ಅಮೀರ್ ಖಾನ್ ಕ್ರಾಂತಿಕಾರಿ ನಡೆ, ಇನ್ಮುಂದೆ ಓಟಿಟಿಯಲ್ಲಿ ಬಿಡುಗಡೆಯಾಗಲ್ಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನಿಮಾ..!

ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಅಮೀರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್ ಚೇಂಜರ್ ಕೂಡ ಹೌದು.

ಎಲ್ಲರೂ ಏಕಕಾಲಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣವನ್ನೂ ಮಾಡುವ ಸಮಯದಲ್ಲಿ ನಾನು ಒಂದು ಚಿತ್ರ ಮುಗಿಯುವವರೆಗೆ ಇನ್ನೊಂದು ಚಿತ್ರ ಮಾಡಲಾರೆ ಎಂದ ಅಮೀರ್ ಖಾನ್, ಆ ನಂತರ ವಿಭಿನ್ನವಾಗಿ ಚಿತ್ರಗಳ ಪ್ರಚಾರ ಮಾಡುವುದು ಹೇಗೆ ಎನ್ನುವುದನ್ನೂ ಕೂಡ ಬಾಲಿವುಡ್‌ನಲ್ಲಿ ಅನೇಕರಿಗೆ ತೋರಿಸಿದರು. ಮಾದರಿಯಾದರು. ಇಂಥಾ ಅಮೀರ್ ಖಾನ್ ಸದ್ಯಕ್ಕೆ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ತಮ್ಮ ಚಿತ್ರದ ಹಕ್ಕುಗಳನ್ನೂ ಅಮೆಜಾನ್, ನೆಟ್‌ಪ್ಲಿಕ್ಸ್, ಡಿಸ್ನಿ ಹಾಟ್ ಸ್ಟಾರ್ ಸೇರಿ ಉಳಿದ ಓಟಿಟಿ ಫ್ಲ್ಯಾಟ್‌ ಫಾರ್ಮ್‌ಗೆ ಮಾರದಿರಲು ನಿರ್ಧರಿಸಿದ್ದಾರೆ.

Aamir Khan poised to revolutionize India s theatrical releases with a major OTT decision

ಹೌದು, ನಿಮಗೆ ಗೊತ್ತು. ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡುತ್ತಿದ್ದರು. ಆ ಚಿತ್ರ ಟಿವಿಯಲ್ಲಿ ಪ್ರಸಾರವಾಗಲು ಬಹುತೇಕ ಒಂದು ವರ್ಷದ ಸಮಯ ಹಿಡಿಯುತ್ತಿತ್ತು. ಆದರೆ. ಈಗ ಬದಲಾದ ಕಾಲದಲ್ಲಿ ಚಿತ್ರ ತೆರೆಗೆ ಬಂದು ನಾಲ್ಕು ವಾರ ಕೂಡ ಆಗಿರುವುದಿಲ್ಲ. ಆಗಲೇ ಆ ಚಿತ್ರ ಮೊಬೈಲ್ ಹಾಗೂ ಟಿವಿಗಳ ಮೂಲಕ ಎಲ್ಲರನ್ನೂ ತಲುಪಿರುತ್ತೆ. ಓಟಿಟಿ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತೆ.

ಈ ಹಿನ್ನೆಲೆ ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಚಿತ್ರ ಹೇಗೂ ಇನ್ನೊಂದೆರಡು ವಾರದಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತೆ, ಆಗ ನೋಡಿದರೆ ಆಯಿತು ಎನ್ನುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಪ್ರೇಕ್ಷಕರ ಈ ಮನಸ್ಥಿತಿಯನ್ನು ಅಮೀರ್ ಖಾನ್ ಈಗ ಬದಲಿಸಲು ಮುಂದಾಗಿದ್ದಾರೆ.

Aamir Khan poised to revolutionize India s theatrical releases with a major OTT decision

ಚಿತ್ರದ ಬಿಡುಗಡೆಗೆ ಮುನ್ನವೇ ತಮ್ಮ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಮಾರುವುದಿಲ್ಲ ಎಂದಿರುವ ಅಮೀರ್ ಖಾನ್, ಚಿತ್ರ ಬಿಡುಗಡೆಯಾದ ಹನ್ನೆರಡು ವಾರದ ನಂತರ ಓಟಿಟಿ ಅವರು ತಮ್ಮನ್ನು ಸಂಪರ್ಕಿಸಬಹುದು ಎಂದಿದ್ದಾರೆ. ಇನ್ನೂ ಈ ಹನ್ನೆರಡು ವಾರದಲ್ಲಿ ಪ್ರೇಕ್ಷಕರ ಅಭಿಪ್ರಾಯ ಗೊತ್ತಾಗಿರುತ್ತೆ. ಚಿತ್ರ ಗೆದ್ದಿದೆಯಾ ಸೋತಿದೆಯಾ ಎನ್ನುವುದರ ಕುರಿತು ಸ್ಪಷ್ಟ ಚಿತ್ರಣವೂ ಸಿಕ್ಕಿರುತ್ತೆ. ಹೀಗಾಗಿ ಚಿತ್ರ ಗೆದ್ದಿದ್ದರೆ ಹೆಚ್ಚಿನ ಮೊತ್ತವನ್ನು ನೀಡಿ, ಸೋತರೆ ನಿಮಗೆ ಎಷ್ಟು ಕೊಡಬೇಕು ಅನಸುತ್ತೆ ಅಷ್ಟೇ ಕೊಡಿ ಎಂದಿದ್ದಾರೆ ಅಮೀರ್ ಖಾನ್.

ಅಂದ್ಹಾಗೇ ಅಮೀರ್ ಖಾನ್ ಅವರ ಈ ನಿರ್ಧಾರಕ್ಕೆ ಈ ಹಿಂದೆ ಅವರದ್ದೇ ನಿರ್ಮಾಣದಲ್ಲಿ ಬಂದ ಲಾಪತಾ ಲೇಡಿಸ್ ಚಿತ್ರ ಪ್ರಮುಖ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಯಾಕೆಂದರೆ.. ಲಾಪತಾ ಲೇಡಿಸ್ ಚಿತ್ರವನ್ನು ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿ ನೋಡಿದವರೇ ಹೆಚ್ಚು. ಇದಕ್ಕೆ ಕಾರಣವನ್ನು ಹುಡುಕುತ್ತಾ ಅಮೀರ್ ಖಾನ್ ಹೋದಾಗ ಅವರಿಗೆ ಕಂಡಿದ್ದು ನೆಟ್‌ಪ್ಲಿಕ್ಸ್ ಲೋಗೋ.

Aamir Khan poised to revolutionize India s theatrical releases with a major OTT decision

ಹೌದು, ಅಸಲಿಗೆ ಚಿತ್ರದ ಪ್ರಚಾರವನ್ನು ಆಮೀರ್ ಖಾನ್ ಅದ್ದೂರಿಯಾಗಿಯೇ ಮಾಡಿದ್ದರು. ಆದರೆ ಈ ಸಮಯದಲ್ಲಿ ತಮ್ಮ ಚಿತ್ರದ ಪೋಸ್ಟರ್‌ಗಳ ಮೇಲೆ ನಿಯಮದಂತೆ ನೆಟ್‌ಪ್ಲಿಕ್ಸ್ ಲೋಗೋವನ್ನು ಹಾಕಲಾಗಿತ್ತು. ಈ ಲೋಗೋವನ್ನು ಗಮನಿಸಿದ್ದ ಅನೇಕರು, ಚಿತ್ರವನ್ನು ಚಿತ್ರಮಂದಿರದಲ್ಲಿ ಅಲ್ಲ ಬದಲಿಗೆ ನೆಟ್‌ ಪ್ಲಿಕ್ಸ್‌ನಲ್ಲಿ ನೋಡುವ ತೀರ್ಮಾನಕ್ಕೆ ಮೊದಲೇ ಬಂದು ಬಿಟ್ಟಿದ್ದರು. ವಿಮರ್ಷಕರ ಹೃದಯ ಗೆದ್ದ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರಲು ವಿಫಲವಾಗಲು ಕಾರಣವಾಗಿದ್ದು ಇದೇ ಅಂಶ ಅನ್ನುವುದು ಸದ್ಯಕ್ಕೆ ಅಮೀರ್ ಖಾನ್ ಅವರಿಗೆ ಮನ ದಟ್ಟಾಗಿದೆ.

ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ವಿಧು ವಿನೋದ್ ಚೋಪ್ರಾ ನಿರ್ದೇಶನದ 12th ಫೇಲ್ ಚಿತ್ರವನ್ನು ಆರಂಭದಲ್ಲಿ ಓಟಿಟಿಯವರು ಖರೀದಿಸಿರಲಿಲ್ಲ. ಈ ಚಿತ್ರವನ್ನು ಯಾರು ನೋಡುತ್ತಾರೆ ಅನ್ನುವ ಮನೋಭಾವ ಅವರದ್ದಾಗಿತ್ತು. ಆದರೆ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನೂ ಚಿತ್ರದ ಡಿಜಿಟಲ್ ಹಕ್ಕು ಆಗಿನ್ನೂ ಮಾರಾಟವಾಗದ ಕಾರಣ ಪ್ರೇಕ್ಷಕರ ದೊಡ್ಡ ದಂಡು ಚಿತ್ರಮಂದಿರಕ್ಕೆ ಹರಿದು ಬಂತು. ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು. ಆ ನಂತರ 08 ವಾರದ ಬಳಿಕ ಚಿತ್ರದ ಓಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಡಿಸ್ನಿ ಹಾಟ್ ಸ್ಟಾರ್ ಪಾಲಾಯಿತು. ಹೀಗಾಗಿ ಈ ಎರಡು ಚಿತ್ರಗಳ ಸೋಲು ಮತ್ತು ಗೆಲುವುನ್ನು ವಿಶ್ಲೇಷಣೆ ಮಾಡಿರುವ ಅಮೀರ್ ಖಾನ್ ಸದ್ಯಕ್ಕೆ ಹನ್ನೆರಡು ವಾರದವರೆಗೆ ತಮ್ಮ ಚಿತ್ರದ ಓಟಿಟಿ ಹಕ್ಕುಗಳನ್ನು ಮಾರದಿರಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಪ್ರೇಕ್ಷಕರನ್ನು ಮರಳಿ ಚಿತ್ರಮಂದಿರಕ್ಕೆ ಕರೆತರುವ ನಿಟ್ಟಿನಲ್ಲಿ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅಮೀರ್ ಖಾನ್ ಅವರ ಈ ನಿರ್ಧಾರಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಮುಂದೆ ಅನೇಕರು ಇವರ ಹಾದಿಯನ್ನೇ ಅನುಸರಿಸಿದರೆ ಅಚ್ಚರಿ ಇಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X