PM Narendra Modi: 'ಮನ್‌ ಕಿ ಬಾತ್' 100ನೇ ಸಂಚಿಕೆ ಸಮಾರಂಭ.. ಮೋದಿ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಪ್ರಧಾನಿ ಮೋದಿ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ 'ಮನ್ ಕಿ ಬಾತ್'. ಈ ಕಾರ್ಯಕ್ರಮದ ಮೂಲಕ ನರೇಂದ್ರ ಮೋದಿ ನಾಗರೀಕರೊಂದಿಗೆ ಸಂವಹನ ನಡೆಸುತ್ತಿದ್ದರು. ಮೋದಿ ಪ್ರಧಾನಿಯಾದಲ್ಲಿಂದ ಈ ರೆಡಿಯೋ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇದೆ.

ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿಯ 'ಮನ್ ಕಿ ಬಾತ್' ಪ್ರಸಾರ ಆಗುತ್ತಿದೆ. ಈ ತಿಂಗಳು ಏಪ್ರಿಲ್ 30ಕ್ಕೆ ಹೊಸ ಸಂಚಿಕೆ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರ ಆಗಲಿದೆ. ವಿಶೇಷ ಅಂದರೆ, ಈ ಬಾರಿ ಮನ್‌ ಕಿ ಬಾತ್ 100ನೇ ಸಂಚಿಕೆ ಪ್ರಸಾರ ಆಗಲಿದೆ.

Aamir Khan praised 100th episode of the Prime Minister Narendra Modis Mann Ki Baat

ಈ ಸಂಬಂಧ ದೆಹಲಿಯಲ್ಲಿ ವಿಶೇಷ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು. ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಈ ಕಾರ್ಯಕ್ರಮವನ್ನು ಉದ್ಗಾಟಿಸಿದ್ರು. ಕೇಂದ್ರ ಸಚಿವ ಅನುರಾಗ್ ಕಶ್ಯಪ್ ಅತಿಥಿಯಾಗಿ ಆಗಮಿಸಿದ್ದರು. ಇವರೊಂದಿಗೆ ಬಾಲಿವುಡ್ ತಾರೆಯರಾದ ಆಮಿರ್ ಖಾನ್, ರವೀನಾ ಟಂಡನ್ ಉಪಸ್ಥಿತಿ ಇತ್ತು. ಈ ವೇಳೆ ಆಮಿರ್ ಖಾನ್ ಪ್ರಧಾನಿ ಮೋದಿಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಹೊಗಳಿದ್ದಾರೆ.

"ಸಂವಹನದ ಬಹು ಮುಖ್ಯ ಭಾಗ"

'ಮನ್‌ ಕಿ ಬಾತ್' 100ನೇ ಸಂಚಿಕೆಯ ವಿಶೇಷ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಭಾಗವಹಿಸಿದ್ದರು. ಈ ವೇಳೆ ಆಮಿರ್ ಖಾನ್ ನರೇಂದ್ರ ಮೋದಿ ಹಾಗೂ ಅವರ ಕಾರ್ಯಕ್ರಮವನ್ನು ಬಾಯ್ತುಂಬ ಹೊಗಳಿದ್ದಾರೆ.

" ದೇಶದ ನಾಯಕ ಅವರ ನಾಗರೀಕರೊಂದಿಗೆ ಸಂವಹನ ನಡೆಸುವ ಅತೀ ಮುಖ್ಯವಾದ ಭಾಗವಿದು. ಪ್ರಮುಖ ಸಂಗತಿಗಳು, ಆಲೋಚನೆಗಳು, ಸಲಹೆಗಳನ್ನು ನೀಡುವುದು, ನಾಯಕತ್ವ, ಎಲ್ಲವೂ ಈ ಕಾರ್ಯಕ್ರಮದ ಮುಖ್ಯ ಅಂಗವಾಗಿದೆ" ಎಂದು ಆಮಿರ್ ಖಾನ್ ಹೇಳಿದ್ದಾರೆ.

ಮೋದಿ ಹೊಗಳಿದ ಆಮಿರ್ ಖಾನ್

'ಮನ್ ಕಿ ಬಾತ್' 100 ಸಂಚಿಕೆಗಳನ್ನು ಪೂರೈಸುತ್ತಿದೆ. ಈ ಬೆನ್ನಲ್ಲೇ ಇದೂವರೆಗೂ ಮೋದಿ ಕಾರ್ಯಕ್ರಮಗಳಲ್ಲಿ ಹೆಸರಿಸಿದ 700 ಸಾಧಕರಲ್ಲಿ 100 ಮಂದಿ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಕೂಡ ಭಾಗವಹಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ.

" ಪರಿಣಾಮಕಾರಿ ಸಂವಹನದೊಂದಿಗೆ ದೇಶವನ್ನು ಹೀಗೆ ಮುನ್ನಡೆಸುತ್ತಾರೆ. ದೇಶದ ಜನರಿಗೆ ತಾವು ನೋಡಿದ್ದನ್ನು, ಕಂಡಿದ್ದನ್ನು ಹೇಳುತ್ತಾರೆ, ಭವಿಷ್ಯವನ್ನು ಹೇಗೆ ನೋಡುತ್ತಾರೆ ಅನ್ನೋದನ್ನು ಹೇಳುತ್ತಾರೆ, ಜನರಿಂದ ಯಾವ ರೀತಿಯಲ್ಲಿ ಬೆಂಬಲ ಬಯಸುತ್ತಾನೆ ಅನ್ನೋದಕ್ಕೆ 'ಮನ್‌ ಕಿ ಬಾತ್‌' ಕಾರ್ಯಕ್ರಮ ಉತ್ತಮ ನಿದರ್ಶನ' ಎಂದು ಆಮಿರ್‌ ಅಭಿಪ್ರಾಯಪಟ್ಟಿದ್ದಾರೆ.

'ಲಾಲ್ ಸಿಂಗ್ ಚಡ್ಡ' ಕೊನೆಯ ಸಿನಿಮಾ

ಇತ್ತೀಚೆಗೆ ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತ್ತು. ಈ ಮಧ್ಯೆ ಆಮಿರ್ ಖಾನ್ ಸಿನಿಮಾ ವಿರುದ್ಧ ಬಾಯ್‌ಕಾಟ್ ಮಾಡುವಂತೆ ಅಭಿಯಾನ ಶುರು ಮಾಡಿದ್ದರು.

ಸದ್ಯ ಆಮಿರ್ ಖಾನ್ ನಟನೆಯಿಂದ ದೂರ ಕೆಲಕಾಲ ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ. ಈ ಮಧ್ಯೆ ಆಗಾಗ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಗಮನ ಸೆಳೆಯುತ್ತಿದ್ದಾರೆ. ಈಗ ಆಮಿರ್ ಖಾನ್ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Aamir Khan praised 100th episode of the Prime Minister Narendra Modi's Mann Ki Baat, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X