ಸ್ಪ್ಯಾನಿಷ್ ಸಿನಿಮಾ ರೀಮೇಕ್ ನಲ್ಲಿ ಅಮೀರ್ ಖಾನ್?

ತಾವು ನಟಿಸುವ ಸಿನಿಮಾಗಳ ಕತೆಗಳನ್ನು ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ ನಟ ಅಮೀರ್ ಖಾನ್. ಅವರು, ರೀಮೇಕ್ ಸಿನಿಮಾಗಳಲ್ಲಿ ನಟಿಸುವುದು ಬಹಳ ಅಪರೂಪ.

ರೀಮೇಕ್ ಸಿನಿಮಾ ಗಜಿನಿಯಲ್ಲಿ ನಟಿಸಿದ್ದ ಅಮೀರ್ ಖಾನ್, ಪ್ರಸ್ತುತ, ಹಾಲಿವುಡ್ ಸಿನಿಮಾ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ.

ಈ ನಡುವೆ ಸ್ಪ್ಯಾನಿಷ್ ಸಿನಿಮಾದ ರೀಮೇಕ್ ನಲ್ಲಿ ನಟಿಸುವಂತೆ ಅಮೀರ್ ಖಾನ್ ಅವರನ್ನು ಸಂಪರ್ಕ ಮಾಡಲಾಗಿದೆ. ಅಮೀರ್ ಖಾನ್‌ಗೂ ಕತೆ ಇಷ್ಟವಾಗಿದೆ ಎನ್ನಲಾಗುತ್ತಿದೆ.

Aamir Khan May Act In Spanish Movie Hindi Remake

ಸ್ಪ್ಯಾನಿಷ್ ನ ಪ್ರಶಸ್ತಿ ವಿಜೇತ ಸಿನಿಮಾ, 'ಚಾಂಪಿಯನ್ಸ್' ಅಥವಾ 'ಚಾಂಪ್ಸ್' ನ ಹಿಂದಿ ರೀಮೇಕ್‌ನಲ್ಲಿ ನಟಿಸಲು ಅಮೀರ್ ಖಾನ್‌ ಅವರನ್ನು ಕೇಳಲಾಗಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಬಾಸ್ಕೆಟ್‌ಬಾಲ್ ಕೋಚ್ ಪಾತ್ರದಲ್ಲಿ ನಟಿಸಲು ಕೋರಲಾಗಿದೆ.

'ಶುಭ್ ಮಂಗಲ್ ಸಾವಧಾನ್' ನಿರ್ದೇಶಿಸಿರುವ ಆರ್‌ಎಸ್ ಪ್ರಸನ್ನ ಈ ಸಿನಿಮಾವನ್ನು ನಿರ್ದೇಶಿಸಲಿದ್ದು, ಈಗಾಗಲೇ ಅಮೀರ್ ಖಾನ್ ಅವರೊಟ್ಟಿಗೆ ಎರಡು ಹಂತದ ಮಾತುಕತೆ ಮಾಡಲಾಗಿದೆ.

ಸ್ಪ್ಯಾನಿಷ್ ನ 'ಚಾಂಪಿಯನ್ಸ್' ಕ್ಲಾಸಿಕ್ ಸಿನಿಮಾ ಆಗಿದ್ದು, 'ಒರಟು, ಕುಡುಕ ಬಾಸ್ಕೆಟ್‌ಬಾಲ್ ಕೋಚ್ ಒಬ್ಬನಿಗೆ ನ್ಯಾಯಾಲಯವು ಶಿಕ್ಷೆಯ ರೂಪದಲ್ಲಿ ಸಮುದಾಯಕ್ಕೆ ಸಹಾಯ ಮಾಡುವಂತೆ ಸೂಚಿಸುತ್ತದೆ. ಆಗ ಬಾಸ್ಕೆಟ್‌ಬಾಲ್ ಕೋಚ್ ಬುದ್ಧಿಮಾಂದ್ಯ ಯುವಕರಿಗೆ ಬಾಸ್ಕೆಟ್ ಬಾಲ್ ಹೇಳಿಕೊಡುತ್ತಾನೆ' ಇದು ಸಿನಿಮಾದ ಕತೆ.

Recommended Video

ಸುಶಾಂತ್ ಸಿಂಗ್ ಸಂಬಂಧಿ ಮೆಲೆ ಗುಂಡಿನ ಧಾಳಿ | Filmibeat kannada

ಪ್ರಸ್ತುತ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಚಿತ್ರೀಕರಣದಲ್ಲಿರುವ ಅಮೀರ್ ಖಾನ್ ಗೆ ಕತೆ ಇಷ್ಟವಾಗಿದ್ದು, ಪ್ರಸ್ತುತ ಸಿನಿಮಾದ ಚಿತ್ರೀಕರಣ, ಬಿಡುಗಡೆ ಮುಗಿದ ಬಳಿಕ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ಇದೆ.

More from Filmibeat

English summary
Aamir Khan may act in Spanish movie Campeones Hindi remake. RS Prasanna going to direct the remake movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X