'ಲಾಲ್ ಸಿಂಗ್ ಚಡ್ಡ' 2ನೇ ದಿನದ ಕಲೆಕ್ಷನ್, 40% ಗಳಿಕೆ ಇಳಿಕೆ!

ಬಾಲಿವುಡ್‌ನ ಸೋಲಿನ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರಿಕೊಂಡಿದೆ. ನಿರೀಕ್ಷೆಯೊಂದಿಗೆ ರಿಲೀಸ್ ಆದ 'ಲಾಲ್ ಸಿಂಗ್ ಚೆಡ್ಡ' ಸಿನಿಮಾ, ರಿಲೀಸ್ ಬಳಿಕ ಸೋಲುಂಡಿದೆ. ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ಅತ್ಯಂತ ಕಡಿಮೆ ಗಳಿಗೆ ಕಂಡ ಆಮಿರ್ ಖಾನ್ ನಟನೆಯ ಮೊದಲ ಸಿನಿಮಾ ಇದು.

Recommended Video

ಇನ್ಮುಂದೆ ದೇಶ ವಿರೋಧಿ ಹೇಳಿಕೆ ಕೊಡೋ ಮೊದಲು ಹುಷಾರ್‌ ಆಮೀರ್..! | Laal Singh Chaddha | Filmibeat Kannada

ರಿಲೀಸ್ ದಿನ ಏನು ಚಮತ್ಕಾರ ಮಾಡದ ಈ ಸಿನಿಮಾ, ಬಾಕ್ಸಾಫೀಸ್‌ನಲ್ಲಿ ಮೇಲೇಳುವ ಯಾವುದೇ ಸೂಚನೆ ಇಲ್ಲ. ಈ ಸಿನಿಮಾ ಗೆಲ್ಲುವುದು, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವುದು ಅನಿವಾರ್ಯವಾಗಿತ್ತು. ಆದರೆ ಈ ಅವಕಾಶವನ್ನೂ ಬಾಲಿವುಡ್ ಮಿಸ್ ಮಾಡಿಕೊಂಡಂತಿದೆ.

ಆಮಿರ್ ಖಾನ್, ಕರೀನಾ ಕಪೂರ್ ಅಂತಹ ದೊಡ್ಡ ಸ್ಟಾರ್‌ಗಳು ಅಭಿನಯಿಸಿರುವ ಈ ಚಿತ್ರವೇ ಹೀಗೆ ಮಕಾಡೆ ಮಲಗಿದೆ. ಸಿನಿಮಾ ಮೊದಲ ದಿನ ದೊಡ್ಡ ಮಟ್ಟಿಗಿನ ಓಪನಿಂಗ್ ಪಡೆದುಕೊಳ್ಳದೇ ಹೋದರೂ, ಎರಡನೇ ದಿನವಾದರೂ ಕೊಂಚ ಚೇತರಿಸಿಕೊಳ್ಳಲಿದೆ ಎನ್ನಲಾಗುತ್ತಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಎರಡನೇ ದಿನಕ್ಕೆ 40% ಇಳಿಕೆ!

ಎರಡನೇ ದಿನಕ್ಕೆ 40% ಇಳಿಕೆ!

ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಸಿನಿಮಾ ರಿಲೀಸ್ ಆಗಿ ಎರಡು ದಿನಗಳು ಕಳೆದಿದೆ. ಸಿನಿಮಾ ರಿಲೀಸ್ ಮುಂಚೆ ಸಾಕಷ್ಟು ನೆಗೆಟಿವ್ ಪ್ರಚಾರವನ್ನು ಪಡೆದುಕೊಂಡಿತ್ತು. ಹಾಗಾಗಿ ಸಿನಿಮಾದ ಮೊದಲ ದಿನದ ಗಳಿಕೆಯ ಮೇಲೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಸಿನಿಮಾ ಉತ್ತಮ ಎನಿಸಿದರೆ ಮೊದಲ ದಿನದ ಬಳಿಕ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುವುದರ ಜೊತೆಗೆ ಕಲೆಕ್ಷನ್ ಕೂಡ ಹೆಚ್ಚುತ್ತದೆ ಎನ್ನುವ ನಿರೀಕ್ಷೆ ಚಿತ್ರತಂಡಕ್ಕಿತ್ತು. ಆದರೆ, ಅದು ಕೂಡ ಈಗ ಸುಳ್ಳಾಗಿ ಬಿಟ್ಟಿದೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾ ಎರಡನೇ ದಿನದ ಗಳಿಕೆ ಶೇಕಡಾ 40ರಷ್ಟು ಕುಸಿದಿದೆ. ಎರಡನೇ ದಿನದ ಗಳಿಕೆಯಲ್ಲಿ ಮೊದಲ ದಿನದ ಗಳಿಕೆ ಗಿಂತಲೂ ಹೆಚ್ಚಿನ ಕುಸಿತಕಂಡಿದ್ದು ಇದು ಬಾಲಿವುಡ್‌ನ ಆತಂಕಕ್ಕೆ ಕಾರಣವಾಗಿದೆ.

ಎರಡನೇ ದಿನದ ಗಳಿಕೆ 7 ಕೋಟಿ ರೂ. ಮಾತ್ರ!

ಎರಡನೇ ದಿನದ ಗಳಿಕೆ 7 ಕೋಟಿ ರೂ. ಮಾತ್ರ!

'ಲಾಲ್ ಸಿಂಗ್ ಚಡ್ಡ' ಸಿನಿಮಾ ಎರಡನೇ ದಿನ ಕಲೆಕ್ಷನ್ ಕೊಂದಿದ್ದು ಎರಡನೇ ದಿನ ಒಟ್ಟಾರೆ 7 ಕೋಟಿ ರೂ. ಗಳಿಕೆ ಕಂಡಿದೆ. ಭಾರತದಾದ್ಯಂತ 'ಲಾಲ್ ಸಿಂಗ್ ಚಡ್ಡ' ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೂ ಕೂಡ ಎರಡನೇ ದಿನ ಶುಕ್ರವಾರದಂದು 7 ಕೋಟಿ ರೂ. ಗಳಿಕೆಗೆ ಸೀಮಿತವಾಗಿದೆ. ಈ ಮೂಲಕ ಚಿತ್ರದ ಎರಡು ದಿನದ ಒಟ್ಟಾರೆ ಗಳಿಕೆ ಭಾರತದಲ್ಲಿ 19 ಕೋಟಿ ರೂ. ಆಗಿದೆ. ನಿರೀಕ್ಷೆಯಂತೆ ಮೊದಲ ದಿನವೇ ಸಿನಿಮಾ 20 ಕೋಟಿ ರೂ. ತನಕ ಕಲೆ ಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಮೊದಲ ದಿನ ಗಳಿಸಿದ್ದೆಷ್ಟು?

ಮೊದಲ ದಿನ ಗಳಿಸಿದ್ದೆಷ್ಟು?

ಈ ವರ್ಷ ಬಾಲಿವುಡ್‌ನಲ್ಲಿ ಈ ವರ್ಷ ಕೊಂಚ ಹೆಚ್ಚು ಗಳಿಕೆಯೊಂದಿಗೆ ಓಪನಿಂಗ್ ಪಡೆದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಮಾತ್ರ ಪಾತ್ರವಾಗಿದೆ. ಆಗಸ್ಟ್ 11ಕ್ಕೆ ತೆರೆಕಂಡ 'ಲಾಲ್ ಸಿಂಗ್ ಚಡ್ಡ' ಮೊದಲನೆಯ ದಿನ 12 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಈ ವರ್ಷ ತೆರೆಕಂಡ ಬಾಲಿವುಡ್‌ನ ಬಿಗ್ ಸಿನಿಮಾಗಳಲ್ಲಿ 'ಭೂಲ್ ಭುಲಯ್ಯ', 'ಬಚ್ಚನ್ ಪಾಂಡೆ' ನಂತರ ಹೆಚ್ಚು ಗಳಿಕೆ ಕಂಡ ಸಿನಿಮಾ 'ಲಾಲ್ ಸಿಂಗ್ ಚಡ್ಡ'. ಹಾಗಾಗಿ ಚಿತ್ರದ ಗಳಿಕೆ ಸುಧಾರಿಸಬಹುದು ಎನ್ನುವ ಲೆಕ್ಕಾಚಾರ ಇತ್ತು. ಇದೀಗ ಎರಡನೇ ದಿನದ ಗಳಿಕೆಯ ಲೆಕ್ಕಾಚಾರ ಹೊರಬಂದಿದ್ದು, ಮೊದಲ ದಿನದ ಗಳಿಕೆಯಲ್ಲಿ ಶೇಕಡ 40ರಷ್ಟು ಕುಸಿತ ಕಂಡಿದ್ದು ಭಾರತದಾದ್ಯಂತ ಕೇವಲ ಏಳು ಕೋಟಿ ರೂ. ಕಲೆ ಹಾಕಿದೆ.

ವೀಕೆಂಡ್‌ನಲ್ಲಿ ಸಿನಿಮಾ ಭವಿಷ್ಯ!

ವೀಕೆಂಡ್‌ನಲ್ಲಿ ಸಿನಿಮಾ ಭವಿಷ್ಯ!

ಆಗಸ್ಟ್ 11 ಗುರುವಾರದಂದು 'ಲಾಲ್ ಸಿಂಗ್ ಚಡ್ಡ' ಸಿನಿಮಾ ತೆರೆಕಂಡಿದೆ. ಮೊದಲ ದಿನ ತಕ್ಕಮಟ್ಟಿಗೆ ಗಳಿಕೆ ಕಂಡ ಚಿತ್ರ ಎರಡನೇ ದಿನ ಬಾಕ್ಸಾಫೀಸಿನಲ್ಲಿ ನಿರೀಕ್ಷೆಯನ್ನು ಹುಸಿ ಮಾಡಿದೆ. ಆದರೆ ವೀಕೆಂಡ್‌ನಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರದ ಚಿತ್ರತಂಡದ ಮುಂದೆ ದೊಡ್ಡ ಸವಾಲಿದೆ. ವೀಕೆಂಡ್‌ನಲ್ಲಿ ಸಿನಿಮಾ ಹೆಚ್ಚು ಗಳಿಕೆ ಕಾಣದೆ ಇದ್ದರೆ ಮುಂದಿನ ವಾರವೂ ಹೆಚ್ಚು ಗಳಿಸುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಮೊದಲ ವೀಕೆಂಡ್‌ನಲ್ಲೇ ಈ ಚಿತ್ರ ಸಾಧ್ಯವಾದಷ್ಟನ್ನು ಬಾಚಿಕೊಳ್ಳಬೇಕಾಗಿದೆ. ಈ ವೀಕೆಂಡ್ ಬಳಿಕವೇ ಈ ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ.

More from Filmibeat

English summary
Aamir Khan, Kareena Kapoor Starrer Laal Singh Chaddha Day 2 Collection Drop To 40%, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X