»   » 300 ಕೋಟಿ ಗಳಿಕೆ: ಪಿಕೆ 'ಸಾರ್ವಕಾಲಿಕ ಬ್ಲಾಕ್ ಬ್ಲಾಸ್ಟರ್ ಚಿತ್ರ'

300 ಕೋಟಿ ಗಳಿಕೆ: ಪಿಕೆ 'ಸಾರ್ವಕಾಲಿಕ ಬ್ಲಾಕ್ ಬ್ಲಾಸ್ಟರ್ ಚಿತ್ರ'

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಧೂಮ್ 3' ಚಿತ್ರಕ್ಕಿಂತ ಬಿಗ್ ಓಪನ್ನಿಂಗ್ ಪಡೆದುಕೊಂಡು 'ಸಿಂಗಂ ರಿಟರ್ನ್ಸ್' ಮತ್ತು 'ಬ್ಯಾಂಗ್ ಬ್ಯಾಂಗ್' ಚಿತ್ರಗಳಿಗಿಂತಲೂ ಕಮ್ಮಿ ಕಲೆಕ್ಷನ್ ಗಳಿಸಿ ಮಾರುಕಟ್ಟೆ ತಜ್ಞರ ಲೆಕ್ಕಾಚಾರ ತಲೆ ಕೆಳಗು ಮಾಡಿದ್ದ ಅಮೀರ್ ಖಾನ್ ಅವರ ಪಿಕೆ ಚಿತ್ರ ಎಲ್ಲರಿಗೂ ಅಚ್ಚರಿಯಾಗುವಂತೆ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ 17 ದಿನಕ್ಕೆ 300 ಕೋಟಿ ರು ಕ್ಲಬ್ ಅಕೌಂಟ್ ಓಪನ್ ಮಾಡಿ ಸಾರ್ವಕಾಲಿಕ ಬ್ಲಾಕ್ ಬ್ಲಾಸ್ಟರ್ ಚಿತ್ರ ಎಂಬ ಪಟ್ಟ ಗಳಿಸಿದೆ.

ಡಿಸೆಂಬರ್ 19ರಂದು ತೆರೆಕಂಡ 'ಪಿಕೆ' ಆ ಚಿತ್ರ ಹಾಗೂ ಹೀಗೂ ನಾಲ್ಕು ದಿನಗಳಲ್ಲಿ ನೂರು ಕೋಟಿ ಗಳಿಕೆ ದಾಟುವ ಮೂಲಕ ಮತ್ತೊಮ್ಮೆ ಆಮೀರ್ ಖಾನ್ ಯಶಸ್ವಿ ಚಿತ್ರಗಳ ಸರದಾರ ಎನಿಸಿಕೊಂಡಿದ್ದರು. ಅದರೆ, ದೇಶಿ ಮಾರುಕಟ್ಟೆಯಲ್ಲಿ 300 ಕೋಟಿ ರು ಗಡಿ ದಾಟುವುದು ಸಾಧ್ಯವೇ ಇಲ್ಲ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದರು.[ಕೇಕೆ ಹಾಕಿದ ಅಮೀರ್ ಖಾನ್ 'ಪಿಕೆ']

ಆದರೆ, ಪಿಕೆ ಚಿತ್ರದ ನಿರ್ದೇಶಕ ರಾಜಕುಮಾರ್ ಹಿರಾನಿ ಲಕ್ ಮತ್ತೆ ತಿರುಗಿದ್ದು ಮತ್ತೊಮ್ಮೆ ಹಿಟ್ ಚಿತ್ರಗಳ ನಿರ್ದೇಶಕ ಎನಿಸಿಕೊಂಡಿದ್ದಾರೆ. 2013ರಲ್ಲಿ ಧೂಮ್-3 265 ಕೋಟಿ ಗಳಿಸಿದ್ದರೆ, ಚೆನ್ನೈ ಎಕ್ಸ್ ಪ್ರೆಸ್ 258 ಕೋಟಿ ಹಾಗೂ ಸಲ್ಮಾನ್ ಖಾನ್‌ನ ಕಿಕ್ 2014ರಲ್ಲಿ 200 ಕೋಟಿ ರೂ. ಗಳಿಸಿತ್ತು. ಈಗ ಪಿಕೆ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುವ ಸುಳಿವು ನೀಡಿದೆ.

200 ಕೋಟಿ ರು ಕ್ಲಬ್ ಸೇರುವುದಿಲ್ಲ ಎಂದಿದ್ದರು
  

200 ಕೋಟಿ ರು ಕ್ಲಬ್ ಸೇರುವುದಿಲ್ಲ ಎಂದಿದ್ದರು

ಅಂಕಿ ಅಂಶಗಳ ಲೆಕ್ಕಾಚಾರ ಹಾಕಿದರೆ ಪಿಕೆ ಚಿತ್ರ 180 ಕೋಟಿ ರು ಗಳಿಕೆ ಮಾಡಿದರೆ ಹೆಚ್ಚು ಎನ್ನಬಹುದು. ದೇಶಿ ಮಾರುಕಟ್ಟೆಯಲ್ಲಿ 200 ಕೋಟಿ ರು ದಾಟಿದರೆ ಎಲ್ಲವೂ ಭಗವಂತನ ಕೃಪೆ. ಸದ್ಯಕ್ಕೆ ಅಮೀರ್ ಚಿತ್ರ ಗಳಿಕೆಗೆ ಕ್ರಿಸ್ಮಸ್ ಸೀಸನ್ ನ ಕೃಪೆ ಸಿಗಬೇಕಿದೆ ಎಂಬ ಮಾತನ್ನು ಅಳಿಸಿ ಹಾಕಿ ಪಿಕೆ ಈಗ ದೇಶಿ ಮಾರುಕಟ್ಟೆಯಲ್ಲಿ 17ನೇ ದಿನಕ್ಕೆ 300 ಕೋಟಿ ರು ಗಳಿಸಿ ಎಲ್ಲರ ಹುಬ್ಬೇರಿಸಿದೆ.

ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್

ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿ ಸೋಮವಾರ 4.42 ಕೋಟಿ ರು ಗಳಿಸುವ ಮೂಲಕ 18ನೇ ದಿನದ ಲೆಕ್ಕಾಚಾರದಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಪಿಕೆ 309.69 ಕೋಟಿ ರು ಭಾರತವೊಂದರಲ್ಲೇ ಗಳಿಸಿದೆ ಎಂದಿದ್ದಾರೆ.

ಸಾಗರೋತ್ತರ ದೇಶಗಳಲ್ಲೂ ಉತ್ತಮ ಗಳಿಕೆ

ಸಾಗರೋತ್ತರ ದೇಶಗಳಲ್ಲೂ ಉತ್ತಮ ಗಳಿಕೆ ಮುಂದುವರೆಸಿರುವ ಪಿಕೆ ಚಿತ್ರ ಇಲ್ಲಿ ತನಕ ಸುಮಾರು 23.42 ಮಿಲಿಯನ್ ಡಾಲರ್( 148.64 ಕೋಟಿ ರು ಗಳಿಸಿದೆ. ಯುಎಸ್ ಕೆನಡಾದಲ್ಲಿ 62.99 ಕೋಟಿ ರು ಅಧಿಕ ಗಳಿಕೆ ಎನಿಸಿದೆ

ಆತಂಕ ಮೂಡಿಸಿದ್ದ ಆರಂಭಿಕ ಗಳಿಕೆ
  

ಆತಂಕ ಮೂಡಿಸಿದ್ದ ಆರಂಭಿಕ ಗಳಿಕೆ

ಐದನೇ ದಿನ 19 ಕೋಟಿ ರು ಸೇರಿ ಒಟ್ಟಾರೆ ನಿವ್ವಳ ಗಳಿಕೆ ದೇಶಿ ಮಾರುಕಟ್ಟೆಯಲ್ಲಿ 136.61 ಕೋಟಿ ರು ದಾಟಿತ್ತು.
ಮೊದಲ ನಾಲ್ಕು ದಿನ:
ಶುಕ್ರವಾರ : 26.63 ಕೋಟಿ ರೂಪಾಯಿ
ಶನಿವಾರ : 30.34 ಕೋಟಿ ರೂಪಾಯಿ
ಭಾನುವಾರ : 38.44 ಕೋಟಿ ರೂಪಾಯಿ
ಸೋಮವಾರ : 21.22 ಕೋಟಿ ರೂಪಾಯಿ

ಚಿತ್ರದ ಗಳಿಕೆ ಮಾತ್ರ ಏರಿಕೆಯಾಗುತ್ತಿಲ್ಲ ಶೇ 20ರಷ್ಟು ಕುಸಿತ ಕಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಅದರೆ, ನಿರೀಕ್ಷೆಯನ್ನು ಹುಸಿ ಮಾಡಿದೆ.

 

300 ಕೋಟಿ ಕ್ಲಬ್ ಸೇರಿದ ಪಿಕೆ

300 ಕೋಟಿ ಕ್ಲಬ್ ಸೇರಿದ ಪಿಕೆ ಬಗ್ಗೆ ತರಣ್ ಆದರ್ಶ್ ಟ್ವೀಟ್

English summary
"PK" or "Peekay" has now achieved the title of "All Time Blockbuster" with its stupendous box office performance. The film directed by Rajkumar Hirani features Aamir Khan and Anushka Sharma in lead roles. the film recorded the highest 18th day collection at the domestic box office.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada