ರೀಮೇಕ್ ಸಿನಿಮಾದಲ್ಲಿ ಅಮೀರ್ ಖಾನ್: ಪಾತ್ರಕ್ಕಾಗಿ 20 ಕೆ.ಜಿ ಇಳಿಸಿಕೊಂಡ ನಟ

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ನಂತರ ಅಮೀರ್ ಖಾನ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಯಾಕೆಂದರೆ ಅಮೀರ್ ಸಿನಿಮಾ ಅಂದ್ರೆನೇ ಸಿನಿಪ್ರೇಕ್ಷಕರಲ್ಲಿ ವಿಶೇಷವಾದ ಕುತೂಹಲ ಮತ್ತು ನಿರೀಕ್ಷೆ ಸ್ವಲ್ಪ ಜಾಸ್ತಿ ಇರುತ್ತೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರು ಪ್ರೇಕ್ಷಕರನ್ನು ಮತ್ತೆ ಮತ್ತೆ ಕಾಡುವಂತಹ ಸಿನಿಮಾಗಳಾಗಿರುತ್ತೆ.

ಹೀರೋಯಿಸಂ, ಡೈಲಾಗ್ ಗಳ ಅಬ್ಬರ, ಅತಿಯಾದ ಆಕ್ಷನ್ ಗಳಿಲ್ಲದೇ ಬಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿರುವ ಅಮೀರ್ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದಾರೆ. ಸದಾ ಹೊಸತನದ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಅಮೀರ್ ಈಗ ರೀಮೇಕ್ ಚಿತ್ರಕ್ಕೆ ಸೈ ಎಂದಿದ್ದಾರೆ. ಅನೇಕ ವರ್ಷಗಳ ಬಳಿಕ ಅಮೀರ್, ರೀಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಹೌದು, ಆಸ್ಕರ್ ಗೆದ್ದ ಹಾಲಿವುಡ್ ನ 'ಫಾರೆಸ್ಟ್ ಗಂಪ್' ಸಿನಿಮಾ ಚಿತ್ರವನ್ನ ಹಿಂದಿಯಲ್ಲಿ ಮಾಡುತ್ತಿದ್ದಾರೆ. 1994ರಲ್ಲಿ ರೀಲೀಸ್ ಆಗಿದ್ದ 'ಫಾರೆಸ್ಟ್ ಗಂಪ್' ಅಮೀರ್ ಖಾನ್ ಅವರನ್ನ ತುಂಬಾ ಕಾಡಿದ ಚಿತ್ರವಂತೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದಾರಂತೆ.

Aamir khan new movie lal singh chadha confirmed

ಇನ್ನು ಚಿತ್ರಕ್ಕೆ 'ಲಾಲ್ ಸಿಂಗ್ ಚಡ್ಡಾ' ಅಂತ ಟೈಟಲ್ ಇಡಲಾಗಿದೆ. 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಪಾತ್ರಕ್ಕಾಗಿ ಅಮೀರ್ 20 ಕೆಜಿ ತೂಕ ಇಳಿಸಿಕೊಳ್ಳಬೇಕಂತೆ. ಹಾಗಾಗಿ ಚಿತ್ರದ ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಿಕೊಳ್ಳಬೇಕಾಗಿರುವ ಕಾರಣ 6 ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ. ಅಮೀರ್ ಖಾನ್ ಸಂಪೂರ್ಣ ತಯಾರಿ ಬಳಿಕ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಸೆಟ್ಟೇರಲಿದೆ. ಈ ಹಿಂದೆ 'ಸೂಪರ್ ಸೀಕ್ರೆಟ್ ಸ್ಟಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅದ್ವೈತ್ ಚಂದನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Aamir khan new movie 'lal singh chadha' confirmed after 'thugs of hindustan'. this movie is remake of hollywood oscar winning 'forrest gump' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X