ಅಮೀರ್ ಖಾನ್ ಪ್ರೊಡಕ್ಷನ್ ವಿರುದ್ಧ ಆರೋಪ, ಸ್ಪಷ್ಟನೆ ಕೊಟ್ಟ ಸಂಸ್ಥೆ
ನಟ ಅಮೀರ್ ಖಾನ್ ತಮ್ಮ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಹಲವು ಕಾರಣಗಳಿಂದ ತಡವಾಗಿರುವ ಬಗ್ಗೆ ಈಗಾಗಲೇ ಆತಂಕದಲ್ಲಿದ್ದಾರೆ. ಇದರ ನಡುವೆ ಚಿತ್ರತಂಡದ ಮೇಲೆ ಗುರುತರ ಆರೋಪವೊಂದನ್ನು ಮಾಡಲಾಗಿದೆ.
'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಚಿತ್ರೀಕರಣವು ಕಾರ್ಗಿಲ್ ಸಮೀಪದ ಭಾಗಗಳಲ್ಲಿ ಹಾಗೂ ಲಡಾಕ್‌ನಲ್ಲಿ ನಡೆಯುತ್ತಿದ್ದು, ಚಿತ್ರತಂಡವು ಈ ಸುಂದರ ಕ್ಷೇತ್ರಗಳಲ್ಲಿ ತ್ಯಾಜ್ಯ ಚೆಲ್ಲುತ್ತಿದೆ. ಇದರಿಂದಾಗಿ ಪರಿಸರ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಮತ್ತು ಕೆಲವು ಪರಿಸರವಾದಿಗಳು ಆರೋಪಿಸಿದ್ದಾರೆ.
ಇದಕ್ಕೆ ಅಮೀರ್ ಖಾನ್ ಪ್ರೊಡಕ್ಷನ್‌ನವರು ಸ್ಪಷ್ಟೀಕರಣ ನೀಡಿದ್ದು, ''ನಮ್ಮ ಸಿನಿಮಾ ಸಂಸ್ಥೆಯು ಚಿತ್ರೀಕರಣ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ನಿಯಮ ಪಾಲಿಸುತ್ತೇವೆ. ನಾವು ಚಿತ್ರೀಕರಣ ಮಾಡುವ ಸ್ಥಳವನ್ನು ನಾವು ಸದಾ ಸ್ವಚ್ಛವಾಗಿಟ್ಟುಕೊಳ್ಳುವತ್ತ ಗಮನ ಹರಿಸುತ್ತೇವೆ'' ಎಂದಿದ್ದಾರೆ.

''ನಾವು ಎಲ್ಲಿಯೇ ಚಿತ್ರೀಕರಣ ಮಾಡಿದರೂ ಸಹ ಆ ಜಾಗವನ್ನು ಸ್ವಚ್ಛ ಮಾಡಿಯೇ ಅಲ್ಲಿಂದ ತೆರಳುತ್ತೇವೆ. ನಾವು ಚಿತ್ರೀಕರಣ ಆರಂಭ ಮಾಡುವ ಮುನ್ನಾ ಆ ಜಾಗವೂ ಎಷ್ಟು ಸ್ವಚ್ಛವಾಗಿತ್ತೊ ಅದಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿ ಆ ಸ್ಥಳವನ್ನು ಬಿಟ್ಟು ಹೊರಡುತ್ತೀವಿ. ಇದು ನಮ್ಮ ನಿರ್ಮಾಣ ಸಂಸ್ಥೆ ಪಾಲಿಸಿಕೊಂಡು ಬಂದಿರುವ ನಿಯಮ'' ಎಂದಿದೆ ಅಮೀರ್ ಖಾನ್ ಪ್ರೊಡಕ್ಷನ್ಸ್.
Recommended Video
''ನಾವು ಚಿತ್ರೀಕರಣ ಮಾಡುತ್ತಿರುವ ಸ್ಥಳದಲ್ಲಿ ಸ್ವಚ್ಛತೆ ಹಾಳುಮಾಡಿದ್ದೇವೆ ಎಂಬ ಆರೋಪವು ನಮ್ಮ ಚಿತ್ರತಂಡದ ಮೇಲೆ ಬಂದಿದೆ. ಆದರೆ ಇದನ್ನು ನಾವು ಸಾಸಗಟಾಗಿ ನಿರಾಕರಿಸುತ್ತೇವೆ. ನಮ್ಮ ಚಿತ್ರೀಕರಣ ಲೊಕೇಶನ್ ಸದಾ ತೆರೆದಿದ್ದು, ಯಾವುದೇ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಯಾವ ಸಮಯದಲ್ಲಾದರೂ ಬಂದು ಪರಿಶೀಲನೆ ನಡೆಸಬಹುದು'' ಎಂದಿದ್ದಾರೆ.


Click it and Unblock the Notifications











