ಫಿಟ್‌ನೆಸ್ ಕಾಳಜಿಯಿಂದ ಪಾರ್ಟಿಗೂ ಟಿಫಿನ್ ಬಾಕ್ಸ್ ಒಯ್ಯುತ್ತಿದ್ದ ಆಮಿರ್ ಖಾನ್!
ಪಾತ್ರವೊಂದಕ್ಕೆ ಜೀವ ತುಂಬುವ ಮಾತು ಬಂತೆಂದರೆ ಕನ್ನಡದ ಮಟ್ಟಿಗೆ ಡಾ.ರಾಜ್ ರವರನ್ನು ಮೀರಿಸುವ ನಟ ಇನ್ನೊಬ್ಬನಿಲ್ಲ. ಅಂತೆಯೇ ಬಾಲಿವುಡ್ ನಲ್ಲಿ ಈ ಗುಣವನ್ನು ಖ್ಯಾತ ಚಿತ್ರನಟ ಆಮಿರ್ ಖಾನ್ ಪಡೆದಿದ್ದಾರೆ ಎಂದು ಹೇಳಬಹುದು. ಪಾತ್ರವೊಂದಕ್ಕೆ ಜೀವತುಂಬಲು ತಮ್ಮ ದೇಹವನ್ನು ಅದೆಷ್ಟೇ ಕಷ್ಟ ಎನಿಸಿದರೂ ಮಾಡೇ ತೀರುತ್ತೇನೆ ಎಂದು ಛಲ ತೊಟ್ಟು ದೇಹ ಹುರಿಗೊಳಿಸುತ್ತಾರೆ. ಇದು ಎಂತಹವರನ್ನು ಅಚ್ಚರಿಗೆ ದೂಡುತ್ತೆ.
ಅತ್ಯಂತ ಕಾಳಜಿಯಿಂದ ತಮ್ಮ ಪಾತ್ರವನ್ನು ಆಯ್ದುಕೊಳ್ಳುವ ಆಮಿರ್ ಖಾನ್ ಪಾತ್ರಕ್ಕೆ ಯಾವುದೇ ರೀತಿಯಲ್ಲಿ ಮೋಸ ಮಾಡುವವರಲ್ಲ. ತನ್ನ ವೃತ್ತಿ ಜೀವನದುದ್ದಕ್ಕೂ ಫಿಟ್‌ನೆಸ್ ಕಾಯ್ದುಕೊಂಡು ಬಂದಿರುವ ಆಮಿರ್ ಖಾನ್ ತನ್ನ ದೇಹವನ್ನು ಎಷ್ಟು ಇಷ್ಟ ಪಡುತ್ತಾರೆ, ಫಿಟ್‌ನೆಸ್ ಅಂತ ಬಂದರೇ ಅದನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ, ಡಯೆಟ್ ವಿಚಾರವನ್ನು ಹೇಗೆ ಮಿಸ್ ಇಲ್ಲದೇ ಪಾಲಿಸುತ್ತಾರೆ ಅನ್ನೋದಕ್ಕೆ ಒಂದು ನೈಜ ಉದಾಹರಣೆ ಸಿಕ್ಕಿದೆ. ಅದೇನು ಅಂತ ಮುಂದೆ ಹೇಳ್ತಿವಿ ನೋಡಿ.
ಆಮಿರ್ ಖಾನ್ ಕೇವಲ ನಟನೆ ಮಾತ್ರವಲ್ಲ, ಅದಕ್ಕೆ ಪೂರಕವಾಗಿಯೂ ಸಿದ್ಧರಾಗುತ್ತಾರೆ. 2008ರಲ್ಲಿ ಬಿಡುಗಡೆಯಾಗ 'ಘಜನಿ' ಎಂಬ ಚಿತ್ರದಲ್ಲಿ ಅದ್ಭುತವಾಗಿ ದಂಡಿಸಿಕೊಂಡು ದೇಹಕ್ಕೊಂದು ಖಡಕ್ ಶೇಪ್ ನೀಡಿದ್ದ ಆಮಿರ್ ಖಾನ್ ಫಿಟ್‌ನೆಸ್ ಎಲ್ಲರನ್ನೂ ದಂಗುಬಡಿಸಿತ್ತು. ಆಮಿರ್ ಖಾನ್ ಅವರು ತೆರೆಯ ಮೇಲೆ ನಿರ್ವಹಿಸುವ ಪಾತ್ರಗಳಿಗೆ ಸರಿಹೊಂದುವಂತೆ ದೇಹವನ್ನು ತಯಾರು ಮಾಡಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆಯೇ ಪಿಟ್‌ನೆಸ್ ಹಾಳಾಗಬಾರದು ಎಂದು ಆಮಿರ್ ಖಾನ್ ದೊಡ್ಡ ದೊಡ್ಡ ಪಾರ್ಟಿಗಳಿಗೆ ಹೋದರು ತನ್ನದೇ ಆದ ಟಿಫಿನ್ ಬಾಕ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಪಾರ್ಟಿಗಳಲ್ಲಿ ತಯಾರಿಸಿದ್ದ ಯಾವುದೇ ಆಹಾರವನ್ನು ಆಮಿರ್ ಖಾನ್ ಸೇವಿಸುತ್ತಿರಲಿಲ್ಲ. ಎಷ್ಟೇ ರುಚಿಕರವಾದ ಖಾದ್ಯವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲಾ ಎಂದು ಬಾಲಿವುಡ್‌ನ ಖ್ಯಾತ ಮ್ಯಾಗಝಿನ್ ಪ್ರಕಟ ಮಾಡಿದೆ.

ಹೌದು, ನೀಮಗೆ ಇದು ನಂಬಲು ಅಸಾಧ್ಯವಾದರೂ ಇದು ನಿಜ. ಒಮ್ಮೆ ಆಮಿರ್ ಖಾನ್ ಅವರನ್ನು ಅವರ ಸ್ನೇಹಿತ ಶಾರುಖ್ ಖಾನ್ ಅವರ ನಿವಾಸದಲ್ಲಿ ಪಾರ್ಟಿಗೆ ಆಹ್ವಾನಿಸಿದ್ದರು. ಭಾರತದಲ್ಲಿ ಆಪಲ್ ಕಂಪೆನಿಯ ಸಿಇಒ ಟಿಮ್ ಕುಕ್ ಅವರನ್ನು ಸ್ವಾಗತಿಸಲು ಪಾರ್ಟಿಯನ್ನು ಶಾರುಖ್ ಖಾನ್ ನಿವಾಸದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮೊಂದಿಗೆ ಊಟ ಮಾಡದೆ ಹೋಗಬೇಡಿ ಎಂದು ಗೌರಿ ಖಾನ್ ಆಮಿರ್ ಖಾನ್‌ಗೆ ಹೇಳಿದರಂತೆ. ಆಗ ಆಮಿರ್ ಖಾನ್ ಕೂಡ ಖಂಡಿತಾ ಇರುತ್ತೇನೆ ಎಂದಿದ್ದಾರೆ. ಆದರೇ ಎಲ್ಲರೂ ಊಟ ಮಾಡುವ ಸಂದರ್ಭದಲ್ಲಿ ಆಮಿರ್ ಖಾನ್ ಮಾತ್ರ ಎಲ್ಲರಿಗೂ ಆಶ್ಚರ್ಯವಾಗುವಂತೆ, ಅವರು ಟಿಫಿನ್ ಬಾಕ್ಸ್‌ನಲ್ಲಿ ತಂದಿದ್ದ ಆಹಾರವನ್ನು ತಿನ್ನುತ್ತಿದ್ದರಂತೆ. ಇದು ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯ ಕೂಡ ಉಂಟು ಮಾಡಿತ್ತು ಎನ್ನಲಾಗುತ್ತಿದೆ.

'ದಂಗಲ್' ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಬೇಕಿದ್ದ ಆಮಿರ್ ಖಾನ್ ಆ ಸಮಯದಲ್ಲಿ ಕಟ್ಟುನಿಟ್ಟಿನ ಡಯಟ್‌ನಲ್ಲಿದ್ದರು. ಮತ್ತು ಪಾರ್ಟಿಗಳಲ್ಲಿ ಏನನ್ನೂ ತಿನ್ನಲು ಅವರಿಗೆ ಅವಕಾಶವಿರಲಿಲ್ಲ. ಆದ್ದರಿಂದ ಆಮಿರ್ ಖಾನ್ ತನ್ನ ಆಹಾರವನ್ನು ತಾವೇ ಸಿದ್ಧಪಡಿಸಿಕೊಂಡು ಬಾಕ್ಸ್‌ನಲ್ಲಿ ಕೊಂಡೊಯ್ಯುತ್ತಿದ್ದರಂತೆ. ಆಮಿರ್ ಖಾನ್ ಈ ಹಿಂದೆ ಕೂಡ 'ಘಜಿನಿ' ಚಿತ್ರಕ್ಕಾಗಿ ಬಲ್ಕ್ ಅಪ್ ಮಾಡಿದ್ದರು ಮತ್ತು 'ದಂಗಲ್' ಚಿತ್ರಕ್ಕಾಗಿ ಹಲವಾರು ಕೆಜಿಗಳನ್ನು ಹೆಚ್ಚಿಸಿಕೊಂಡರು ಮತ್ತು ತೂಕ ಇಳಿಸಿಕೊಂಡಿದ್ದರು. ಈ ಸಿನಿಮಾಗೂ ಆಮಿರ್ ಖಾನ್ ವೀಕ್ಷಕರಿಂದ ಉತ್ತಮ ಪ್ರತಿಕ್ರೀಯೆ ಪಡೆದಿದ್ದರು ಅನ್ನೋದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಆಮಿರ್ ಖಾನ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೇ ವ ಪ್ರಸ್ತುತ ಅವರ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮ '3 ಈಡಿಯಟ್ಸ್' ಮತ್ತು 'ತಲಾಶ್' ಸಹನಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ನಾಗ ಚೈತನ್ಯ ಮತ್ತು ಮೋನಾ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.'ಲಾಲ್ ಸಿಂಗ್ ಚಡ್ಡಾ' ಏಪ್ರಿಲ್ 14, 2022 ರಂದು ಥಿಯೇಟರ್‌ಗೆ ಲಗ್ಗೆ ಇಡಲಿದೆ.


Click it and Unblock the Notifications










