For Quick Alerts
  ALLOW NOTIFICATIONS  
  For Daily Alerts

  ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಅಮೀರ್ ಖಾನ್ ಕೊಡಲಿದ್ದಾರೆ ಸರ್ಪ್ರೈಸ್

  |

  ಅಮೀರ್ ಖಾನ್ ಅದ್ಭುತ ನಟ ಮಾತ್ರವಲ್ಲ ಬಹಳ ಒಳ್ಳೆಯ ಕ್ರೀಡಾಪಟು ಸಹ ಹೌದು. ಚೆಸ್ ಅನ್ನು ಅದ್ಭುತವಾಗಿ ಆಡುವ ಅಮೀರ್ ಖಾನ್, ಫುಟ್‌ಬಾಲ್, ಕ್ರಿಕೆಟ್ ಸಹ ಆಡುತ್ತಾರೆ. ಈ ಹಿಂದೆ ಆಯೋಜಿಸಲಾಗಿದ್ದ ಕೆಲವು ಸೆಲೆಬ್ರಿಟಿ ಪಂದ್ಯಾವಳಿಗಳಲ್ಲಿ ಅವರು ಭಾಗವಹಿಸಿದ್ದರು.

  ಕ್ರಿಕೆಟ್‌ ಚೆನ್ನಾಗಿ ಆಡಬಲ್ಲ ಅಮೀರ್ ಖಾನ್ ಇದೀಗ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ! ಹಾಗೆಂದು ಅವರು ಕ್ರಿಕೆಟ್ ಆಡುತ್ತಿಲ್ಲ ಬದಲಿಗೆ ಕ್ರಿಕೆಟ್ ಲೈವ್ ಅನ್ನು ಹೋಸ್ಟ್ ಮಾಡಲಿದ್ದಾರೆ. ಅದೂ ಈ ಐಪಿಎಲ್‌ನ ಬಹುಮುಖ್ಯ ಪಂದ್ಯವನ್ನು ಹೋಸ್ಟ್ ಮಾಡಲಿದ್ದಾರೆ.

  ಕೆಲವು ದಿನಗಳ ಹಿಂದೆಯಷ್ಟೆ ಐಪಿಎಲ್‌ ನಲ್ಲಿ ತಮಗೆ ಆಡಲು ಅವಕಾಶ ಸಿಗುತ್ತದೆಯೇ? ಎಂದು ಕೇಳಿದ್ದರು. ಆದರೆ ಅವರಿಗೆ ಐಪಿಎಲ್ ಆಡಲು ಅವಕಾಶ ನೀಡಲಾಗಿಲ್ಲ, ಆದರೆ ಐಪಿಎಲ್ ಲೈವ್ ಅನ್ನು ಹೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ಇದಕ್ಕೆ ಕಾರಣವೂ ಇದೆ.

  ಐಪಿಎಲ್‌ ಪಂದ್ಯದ ವೇಲೆ ಟ್ರೇಲರ್ ಬಿಡುಗಡೆ

  ಐಪಿಎಲ್‌ ಪಂದ್ಯದ ವೇಲೆ ಟ್ರೇಲರ್ ಬಿಡುಗಡೆ

  ಅಮೀರ್ ಖಾನ್ ನಟನೆಯ ಹೊಸ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಕೆಲವೇ ತಿಂಗಳಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಟ್ರೇಲರ್ ಅನ್ನು ಅಮೀರ್ ಖಾನ್ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾದ ಟ್ರೇಲರ್ ಅನ್ನು ಐಪಿಎಲ್‌ನ ಫೈನಲ್ ಪಂದ್ಯದ ಸಮಯದಲ್ಲಿ ಬಿಡುಗಡೆ ಮಾಡಲು ಅಮೀರ್ ಖಾನ್ ನಿರ್ಧರಿಸಿದ್ದು, ಕೊನೆಯ ಪಂದ್ಯದಂದು ಕ್ರೀಡಾಂಗಣದಲ್ಲಿ ಟ್ರೇಲರ್ ಬಿಡುಗಡೆ ಆಗಲಿದೆ.

  ಫೈನಲ್‌ ಪಂದ್ಯದ ಮೊದಲಾರ್ಧದಲ್ಲಿ ಟ್ರೇಲರ್ ಬಿಡುಗಡೆ

  ಫೈನಲ್‌ ಪಂದ್ಯದ ಮೊದಲಾರ್ಧದಲ್ಲಿ ಟ್ರೇಲರ್ ಬಿಡುಗಡೆ

  ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪ್ರಕಟಿಸಿರುವ ಅಮೀರ್ ಖಾನ್, ಐಪಿಎಲ್‌ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಎರಡನೇ ಟೈಮ್‌ ಔಟ್ ವೇಳೆ ಟ್ರೇಲರ್ ಅನ್ನು ಕ್ರೀಡಾಂಗಣದಲ್ಲಿ ಪ್ರದರ್ಶಿಸುವುದಾಗಿ ಹೇಳಿದ್ದಾರೆ. ಅದೇ ಸಮಯದಲ್ಲಿ ಯೂಟ್ಯೂಬ್‌ನಲ್ಲಿ ಸಹ ಟ್ರೇಲರ್ ಲಭ್ಯವಾಗಲಿದೆ.

  ಆಗಸ್ಟ್ 11 ರಂದು ಸಿನಿಮಾ ಬಿಡುಗಡೆ

  ಆಗಸ್ಟ್ 11 ರಂದು ಸಿನಿಮಾ ಬಿಡುಗಡೆ

  ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಈ ಮೊದಲು 'ಕೆಜಿಎಫ್ 2' ಸಿನಿಮಾದ ಜೊತೆಗೆ ಬಿಡುಗಡೆ ಆಗಬೇಕಿತ್ತು. ಅಮೀರ್ ಖಾನ್ ಸಹ ಈ ಬಗ್ಗೆ ಮಾತನಾಡಿ, 'ಕೆಜಿಎಫ್ 2' ಸಿನಿಮಾದ ಜೊತೆಗೆ ಬಿಡುಗಡೆ ಮಾಡುತ್ತಿರುವುದಕ್ಕೆ ಕ್ಷಮೆ ಸಹ ಕೇಳಿದ್ದರು. ಆದರೆ ಕೊನೆಗೆ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡರು. ಈಗ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗಲಿದೆ.

  'ಫಾರೆಸ್ಟ್ ಗಂಫ್' ಕೃತಿ ಆಧರಿತ ಸಿನಿಮಾ

  'ಫಾರೆಸ್ಟ್ ಗಂಫ್' ಕೃತಿ ಆಧರಿತ ಸಿನಿಮಾ

  'ಲಾಲ್ ಸಿಂಗ್ ಛಡ್ಡಾ' ಸಿನಿಮಾ, ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಹೆಸರಿನ ಕೃತಿ ಆಧರಿಸಿದ ಸಿನಿಮಾ. ಅದೇ ಹೆಸರಿನಲ್ಲಿ ಇಂಗ್ಲೀಷ್‌ನಲ್ಲಿ ಈಗಾಗಲೇ ಸಿನಿಮಾ ಒಂದು ಬಿಡುಗಡೆ ಆಗಿದ್ದು, ಆ ಸಿನಿಮಾ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಸೇರಿಕೊಂಡಿದೆ. 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಅಮೀರ್ ಖಾನ್ ಪಂಜಾಬಿ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. ತೆಲುಗಿನ ನಟ ನಾಗಚೈತನ್ಯ, ಅಮೀರ್ ಖಾನ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Aamir Khan releasing his new movie Laal Singh Chaddha's trailer in IPL final match. Movie is releasing on August 11.
  Thursday, May 26, 2022, 14:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X