಎದುರಾಗಿದೆ.

ಆಮಿರ್ ಖಾನ್ ಹೇಳಿಕೆ ಮುಳುವು!

ಆಮಿರ್ ಖಾನ್ ಹೇಳಿಕೆ ಮುಳುವು!

ನಟ ಅಮೀರ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದರ ಬಗ್ಗೆ ಮಾತನಾಡಿದರು. "ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ವ್ಯರ್ಥ. ಈ ಆಚರಣೆ ಅಪ್ರಯೋಜಕ. ಇದರ ಬದಲು ಬಡ ಮಕ್ಕಳಿಗೆ ಅದೇ ದುಡ್ಡಿನಲ್ಲಿ ಸಹಾಯ ಮಾಡಬಹುದು" ಎಂದಿದ್ದರು. ಇದೇ ಹೇಳಿಕೆ ಈಗ ಮತ್ತೆ ವೈರಲ್ ಆಗುತ್ತಿತ್ತು, ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡುವುದು ವ್ಯರ್ಥ. ಈ ಸಿನಿಮಾದ ನೋಡುವುದರ ಬದಲಾಗಿ ಅದೇ ದುಡ್ಡಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಬಹುದು ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಸಿನಿಮಾ ನೀಡಬೇಡಿ ಎಂದಿದ್ದ ಕರೀನಾ!

ಸಿನಿಮಾ ನೀಡಬೇಡಿ ಎಂದಿದ್ದ ಕರೀನಾ!

ಇನ್ನು ಇದೇ ಚಿತ್ರದ ನಾಯಕ ನಟಿ ಕರೀನಾ ಕಪೂರ್ ಈ ಹಿಂದೆ ನೀಡಿದ ಹೇಳಿಕೆ ಕೂಡ ಇದೀಗ ಉಲ್ಟಾ ಹೊಡೆಯುತ್ತಿದೆ. ನೆಪೊಟಿಸಂ ಬಗ್ಗೆ ಮಾತನಾಡುತ್ತಾ ನಟಿ ಕರೀನಾ ಕಪೂರ್ "ನಮ್ಮ ಸಿನಿಮಾಗಳನ್ನು ನೋಡಲೇಬೇಡಿ, ಸಿನಿಮಾಗಳನ್ನು ನೋಡುವಂತೆ ಯಾರಿಗೂ ಬಲವಂತವಿಲ್ಲ" ಎಂದಿದ್ದರು. ಈಗ ಇದೇ ಹೇಳಿಕೆಯನ್ನ ಬಳಸಿ ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾ ನೋಡಬೇಡಿ ಎಂದಿದ್ದ ಕರೀನಾ ಕಪೂರ್ ನಟಿಸಿರುವ ಸಿನಿಮಾ ಯಾಕೆ ನೋಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಕರೀನಾ ಕಪೂರ್ ಅಂದು ಕೊಟ್ಟಿರುವ ಹೇಳಿಕೆ ಸರಿಯಾಗಿದೆ ಈ ಸಿನಿಮಾವನ್ನು ಮಾಡದೇ ಇರುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಆಗಸ್ಟ್ 11 'ಲಾಲ್‌ಸಿಂಗ್ ಚಡ್ಡ' ರಿಲೀಸ್!

ಆಗಸ್ಟ್ 11 'ಲಾಲ್‌ಸಿಂಗ್ ಚಡ್ಡ' ರಿಲೀಸ್!

ಕೊರೊನಾ ಬಳಿಕ ಸಾಲು, ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಈ ಚಿತ್ರದ ರಿಲೀಸ್ ದಿನಾಂಕ ಹಲವು ಬಾರಿ ಮುಂದೆ ಹೋಗಿದ್ದು, ಈಗ ಆಗಸ್ಟ್ 11ಕ್ಕೆ 'ಲಾಲ್‌ಸಿಂಗ್ ಚಡ್ಡ' ಸಿನಿಮಾದ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ಭೂಲ್ ಭುಲಯ್ಯ 2 ಸಿನಿಮಾ ಬಿಟ್ಟರೆ, ಮತ್ಯಾವ ಸಿನಿಮಾ ಕೂಡ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಿಲ್ಲ. ಹಾಗಾಗಿ ಲಾಲ್‌ ಸಿಂಗ್ ಚೆಡ್ಡ ಗೆಲ್ಲುವುದು ಬಾಲಿವುಡ್‌ಗೆ ಬಹಳ ಮುಖ್ಯವಾಗಿದೆ.

ಇಂಗ್ಲೀಷ್ ಚಿತ್ರದ ರಿಮೇಕ್ 'ಲಾಲ್‌ಸಿಂಗ್ ಚಡ್ಡ'!

ಇಂಗ್ಲೀಷ್ ಚಿತ್ರದ ರಿಮೇಕ್ 'ಲಾಲ್‌ಸಿಂಗ್ ಚಡ್ಡ'!

'ಲಾಲ್‌ಸಿಂಗ್ ಚಡ್ಡ' ಹಾಲಿವುಡ್ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್. ಆಮೀರ್ ಖಾನ್‌ರ ಸಿನಿಮಾ ಎಂದರೆ ಅವರ ಪಾತ್ರಗಳ ಬಗ್ಗೆ ಹೆಚ್ಚಿನ ಕುತೂಹಲ ಇರುತ್ತೆ. ಯಾಕೆಂದರೆ ಪ್ರತಿ ಸಿನಿಮಾದಲ್ಲೂ ಆಮಿರ್ ಪಾತ್ರಕ್ಕೆ ವಿಭಿನ್ನ ಟಚ್ ಇದ್ದೆ ಇರುತ್ತೆ. ಹಾಗಾಗಿ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿವ ಆಮಿರ್ ಪಾತ್ರ ಕುತೂಹಲ ಮೂಡಿಸಿದ್ದಾರೆ.

More from Filmibeat

English summary
Aamir Khan, Kareena Kapoor Starrer Laal Singh Chaddha Boycott trending In Twitter, Because Of Their Old Statement, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X