Don't Miss!
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- News
Vivo ಕಥೆ: ಇಡಿ ದಾಳಿ ಮಾಡಿದರೆ ವ್ಯಾಪಾರಕ್ಕೆ ಅಡ್ಡಿ ಎಂದ ಚೀನಾ ರಾಯಭಾರಿ!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಇಂದು ಒನ್ಪ್ಲಸ್ ಟಿವಿ 50 Y1S ಪ್ರೊ ಫಸ್ಟ್ ಸೇಲ್; ಇದೆ ಭರ್ಜರಿ ಆಫರ್!
- Finance
ಜುಲೈ 07: ನಿಮ್ಮ ನಗರಗಳ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ಕಾಲ್ಕಿತ್ತ ಅಮೀರ್ ಖಾನ್! 'ಕೆಜಿಎಫ್ 2'ಗೆ ಎದುರಾಳಿಯೇ ಇಲ್ಲ?
ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ 'ಕೆಜಿಎಫ್ 2' ಸಿನಿಮಾ ಈ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಏಪ್ರಿಲ್ 14 ಕ್ಕೆ ರಾಕಿ ಭಾಯ್ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾರೆ.
ಎರಡನೇ ಅಲೆ ಬಳಿಕ ಹಲವು ಸಿನಿಮಾಗಳು ನಾ ಮುಂದು ತಾ ಮುಂದು ಎಂದು ಸಿನಿಮಾ ಬಿಡುಗಡೆ ಮಾಡಲು ಹರಸಾಹಸ ಬಡುತ್ತಿರಬೇಕಾದರೆ 'ಕೆಜಿಎಫ್ 2' ಸಿನಿಮಾದ ಬಿಡುಗಡೆಯನ್ನು ಹಲವು ತಿಂಗಳು ಮುಂದಕ್ಕೆ ಹಾಕಿ ಏಪ್ರಿಲ್ 14ರ ದಿನಾಂಕವನ್ನು ತಮಗಾಗಿ ಮೀಸಲಿಟ್ಟಿಕೊಂಡಿತ್ತು ಚಿತ್ರತಂಡ.
'ಕೆಜಿಎಫ್
2'
ಎದುರು
'ಲಾಲ್
ಸಿಂಗ್
ಛಡ್ಡಾ':
ಯಶ್‌ಗೆ
ಕರೆ
ಮಾಡಿ
ಕ್ಷಮೆ
ಕೇಳಿದ
ಅಮೀರ್
ಖಾನ್
ಕೊರೊನಾ ದೃಷ್ಟಿಯಿಂದ ಹಾಗೂ ಇತರ ಸಿನಿಮಾಗಳು ಒಡ್ಡಬಹುದಾದ ಪ್ರತಿಸ್ಪರ್ಧೆಯ ದೃಷ್ಟಿಯಿಂದಲೂ ಈ ದಿನಾಂಕ ಸೇಫ್ ಎಂದುಕೊಳ್ಳಲಾಗಿತ್ತು. ಆದರೆ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಹೊಸ ಸಿನಿಮಾ 'ಲಾಲ್ ಸಿಂಗ್ ಛಡ್ಡಾ'ವನ್ನು ಅಂದೇ ಬಿಡುಗಡೆ ಮಾಡುವುದಾಗಿ ಘೋಷಿಸಿ ಗೊಂದಲ ಉಂಟು ಮಾಡಿದ್ದರು. ಆದರೆ ಈಗ ಅಮೀರ್ ಖಾನ್ ಏಪ್ರಿಲ್ 14 ರಿಂದ ಮುಂದೆ ಹೋಗಿದ್ದು ತಮ್ಮ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಪ್ರಕಟಿಸಿದ್ದಾರೆ.

ಬೈಸಾಕಿ ಹಬ್ಬಕ್ಕೆ ಬಿಡುಗಡೆ ಮಾಡಲು ಯೋಜನೆ
ಏಪ್ರಿಲ್ 14 ರಂದು ಪಂಜಾಬಿಗಳ ಪವಿತ್ರ ಹಬ್ಬ ಬೈಸಾಕಿ ಇದ್ದು 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಅಮೀರ್ ಖಾನ್ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಅದೇ ದಿನ ಸಿನಿಮಾವನ್ನು ಬಿಡುಗಡೆ ಮಾಡಲು ಅಮೀರ್ ಖಾನ್ ಇಚ್ಛಿಸಿದ್ದರು. 'ಕೆಜಿಎಫ್ 2' ಸಿನಿಮಾದ ಬಿಡುಗಡೆ ದಿನಾಂಕದಂದೇ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಿರುವುದಕ್ಕೆ ಯಶ್ ಹಾಗೂ ನಿರ್ಮಾಪಕರ ಬಳಿ ಕ್ಷಮೆ ಕೇಳಿದ್ದಾಗಿ ಅಮೀರ್ ಖಾನ್ ಹೇಳಿದ್ದರು.
ಬಾಹುಬಲಿ
ಸಿರೀಸ್
ಹಾಗೂ
3
ಈಡಿಯಟ್ಸ್‌ಗಿಂತೂ
'ಪುಷ್ಪ'
ಗ್ರೇಟ್
ಎಂದ
ಬಾಲಿವುಡ್
ನಟ
ಆಮಿರ್
ಖಾನ್

ಬಿಡುಗಡೆ ದಿನಾಂಕ ಮುಂದೂಡಿಕೆ
ಆದರೆ ಈಗ ತಮ್ಮ ಬಿಡುಗಡೆ ದಿನಾಂಕವನ್ನು ಆಗಸ್ಟ್ 11 ಕ್ಕೆ ಮುಂದೂಡಿಕೊಂಡಿದ್ದಾರೆ ಅಮೀರ್ ಖಾನ್. ಸಿನಿಮಾವು ನಿರೀಕ್ಷಿತ ಸಮಯದಲ್ಲಿ ಪೂರ್ಣ ಆಗದ ಕಾರಣ ಈ ನಿರ್ಣಯವನ್ನು ಅಮೀರ್ ಖಾನ್ ಹಾಗೂ ಚಿತ್ರತಂಡ ತೆಗೆದುಕೊಂಡಿದೆ. ಆಗಸ್ಟ್ 11 ರಂದು ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಅಮೀರ್ ಖಾನ್ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣ ಅವರು ತಮ್ಮ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಕೊಂಡಿದ್ದಾರೆ.

'ಕೆಜಿಎಫ್ 2' ಗೆ ಎದುರಾಳಿಯೇ ಇಲ್ಲವೆ?
'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಮುಂದೂಡಲ್ಪಟ್ಟಿದೆ ಎಂದ ಮಾತ್ರಕ್ಕೆ 'ಕೆಜಿಎಫ್ 2' ಸಿನಿಮಾಕ್ಕೆ ಎದುರಾಳಿಯೇ ಇಲ್ಲ ಎಂದೇನೂ ಇಲ್ಲ. ಏಪ್ರಿಲ್ 14 ರಂದು ನಟ ಶಾಹಿದ್ ಕಪೂರ್ ನಟನೆಯ ಹಿಂದಿ ಸಿನಿಮಾ 'ಜೆರ್ಸಿ' ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ನಾನಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ 'ಜೆರ್ಸಿ' ಸಿನಿಮಾದ ರೀಮೇಕ್ ಈ ಸಿನಿಮಾ. ಆದರೆ ಈ ಸಿನಿಮಾವು 'ಕೆಜಿಎಫ್ 2' ಗೆ ಪ್ರಬಲ ಪೈಪೋಟಿ ಕೊಡಲಾರದು ಎಂದೇ ಹೇಳಲಾಗುತ್ತಿದೆ. ಮತ್ತೊಂದು ಸಂಗತಿಯೆಂದರೆ ಶಾಹಿದ್ ಕಪೂರ್‌ರ 'ಜೆರ್ಸಿ' ಸಿನಿಮಾದ ಬಿಡುಗಡೆಯೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಹಾಲಿವುಡ್
ನಟನಿಗಾಗಿ
ವಿಶೇಷ
ಶೋ
ಆಯೋಜಿಸಲಿರುವ
ಅಮೀರ್
ಖಾನ್:
ಕಾರಣ?

ಫಾರೆಸ್ಟ್ ಗಂಫ್ ಸಿನಿಮಾ ರೀಮೇಕ್
'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಇಂಗ್ಲೀಷ್‌ನ 'ಫಾರೆಸ್ಟ್ ಗಂಪ್' ಪುಸ್ತಕ ಆಧರಿಸಿ ನಿರ್ಮಿಸಿರುವ ಸಿನಿಮಾ ಆಗಿದೆ. ಇದೇ ಪುಸ್ತಕ ಆಧರಿಸಿ ಇಂಗ್ಲೀಷ್‌ನಲ್ಲಿ 1994ರಲ್ಲಿಯೇ ಇದೇ ಹೆಸರಿನ ಸಿನಿಮಾ ನಿರ್ಮಾಣ ಮಾಡಲಾಗಿದೆ. ಟಾಮ್ ಹ್ಯಾಂಕ್ಸ್ ನಟನೆಯ ಈ ಸಿನಿಮಾ ವಿಶ್ವದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಲವು ಆಸ್ಕರ್ ಪ್ರಶಸ್ತಿಗಳನ್ನು ಸಹ ಆ ವರ್ಷ ಪಡೆದುಕೊಂಡಿತ್ತು. ಇಂಗ್ಲೀಷ್‌ನಲ್ಲಿ ಟಾಮ್ ಹ್ಯಾಂಕ್ಸ್ ಮಾಡಿದ್ದ ಪಾತ್ರವನ್ನು ಇದೀಗ ಅಮೀರ್ ಖಾನ್ ನಿರ್ವಹಿಸುತ್ತಿದ್ದು ಈ ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನ ನಾಗ ಚೈತನ್ಯ ಸಹ ಈ ಸಿನಿಮಾದಲ್ಲಿದ್ದಾರೆ.