For Quick Alerts
  ALLOW NOTIFICATIONS  
  For Daily Alerts

  ನಾನು ಸಿಂಗಲ್ ಎಂದ ನಟ ಆಮಿರ್ ಖಾನ್, ಗಾಸಿಪ್‌ಗೆ ಬ್ರೇಕ್!

  |

  ಬಾಲಿವುಡ್‌ ನಟ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ವಿಚ್ಛೇದನ ಪಡೆದು ದೂರಾಗಿದ್ದಾರೆ. ಅದರೆ ಇವರ ವಿಚ್ಛೇದನದ ಬಳಿಕ ಕೆಲವು ದಿನಗಳಲ್ಲೇ ಆಮಿರ್ ಖಾನ್ ಬಗ್ಗೆ ಹೊಸ ಗಾಸಿಪ್ ಹಬ್ಬಿತು. ಆಮಿರ್ ಖಾನ್ ಹೊಸ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ಬಗ್ಗೆ ಹಲವು ಊಹಾ ಪೋಹಾಗಳು ಹಬ್ಬಿದ್ದವು.

  ಆಮಿರ್ ಖಾನ್ ಇನ್ನೊಂದು ಮದುವೆ ಆಗುವ ಸಲುವಾಗಿ ಕಿರಣ್ ಅವರಿಗೆ ವಿಚ್ಛೇದನ ಕೊಟ್ಟಿದ್ದಾರೆ, ಈಗಾಗಲೇ ಬೇರೊಬ್ಬ ನಾಯಕಿಯ ಜೊತೆಗೆ ಆಮಿರ್ ಖಾನ್ ಲವ್ ಸ್ಟೋರಿ ಶುರುವಾಗಿದೆ ಅಂತೆಲ್ಲಾ ಗಾಸಿಪ್ ಹಬ್ಬಿತ್ತು. ಈಗ ಇದಕ್ಕೆಲ್ಲಾ ಬ್ರೇಕ್ ಹಾಕಿರುವ ನಟ ಆಮಿರ್ ಖಾನ್ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

  'ಇಂಥ ಸಿನಿಮಾ ನೋಡಿಲ್ಲ': ಸಿನಿಮಾ ನೋಡಿ ಕಣ್ಣೀರು ಹಾಕಿದ ಅಮೀರ್ ಖಾನ್'ಇಂಥ ಸಿನಿಮಾ ನೋಡಿಲ್ಲ': ಸಿನಿಮಾ ನೋಡಿ ಕಣ್ಣೀರು ಹಾಕಿದ ಅಮೀರ್ ಖಾನ್

  ಯಾಕೆ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಅವರ ನಡುವೆ ಈಗ ಏನಿದೆ ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ಅವರ ಹೊಸ ಲವ್ ಸ್ಟೋರಿ ಮತ್ತು ವಿಚ್ಛೇದನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

  ಫಾತಿಮಾ ಸನಾ ಶೇಖ್ ಜೊತೆಗೆ ಆಮಿರ್ ಖಾನ್ ಹೆಸರು!

  ಫಾತಿಮಾ ಸನಾ ಶೇಖ್ ಜೊತೆಗೆ ಆಮಿರ್ ಖಾನ್ ಹೆಸರು!

  ಆಮಿರ್ ಖಾನ್ ಮತ್ತು ಕಿರಣ್ ಇಬ್ಬರು ವಿಚ್ಛೇದನ ಪಡೆದು ದೂರಾದ ಬಳಿಕ, ಆಮಿರ್ ಖಾನ್ ಜೊತೆಗೆ ನಟಿ ಫಾತಿಮಾ ಸನಾ ಶೇಖ್ ಹೆಸರು ತಳುಕು ಹಾಕಿಕೊಂಡಿತು. ಬಳಿಕ ಈ ಜೋಡಿ ಬಗ್ಗೆಯೇ ಸಾಕಷ್ಟು ಸುದ್ದಿಗಳು ಹಬ್ಬಿದವು. ಆಮಿರ್ ಖಾನ್ ಚಿಕ್ಕ ವಯಸ್ಸಿನ ನಟಿಯ ಜೊತೆಗೆ ಸುತ್ತಾಡುತ್ತಿದ್ದಾರೆ ಎನ್ನಲಾಗಿತ್ತು. ಅಷ್ಟೇ ಅಲ್ಲಾ ಆಮಿರ್ ಖಾನ್ ಫಾತಿಮಾ ಅವರನ್ನು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಅದರೆ ಅದು ಗಾಳಿ ಸುದ್ದಿ ಆಗಿ ಉಳಿದೆ. ಅದಕ್ಕೀಗ ಆಮಿರ್ ಖಾನ್ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ.

  ಈಗ ಯಾರು ಇಲ್ಲ, ನಾನು ಸಿಂಗಲ್ ಎಂದ ಆಮಿರ್ ಖಾನ್

  ಈಗ ಯಾರು ಇಲ್ಲ, ನಾನು ಸಿಂಗಲ್ ಎಂದ ಆಮಿರ್ ಖಾನ್

  ನಟಿ ಆಮಿರ್ ಖಾನ್ ಜೊತೆಗೆ ಫಾತಿಮಾ ಹೆಸರು ಕೇಳಿ ಬಂದರೂ, ಆಮಿರ್ ಖಾನ್ ಆಗಲಿ ಫಾತಿಮಾ ಆಗಲಿ ಯಾರು ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಿಲ್ಲ. ಅದರೆ ಈಗ ಬಗ್ಗೆ ಪರೋಕ್ಷವಾಗಿ ಉತ್ತರಿಸಿದ ಆಮಿರ್ ಖಾನ್, ಅದು ಸುಳ್ಳು ಸುದ್ದಿ ತಮ್ಮ ಜೀವನದಲ್ಲಿ ಯಾರು ಇಲ್ಲ ಎಂದು ಹೇಳಿದ್ದಾರೆ. ಕಿರಣ್‌ಗೆ ವಿಚ್ಛೇದನ ನೀಡಲು ಯಾರಾದರು ಕಾರಣ ಆಗಿದ್ದಾರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಮೀರ್ ಖಾನ್ "ಇಲ್ಲ ಆಗ ಯಾರೂ ಇರಲಿಲ್ಲ, ಈಗಲೂ ಯಾರೂ ಇಲ್ಲ" ಎಂದು ಹೇಳಿದ್ದಾರೆ.

  ಕಾಲ್ಕಿತ್ತ ಅಮೀರ್ ಖಾನ್! 'ಕೆಜಿಎಫ್‌ 2'ಗೆ ಎದುರಾಳಿಯೇ ಇಲ್ಲ?ಕಾಲ್ಕಿತ್ತ ಅಮೀರ್ ಖಾನ್! 'ಕೆಜಿಎಫ್‌ 2'ಗೆ ಎದುರಾಳಿಯೇ ಇಲ್ಲ?

  ಕಿರಣ್ ಮತ್ತು ನಾನು ಒಂದೆ ಕುಟುಂಬ: ನಟ ಆಮಿರ್ ಖಾನ್!

  ಕಿರಣ್ ಮತ್ತು ನಾನು ಒಂದೆ ಕುಟುಂಬ: ನಟ ಆಮಿರ್ ಖಾನ್!

  ಇತ್ತೀಚೆಗೆ ಅವರು ನೀಡಿರುವ ಸಂದರ್ಶನ ಒಂದರಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. "ವಾಸ್ತವವಾಗಿ, ಕಿರಣ್ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ. ಮತ್ತು ನಾವು ಒಂದೇ ಕುಟುಂಬದ ಹಾಗೆ ಇದ್ದೇವೆ. ನಾವು ಒಂದೇ ಕುಟುಂಬ ಎನ್ನುವುದನ್ನು ಅರಿತು ಕೊಂಡಿದ್ದೇವೆ. ಒಬ್ಬರ ಮೇಲೆ ಒಬ್ಬರಿಗೆ ಹೆಚ್ಚಿದ ಗೌರವ ಇದೆ. ಆದರೆ ನಮ್ಮ ಪತಿ, ಪತ್ನಿ ಸಂಬಂಧವು ನಿರ್ದಿಷ್ಟ ಕಾರಣಕ್ಕೆ ಬದಲಾವಣೆಯನ್ನು ಕಂಡಿದೆ. ಹಾಗಾಗಿ ಅದರಿಂದ ಹೊರ ಬಂದಿದ್ದೇವೆ.

  ಕಿರಣ್‌ಗಾಗಿ, ರೀನಾ ದತ್ತಗೆ ಡಿವೋಸ್ ಕೊಟ್ಟಿಲ್ಲ: ಅಮೀರ್ ಖಾನ್!

  ಕಿರಣ್‌ಗಾಗಿ, ರೀನಾ ದತ್ತಗೆ ಡಿವೋಸ್ ಕೊಟ್ಟಿಲ್ಲ: ಅಮೀರ್ ಖಾನ್!

  ಈ ಸಂದರ್ಶನದಲ್ಲಿ ಅಮೀರ್ ಖಾನ್ ತಮ್ಮ ಮೊದಲ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದಾರೆ. ರೀನಾ ದತ್ತಾ ಜೊತೆಗಿನ ವಿಚ್ಛೇದನವನ್ನು ನೆನಪಿಸಿಕೊಂಡರು. "ಕಿರಣ್‌ಗಾಗಿ ನಾನು ಅವಳನ್ನು ವಿಚ್ಛೇದನ ಮಾಡಲಿಲ್ಲ, ಹಾಗೆ ಕಿರಣ್ ಜೊತೆಗಿನ ವಿಚ್ಛೇದನ ಬೇರೆ ಯಾವುದೋ ಸಂಬಂಧದ ಕಾರಣದಿಂದ ನಡೆದಿಲ್ಲ." ಎಂದು ಆಮಿರ್ ಖಾನ್ ಹೇಳಿದ್ದಾರೆ. ಯಾಕೆಂದರೆ ನಟ ಆಮಿರ್ ಖಾನ್, ಕಿರಣ್ ಅವರ ಜೊತೆಗೆ ಎರಡನೇ ಮದುವೆ ಆಗಿದ್ದಾರೆ. ಆದರೆ ಎರಡನೇ ಮದುವೆಯನ್ನು ಮುರಿದು ಅಚ್ಚರಿ ಉಂಟಾಗುವಂತೆ ಮಾಡಿತು.

  English summary
  Aamir Khan Reacts To Affair Rumours With Fatima Sana Shaikh, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X