For Quick Alerts
  ALLOW NOTIFICATIONS  
  For Daily Alerts

  'ಲಾಲ್ ಸಿಂಗ್ ಚಡ್ಡ' ಹಾಗೂ 'ಶಬ್ಬಾಶ್ ಮಿತು' ವಿರುದ್ಧ ದೂರು ದಾಖಲು!

  |

  ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಹಾಗೂ ತಾಪ್ಸಿ ಪನ್ನು ಸಿನಿಮಾ 'ಶಬ್ಬಾಶ್ ಮಿತು' ಎರಡೂ ಸಿನಿಮಾಗಳಿಗೆ ಕಾನೂನಿ ತೊಡಕು ಎದುರಾಗಿದೆ. 'ಲಾಲ್ ಸಿಂಗ್ ಚಡ್ಡ' ಬಿಡುಗಡೆಯಾದ ಎರಡು ವಾರಗಳ ಬಳಿಕ ಹಾಗೂ 'ಶಬ್ಬಾಶ್ ಮಿತು' ರಿಲೀಸ್ ಆದ ಒಂದು ತಿಂಗಳ ಬಳಿಕ ಎರಡೂ ಸಿನಿಮಾಗಳ ವಿರುದ್ಧ ದೂರು ನೀಡಲಾಗಿದೆ.

  'ಲಾಲ್‌ ಸಿಂಗ್ ಚಡ್ಡ' ಹಾಗೂ ಅಕ್ಷಯ್ ಕುಮಾರ್ ಸಿನಿಮಾ 'ರಕ್ಷಾ ಬಂಧನ್' ಎರಡೂ ಸಿನಿಮಾಗಳೂ ಒಂದೇ ದಿನ ರಿಲೀಸ್ ಆಗಿತ್ತು. ಈ ಎರಡೂ ಸಿನಿಮಾಗಳೂ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಇನ್ನು ಒಂದು ತಿಂಗಳ ಹಿಂದಷ್ಟೇ ತಾಪ್ಸಿ ಪನ್ನು ಅಭಿನಯದ ಸ್ಟೋರ್ಟ್ಸ್ ಬಯೋಪಿಕ್ ಡ್ರಾಮ ರಿಲೀಸ್ ಆಗಿತ್ತು. ಇದು ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಆಗಿತ್ತು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ.

  'ಲಾಲ್‌ ಸಿಂಗ್‌ ಚಡ್ಡ': 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂದ್ರೆ ನಂಬ್ತಿರಾ?'ಲಾಲ್‌ ಸಿಂಗ್‌ ಚಡ್ಡ': 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂದ್ರೆ ನಂಬ್ತಿರಾ?

  'ಲಾಲ್‌ ಸಿಂಗ್ ಚಡ್ಡ', 'ಶಬ್ಬಾಶ್ ಮಿತು' ವಿರುದ್ಧ ದೂರು!

  ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಹಾಗೂ ತಾಪ್ಸಿ ಪನ್ನು ಸಿನಿಮಾ 'ಶಬ್ಬಾಶ್ ಮಿತು' ವಿರುದ್ಧ ದೂರು ದಾಖಲಾಗಿದೆ. ಈ ಎರಡೂ ಸಿನಿಮಾಗಳಲ್ಲಿ ವಿಶೇಷ ಚೇತನ ಮಕ್ಕಳನ್ನು ಅಪಹಾಸ್ಯ ಮಾಡಲಾಗಿದೆ ಎಂದು ವಿಶೇಷ ಚೇತನ ಮಕ್ಕಳ ಆಯುಕ್ತರಿಗೆ ದೂರನ್ನು ದಾಖಲು ಮಾಡಲಾಗಿದೆ.

  ಬಾಲಿವುಡ್‌ ಮಾಧ್ಯಮಗಳ ಪ್ರಕಾರ, ಡಾಕ್ಟರ್ಸ್ ವಿತ್ ಡಿಸಬಿಲಿಟಿಸ್‌ನ ಸಹ ಸಂಸ್ಥಾಪಕರಾಗಿರುವ ಡಾ. ಸತ್ಯೇಂದ್ರ ಸಿಂಗ್ ಎಂಬುವರು ಈ ಎರಡು ಸಿನಿಮಾಗಳ ಮೇಲೆ ದೂರನ್ನು ದಾಖಲು ಮಾಡಿದ್ದಾರೆ. ಸ್ವತ: ಶೆ. 70ರಷ್ಟು ಓಕೊಮೊಟರ್ ಸಮಸ್ಯೆಯಿಂದ ಬಳತ್ತಿದ್ದಾರೆ. ಇವರ ಪ್ರಕಾರ, 'ಲಾಲ್ ಸಿಂಗ್ ಚಡ್ಡ' ಹಾಗೂ 'ಶಬ್ಬಾಶ್ ಮಿತು' ಎರಡೂ ಸಿನಿಮಾಗಳೂ ವ್ಯಕ್ತಿಗಳ ಹಕ್ಕು ಹಾಗೂ ಡಿಸಬಿಲಿಟೀಸ್ ಕಾಯ್ದೆಯ ಅಡಿ ದೂರನ್ನು ದಾಖಲು ಮಾಡಲಾಗಿದೆ.

  ಸಿನಿಮಾ ಬಳಸಿದ ಅಕ್ಷೇಪಾರ್ಹ ಪದಗಳ್ಯಾವುವು?

  'ಲಾಲ್ ಸಿಂಗ್ ಚಡ್ಡ' ಸಿನಿಮಾದಲ್ಲಿ ಯಂಗ್ ಲಾಲ್ ಸಿಂಗ್ ಚಡ್ಡಗೆ ಪುಂಡರು ಹೀಯಾಳಿಸುವ ದೃಶ್ಯದ ಡೈಲಾಗ್‌ನಲ್ಲಿ 'ಲಂಗ್‌ಡೆ' ಅನ್ನೋ ಪದವನ್ನು ಬಳಸಲಾಗಿತ್ತು. ಅದೇ ತಾಪ್ಸಿ ಪನ್ನು ಸಿನಿಮಾ 'ಶಬ್ಬಾಶ್ ಮಿತು' ಚಿತ್ರದ ಹಾಡಿನಲ್ಲಿ 'ಲಂಗಡಿ' ಅನ್ನೋ ಪದವನ್ನು ಬಳಿಸಿದ್ದಕ್ಕೆ ಆಕ್ಷೇಪ ಎತ್ತಲಾಗಿದೆ. ಈ ಎರಡು ಪದಗಳು ವಿಶೇಷ ಚೇತನ ಮಕ್ಕಳ ಭಾವನೆಗಳಿಗೆ ಧಕ್ಕೆಯಾಗಿದೆ ಎನ್ನಲಾಗಿದೆ.

  'ಲಂಗ್‌ಡೆ' ಹಾಗೂ 'ಲಂಗಡಿ' ಈ ಎರಡು ಪದಗಳಿಗೆ ಸಂಬಂಧಿಸಿದಂತೆ ಡಾ. ಸತ್ಯೇಂದ್ರ ಸಿಂಗ್ ದೂರನ್ನು ನೀಡಿದ್ದಾರೆ. 'ಲಾಲ್ ಸಿಂಗ್ ಚಡ್ಡ' ಹಾಗೂ 'ಶಬ್ಬಾಶ್ ಮಿತು' ಸಿನಿಮಾ ನಿರ್ದೇಶಕರಿಗೆ ಈ ಪದಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು 30 ದಿನಗಳ ಗಡುವುಗಳನ್ನು ನೀಡಲಾಗಿದೆ.

  Aamir Khan Laal Singh Chaddha And Taapsee Pannu Shabaash Mithu In Legal Trouble

  ಬಾಕ್ಸಾಫೀಸ್‌ನಲ್ಲಿ ಎರಡೂ ಸಿನಿಮಾಗೆ ಸೋಲು

  ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಆಗಸ್ಟ್ 11 ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಬಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಭಾರತದಲ್ಲಿ ಮೋಡಿ ಮಾಡಿಲ್ಲ. ಆದರೆ, ವಿದೇಶದಲ್ಲಿ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ ಸುಮಾರು 59 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ.

  ಇನ್ನೊಂದು ಕಡೆ ಮಿಥಾಲಿ ರಾಜ್ ಅವತಾರವೆತ್ತಿದ್ದ ತಾಪ್ಸಿ ಪನ್ನಿ ಚಿತ್ರ 'ಶಬ್ಬಾಶ್ ಮಿತು' ಕೂಡ ಬಾಕ್ಸಾಫೀಸ್‌ನಲ್ಲಿ ಹೀನಾಯಾವಾಗಿ ಸೋತಿತ್ತು. ಈ ಸಿನಿಮಾ ಬಿಡುಗಡೆಯಾದ ಒಂದು ತಿಂಗಳ ಬಳಿಕ ದೂರ ದಾಖಲಾಗಿದ್ದು, ಎರಡೂ ತಂಡಗಳು ಈ ದೂರಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತವೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

  English summary
  Aamir Khan Laal Singh Chaddha And Taapsee Pannu Shabaash Mithu In Legal Trouble, Know More
  Thursday, August 25, 2022, 0:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X