For Quick Alerts
  ALLOW NOTIFICATIONS  
  For Daily Alerts

  'ಲಾಲ್‌ ಸಿಂಗ್ ಚೆಡ್ಡಾ' ನೋಡುವಂತೆ ಬೇಡಿಕೊಂಡ ನಟ ಆಮಿರ್ ಖಾನ್!

  |

  ಬಾಲಿವುಡ್‌ನಲ್ಲಿ ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ ಆಮಿರ್ ಖಾನ್ ಅಭಿನಯದ 'ಲಾಲ್‌ಸಿಂಗ್ ಚಡ್ಡಾ' ಸಿನಿಮಾ. 'ಲಾಲ್‌ಸಿಂಗ್ ಚಡ್ಡಾ' ಸಿನಿಮಾದ ಟ್ರೈಲರ್ ಸಿನಿಮಾದ ಬಗ್ಗೆ ಭರವಸೆ ಮೂಡಿಸಿದೆ. ಈ ಸಿನಿಮಾ ಚಿತ್ರತಂಡಕ್ಕೆ ಮಾತ್ರವಲ್ಲ ಇಡೀ ಬಾಲಿವುಡ್‌ಗೆ ಅತ್ಯಂತ ಮುಖ್ಯ.

  ಈ ಸಿನಿಮಾ ಸೆಟ್ಟೇರಿ ವರ್ಷಗಳೇ ಕಳೆದಿವೆ. ಕೊರೊನಾ ಕಾರಣದಿಂದಾಗಿ ಸಿನಿಮಾದ ಶೂಟಿಂಗ್ ತಡವಾಗಿದ್ದು ಚಿತ್ರದ ರಿಲೀಸ್ ಕೂಡ ತಡವಾಗಿದೆ. ಇದೀಗ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ.

  ನಿಮ್ಮ ಸಿನಿಮಾದಲ್ಲಿ ನನ್ನ ಬದಲು ಸಲ್ಮಾನ್‌ಗೆ ಅವಕಾಶ ಕೊಟ್ಟಿದ್ದೇಕೆ? ಚಿರಂಜೀವಿಗೆ ಆಮಿರ್ ಪ್ರಶ್ನೆನಿಮ್ಮ ಸಿನಿಮಾದಲ್ಲಿ ನನ್ನ ಬದಲು ಸಲ್ಮಾನ್‌ಗೆ ಅವಕಾಶ ಕೊಟ್ಟಿದ್ದೇಕೆ? ಚಿರಂಜೀವಿಗೆ ಆಮಿರ್ ಪ್ರಶ್ನೆ

  'ಲಾಲ್‌ಸಿಂಗ್ ಚಡ್ಡಾ' ಚಿತ್ರದ ಹೆಸರು ಇತ್ತೀಚೆಗೆ ಹೆಚ್ಚು ಟ್ರೆಂಡಿಂಗ್‌ನಲ್ಲಿ ಇದೆ. ಈ ಚಿತ್ರದ ವಿರುದ್ಧ ಬಹಿಷ್ಕಾರದ ಕೂಗು ಕೇಳಿಬಂದಿತ್ತು. 'ಲಾಲ್‌ಸಿಂಗ್ ಚಡ್ಡಾ' ಬಾಯ್‌ಕಾಟ್ ಎನ್ನುವುದು ಕೆಲವು ದಿನಗಳ ಹಿಂದೆ ಟ್ರೆಂಡಿಂಗ್‌ನಲ್ಲಿ ಇತ್ತು. ಈ ಬಗ್ಗೆ ಈಗ ನಟ ಆಮಿರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅದು ಏನು ಎನ್ನುವುದನ್ನು ಮುಂದೆ ಓದಿ....

  'ಲಾಲ್‌ಸಿಂಗ್ ಚಡ್ಡಾ' ವಿರುದ್ಧ ಬಹಿಷ್ಕಾರದ ಕೂಗು!

  'ಲಾಲ್‌ಸಿಂಗ್ ಚಡ್ಡಾ' ವಿರುದ್ಧ ಬಹಿಷ್ಕಾರದ ಕೂಗು!

  ಈ ಹಿಂದೆಯೂ 'ಲಾಲ್‌ಸಿಂಗ್ ಚಡ್ಡಾ' ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕೂಗು ಕೇಳಿಬಂದಿತ್ತು. ಆಮಿರ್ ಖಾನ್ ನೀಡಿದ ಒಂದು ಹೇಳಿಕೆಯಿಂದಾಗಿ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ವಿಚಾರ ಸದ್ದು ಮಾಡಿತ್ತು.ಇನ್ನು ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ, ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ 'ಲಾಲ್ ಸಿಂಗ್ ಚಡ್ಡಾ' ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಮತ್ತೆ ಕೇಳಿ ಬಂದಿತ್ತು. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ನಿರತವಾಗಿದ್ದು ಈ ವಿಚಾರದ ಬ್ಗಗೆ ನಟ ಆಮಿರ್ ಖಾನ್ ಮಾತನಾಡಿದ್ದಾರೆ.

  ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಆಮಿರ್ ಖಾನ್ ಕಾರಣ: ಅವರದ್ದು ಬ್ಲ್ಯಾಕ್ ಹಾರ್ಟ್!ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಆಮಿರ್ ಖಾನ್ ಕಾರಣ: ಅವರದ್ದು ಬ್ಲ್ಯಾಕ್ ಹಾರ್ಟ್!

  ದಯವಿಟ್ಟು ಸಿನಿಮಾ ನೋಡಿ!

  ದಯವಿಟ್ಟು ಸಿನಿಮಾ ನೋಡಿ!

  ಹಲವು ದಿನಗಳ ಬಳಿಕ ನಟ ಆಮಿರ್ ಖಾನ್ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸಿನಿಮಾ ಬಹಿಷ್ಕಾರದ ಕೂಗು ಕೆಳಿ ಬಂದಿದ್ದರ ಬಗ್ಗೆ ಮಾತನಾಡಿದ್ದಾರೆ. "ದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ. ದಯವಿಟ್ಟು ಸಿನಿಮಾ ನೋಡಿ." ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಬೇಸರವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ.

  ನನ್ನ ಬಗ್ಗೆ ತಪ್ಪು ಕಲ್ಪನೆ ಬೇಡ

  ನನ್ನ ಬಗ್ಗೆ ತಪ್ಪು ಕಲ್ಪನೆ ಬೇಡ

  ಇನ್ನು ನಟ ಆಮಿರ್ ಖಾನ್ ಸಿನಿಮಾ ತಮ್ಮ ಬಗ್ಗೆ ಜನರಿಗೆ ತಪ್ಪು ಕಲ್ಪನೆ ಇದೆ. ಅದರಿಂದಲೇ ಈ ರೀತಿ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. " ನನಗೆ ಭಾರತ ಇಷ್ಟ ಇಲ್ಲ ಎಂದು ಹಲವು ಜನರು ತಪ್ಪು ತಿಳಿದುಕೊಂಡಿದ್ದಾರೆ. ಇದನ್ನು ನಂಬಿದ್ದಾರೆ. ಅವರ ಹೃದಯದಲ್ಲಿ ಈ ವಿಚಾರ ಇಳಿದು ಬಿಟ್ಟಿದೆ. ಈ ಬಗ್ಗೆ ನನಗೆ ಬೇಸರ ಇದೆ. ನನಗೆ ನೋವಾಗುತ್ತದೆ. ಆದರೆ ಏನು ಮಾಡೋದು? ಇದು ದುರಾದೃಷ್ಟ". ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ವಿವಾದಾತ್ಮಕ ಹೇಳಿಕೆ ನೀಡಿದ್ದ ಆಮಿರ್!

  ವಿವಾದಾತ್ಮಕ ಹೇಳಿಕೆ ನೀಡಿದ್ದ ಆಮಿರ್!

  ನಟ ಅಮೀರ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದರ ಬಗ್ಗೆ ಮಾತನಾಡಿದರು. "ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ವ್ಯರ್ಥ. ಈ ಆಚರಣೆ ಅಪ್ರಯೋಜಕ. ಇದರ ಬದಲು ಬಡ ಮಕ್ಕಳಿಗೆ ಅದೇ ದುಡ್ಡಿನಲ್ಲಿ ಸಹಾಯ ಮಾಡಬಹುದು" ಎಂದಿದ್ದರು. ಇದೇ ಹೇಳಿಕೆ ಈಗ ಮತ್ತೆ ವೈರಲ್ ಆಗುತ್ತಿತ್ತು. ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡುವುದು ವ್ಯರ್ಥ. ಈ ಸಿನಿಮಾದ ನೋಡುವುದರ ಬದಲಾಗಿ ಅದೇ ದುಡ್ಡಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಬಹುದು ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

  ಆಗಸ್ಟ್ 11 'ಲಾಲ್‌ಸಿಂಗ್ ಚಡ್ಡಾ' ರಿಲೀಸ್!

  ಆಗಸ್ಟ್ 11 'ಲಾಲ್‌ಸಿಂಗ್ ಚಡ್ಡಾ' ರಿಲೀಸ್!

  ಹಲವು ಬಾರಿ ಈ ಚಿತ್ರದ ರಿಲೀಸ್ ದಿನಾಂಕ ಮುಂದೆ ಹೋಗಿದ್ದು, ಈಗ ಆಗಸ್ಟ್ 11ಕ್ಕೆ 'ಲಾಲ್‌ಸಿಂಗ್ ಚಡ್ಡಾ' ಸಿನಿಮಾ ರಿಲೀಸ್ ಆಗುತ್ತಿದೆ. ಇತ್ತೀಚೆಗೆ 'ಭೂಲ್ ಭುಲಯ್ಯ 2' ಸಿನಿಮಾ ಬಿಟ್ಟರೆ, ಮತ್ಯಾವ ಸಿನಿಮಾ ಕೂಡ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಿಲ್ಲ. ಹಾಗಾಗಿ ಲಾಲ್‌ ಸಿಂಗ್ ಚೆಡ್ಡಾ ಗೆಲ್ಲುವುದು ಬಾಲಿವುಡ್‌ಗೆ ಬಹಳ ಮುಖ್ಯವಾಗಿದೆ.

  English summary
  Aamir Khan Request To Not Boycott Laal Singh Chaddha, And He Request To Watch The Film, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X