ಬಾಯ್‌ಕಾಟ್ ಲೆಕ್ಕಕ್ಕಿಲ್ಲ: ಅಡ್ವಾನ್ಸ್ ಬುಕಿಂಗ್ಸ್‌ನಲ್ಲೇ ಕೋಟಿಗಟ್ಟಲೆ ಬಾಚಿದ ಆಮಿರ್ ಖಾನ್

ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಉಳಿದಿವೆ. ಇದೇ ಆಗಸ್ಟ್ 11 ರಂದು ಸಿನಿಮಾದ ಬಿಡುಗಡೆ ಆಗಲಿದೆ.

ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ, 'ಲಾಲ್ ಸಿಂಗ್ ಚಡ್ಡ' ಸಿನಿಮಾವನ್ನು ಬಾಯ್‌ಕಾಟ್ ಮಾಡಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಲೇ ಇತ್ತು. ಆಮಿರ್ ಖಾನ್‌ ನೀಡಿದ್ದ ಹಳೆಯ ಹೇಳಿಕೆಯೊಂದನ್ನು ಇಟ್ಟುಕೊಂಡು ಈ ರೀತಿ ಟ್ರೆಂಡ್ ಮಾಡಲಾಗುತ್ತಿತ್ತು.

ಇದೀಗ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬಾಯ್‌ಕಾಟ್ ಟ್ರೆಂಡ್‌ನ ನಡುವೆಯೂ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿ ಆಗುತ್ತಿದ್ದು, 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿಯಾಗಿ ಗೆಲ್ಲವು ಮುನ್ಸೂಚನೆ ತೋರಿಸಿದೆ.

Aamir Khan Movie Laal Singh Chaddha Advance Booking Starts Well

'ಲಾಲ್ ಸಿಂಗ್ ಚಡ್ಡ' ಸಿನಿಮಾದ ಅಡ್ವಾನ್ಸ್ ಬುಕಿಂಗ್ಸ್ ಓಪನ್ ಆದ ಕೇವಲ 24 ಗಂಟೆಯ ಒಳಗೆ 1.12 ಕೋಟಿ ರುಪಾಯಿಗಳನ್ನು ಗಳಿಕೆ ಮಾಡಿದೆ. ಅದು ಮಾತ್ರವೇ ಅಲ್ಲದೆ, ಚಿತ್ರಮಂದಿರಗಳಲ್ಲಿ ನೇರವಾಗಿ ಸೀಟು ಬ್ಲಾಕ್ ಮಾಡುವ ಮೂಲಕ ಸುಮಾರು 30 ಲಕ್ಷ ರೂಪಾಯಿ ಗಳಿಸಿದೆ. ಬುಕಿಂಗ್ ಆರಂಭವಾದ ಮೊದಲ ದಿನವೇ ಇಷ್ಟು ಮೊತ್ತ ಗಳಿಸಿರುವುದು ಸಾಮಾನ್ಯ ಸಂಗತಿಯೇನಲ್ಲ.

ಬುಕ್‌ಮೈ ಶೋ ನಲ್ಲಿ ಕಾಣುತ್ತಿರುವಂತೆ 'ಲಾಲ್ ಸಿಂಗ್ ಚಡ್ಡ' ಸಿನಿಮಾಕ್ಕೆ ಮುಂಬೈಗಿಂತಲೂ ಹೈದರಾಬಾದ್‌ನಲ್ಲಿ ಹೆಚ್ಚು ಬುಕಿಂಗ್ಸ್ ಆಗಿವೆ. ಅಲ್ಲದೆ, ಮುಂಬೈನಲ್ಲಿ ಬುಕಿಂಗ್ಸ್ ಇನ್ನಷ್ಟೆ ಸ್ಪೀಡ್ ಪಡೆದುಕೊಳ್ಳಬೇಕಿದೆ. ಆಮಿರ್ ಖಾನ್‌ಗೆ ವಿದೇಶದಲ್ಲೂ ದೊಡ್ಡ ಮಟ್ಟದ ಅಭಿಮಾನಿ ವರ್ಗವಿರುವ ಕಾರಣ ವಿದೇಶಗಳಲ್ಲೂ ಈ ಸಿನಿಮಾ ನೋಡಲು ಜನ ತಾಕರರಾಗಿದ್ದಾರೆ.

ಅದರಲ್ಲಿಯೂ ಆಮಿರ್ ಖಾನ್‌ಗೆ ಚೀನಾದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಆಮಿರ್ ಖಾನ್‌ರ 'ದಂಗಲ್' ಸಿನಿಮಾ ಚೀನಾದಲ್ಲಿ ದೊಡ್ಡ ಬಾಕ್ಸ್‌ ಆಫೀಸ್ ಹಿಟ್ ಆಗಿತ್ತು. ಅವರ '3 ಇಡಿಯಟ್ಸ್' ಸಿನಿಮಾ ಸಹ ಚೀನಾದಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಹಾಗಾಗಿ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಸಹ ಅಲ್ಲಿ ಸೂಪರ್ ಹಿಟ್ ಆಗುವ ನಿರೀಕ್ಷೆ ಚಿತ್ರತಂಡದ್ದು.

ಈ ಸಿನಿಮಾಕ್ಕೆ ಆಮಿರ್ ಖಾನ್ ಅವರೇ ನಿರ್ಮಾಪಕರಾಗಿದ್ದು ಸುಮಾರು 180 ಕೋಟಿ ಬಜೆಟ್ ಅನ್ನು ಸಿನಿಮಾದ ಮೇಲೆ ಹೂಡಿದ್ದಾರೆ. ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದು, ಸಂಗೀತ ನೀಡಿರುವುದು ಪ್ರೀತಂ ಮತ್ತು ತನುಜ್ ಟಿಕು. ಈ ಸಿನಿಮಾವು ಸಾರ್ವಕಾಲಿಕ ಶ್ರೇಷ್ಟ ಸಿನಿಮಾ ಎನಿಸಿಕೊಳ್ಳುವ 'ಫಾರೆಸ್ಟ್ ಗಂಫ್‌'ನ ರೀಮೇಕ್.

More from Filmibeat

English summary
Aamir Khan's new movie Laal Singh Chaddha advance booking starts well. Movie collects 1.12 core in just 24 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X