For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ 'ಮಹಾಭಾರತ'ಕ್ಕೆ ಶಾಕ್ ಕೊಟ್ಟ ಅಮೀರ್ 'ಮಹಾಭಾರತ'.!

  By Bharath Kumar
  |

  ಈಗಾಗಲೇ ಗೊತ್ತಿರುವಾಗೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಮುಂದಿನ ದಿನಗಳಲ್ಲಿ 'ಮಹಾಭಾರತ' ಸಿನಿಮಾ ಮಾಡಲಿದ್ದಾರೆ. ಅದೇ ರೀತಿ ಬಾಲಿವುಡ್ ಸೂಪರ್ ಸ್ಟಾರ್ ನಟ ಅಮೀರ್ ಖಾನ್ ಕೂಡ 'ಮಹಾಭಾರತ' ಸಿನಿಮಾ ಮಾಡುವ ತಯಾರಿ ಮಾಡುತ್ತಿದ್ದಾರೆ.

  ಮಹಾಭಾರತದ ಕಲ್ಪನೆ ಒಂದೇ ಆದರು, ಅದನ್ನ ನಿರೂಪಣೆ ಮಾಡುವ ಶೈಲಿ ವಿಭಿನ್ನ ಮತ್ತು ವಿಶೇಷ. ಈಗ ಅಂತಹ ಸಾಹಸಕ್ಕೆ ಕೈ ಹಾಕಿರುವ ಮಿಸ್ಟರ್ ಪರ್ಫಕ್ಷನಿಸ್ಟ್, ಡೈರೆಕ್ಟರ್ ರಾಜಮೌಳಿಗೆ ಶಾಕ್ ಕೊಟ್ಟಿದ್ದಾರೆ.

  'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.! 'ಮಹಾಭಾರತ' ಸಿನಿಮಾ ಮಾಡೋದು ಈ ನಟನ ಕನಸಂತೆ.!

  ಹಾಗಿದ್ರೆ, ರಾಜಮೌಳಿಗೆ ಸೆಡ್ಡು ಹೊಡೆಯಲು ಅಮೀರ್ ಮಾಡಿರುವ ಪ್ಲಾನ್ ಏನು? ಖಾನ್ ನಿರ್ಮಾಣ ಮಾಡಲಿರುವ ಮಹಾಭಾರತದ ವಿಶೇಷತೆಗಳೇನು? ಎಂದು ತಿಳಿಯಲು ಮುಂದೆ ಓದಿ......

  'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದ ನಂತರ

  'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದ ನಂತರ

  ಪ್ರಸ್ತುತ 'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದಲ್ಲಿ ನಟಿಸುತ್ತಿರುವ ಅಮೀರ್ ಖಾನ್, ಆ ಚಿತ್ರದ ನಂತರ 'ಮಹಾಭಾರತ' ಸಿನಿಮಾವನ್ನ ಸೆಟ್ಟೇರಿಸಲು ತಯಾರಾಗುತ್ತಿದ್ದಾರೆ.

  ಈ ಚಿತ್ರಕ್ಕಾಗಿ ಬೇರೆ ಚಿತ್ರಗಳಿಗೆ 'ನೋ' ಎಂದರು

  ಈ ಚಿತ್ರಕ್ಕಾಗಿ ಬೇರೆ ಚಿತ್ರಗಳಿಗೆ 'ನೋ' ಎಂದರು

  'ಮಹಾಭಾರತ' ಚಿತ್ರಕ್ಕಾಗಿ ಬೇರೆ ಬೇರೆ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿಲ್ಲ ಅಮೀರ್ ಖಾನ್. ಈಗಾಗಲೇ ಒಪ್ಪಿಕೊಂಡಿದ್ದ ರಾಕೇಶ್ ಶರ್ಮಾ ಅವರ ಬಯೋಪಿಕ್ ಸಿನಿಮಾವನ್ನ ಕೂಡ ಕೈಬಿಟ್ಟಿದ್ದಾರೆ ಎನ್ನುವುದು ಬಾಲಿವುಡ್ ಸಮಾಚಾರ.

  ಐದು ಭಾಗದಲ್ಲಿ ಮಹಾಭಾರತ

  ಐದು ಭಾಗದಲ್ಲಿ ಮಹಾಭಾರತ

  ತಾಜಾ ಸುದ್ದಿ ಏನಪ್ಪಾ ಅಂದ್ರೆ, 'ಮಹಾಭಾರತ' ಚಿತ್ರವನ್ನ ಐದರಿಂದ ಆರು ಭಾಗದಲ್ಲಿ ತಯಾರು ಮಾಡುವ ಯೋಚನೆಯಲ್ಲಿದ್ದಾರೆ ಅಮೀರ್ ಖಾನ್. ಈ ಚಿತ್ರದ ಮೊದಲ ಭಾಗವನ್ನ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕರು ಕೆಲಸ ಮಾಡುವ ಸಾಧ್ಯತೆ ಇದೆ. ಉಳಿದ ಭಾಗದ ಚಿತ್ರಗಳಿಗೆ ಸ್ವತಃ ಅಮೀರ್ ಖಾನ್ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  ಮಹಾಭಾರತ ಚಿತ್ರದ ನಂತರ ಗುಡ್ ಬೈ

  ಮಹಾಭಾರತ ಚಿತ್ರದ ನಂತರ ಗುಡ್ ಬೈ

  ಡ್ರೀಮ್ ಪ್ರಾಜೆಕ್ಟ್ 'ಮಹಾಭಾರತ' ಚಿತ್ರದ ನಂತರ ಅಮೀರ್ ಖಾನ್ ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರಂತೆ. ಸದ್ಯ, ಅಮೀರ್ ಖಾನ್ ಗೆ 50 ವರ್ಷ. ಇನ್ನು ಮಹಾಭಾರತ ಚಿತ್ರದ ಐದು ಭಾಗವನ್ನ ಮಾಡಲು ಸುಮಾರು 10 ವರ್ಷ ಬೇಕಾಗಬಹುದು. ಆದ್ದರಿಂದ ಇದು ಅವರ ಕೊನೆಯ ಸಿನಿಮಾ ಆಗಬಹುದು ಎಂಬ ಮಾತು ಕೂಡ ಬಿಟೌನ್ ನಲ್ಲಿ ಹರಿದಾಡುತ್ತಿದೆ.

  ದ್ವಿಪಾತ್ರದಲ್ಲಿ ಅಮೀರ್

  ದ್ವಿಪಾತ್ರದಲ್ಲಿ ಅಮೀರ್

  ಅಂದ್ಹಾಗೆ, 'ಮಹಾಭಾರತ' ಚಿತ್ರದಲ್ಲಿ ಅಮೀರ್ ಖಾನ್ ದ್ವಿಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಅಮೀರ್ ಗೆ ಕೃಷ್ಣನ ಪಾತ್ರ ತುಂಬ ಇಷ್ಟವಂತೆ. ಅದರ ಜೊತೆ ಕರ್ಣನ ಪಾತ್ರ ಮಾಡಬೇಕು ಎನ್ನುವುದು ಆಸೆ ಕೂಡ. ಹೀಗಾಗಿ, ಇವರೆಡು ಪಾತ್ರಗಳು ಅಮೀರ್ ಅವರೇ ಮಾಡಬಹುದು ಎಂಬ ನಿರೀಕ್ಷೆ. ಇನ್ನು ರಾಜಮೌಳಿ ಅವರ ಮಹಾಭಾರತದಲ್ಲೂ ಅಮೀರ್ ಖಾನ್ ಗೆ ಪಾತ್ರವಿದ್ದು, ಕೃಷ್ಣನ ಪಾತ್ರ ಎನ್ನಲಾಗಿತ್ತು.

  ರಾಜಮೌಳಿಗೆ ಸವಾಲಾಗಲಾಗಿದೆ

  ರಾಜಮೌಳಿಗೆ ಸವಾಲಾಗಲಾಗಿದೆ

  ಇನ್ನು ಅಮೀರ್ ಖಾನ್ ಈಗಾಗಲೇ 'ಮಹಾಭಾರತ' ಸಿನಿಮಾವನ್ನ ತೆರೆಗೆ ತರುವ ಪ್ರಯತ್ನ ಆರಂಭಿಸಿದ್ದಾರೆ. ಮತ್ತೊಂದೆಡೆ ರಾಜಮೌಳಿ ಮಹಾಭಾರತವನ್ನ ಆರಂಭಿಸುವುದು ತಡವಾಗಬಹುದು. ರಾಜಮೌಳಿಗೂ ಮುಂಚೆ ಅಮೀರ್ ಖಾನ್ ಮಹಾಭಾರತ ಬಂದ್ರೆ, ರಾಜಮೌಳಿಗೆ ಇದು ಸವಾಲಾಗಬಹುದು. ಯಾಕಂದ್ರೆ, ಒಮ್ಮೆ ನೋಡಿದ ಮಹಾಭಾರತವನ್ನ ಆ ಪರಿಸ್ಥಿತಿಯಲ್ಲಿ ಮತ್ತೆ ತೆರೆಗೆ ತರುವುದು ಸ್ವಲ್ಪ ಚಾಲೆಂಜ್ ಎನಿಸುವುದು.

  'ರಾಜಮೌಳಿ' ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?'ರಾಜಮೌಳಿ' ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?

  English summary
  Superstar Aamir Khan set to work in Mahabharat project. Aamir is going to spend next decade working on this massive project that will stretch into several films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X