ಆಮೀರ್ ಖಾನ್ ಹೀರೋ ಆದ ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಂಭಾವನೆ ಎಷ್ಟು.?
ಬಾಲಿವುಡ್ ನಲ್ಲಿ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಅಂತಲೇ ಖ್ಯಾತಿ ಪಡೆದಿರುವ ನಟ ಆಮೀರ್ ಖಾನ್. ಯಾವುದೇ ಪಾತ್ರ ಕೊಟ್ಟರೂ, ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುವಷ್ಟು ಆಮೀರ್ ಖಾನ್ ಪ್ರತಿಭಾವಂತ.
'ಯಾದೋಂ ಕಿ ಬಾರಾತ್' ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆಮೀರ್ ಖಾನ್, ಹೀರೋ ಆಗಿ ಬೆಳ್ಳಿ ಪರದೆ ಮೇಲೆ ಮಿಂಚುವ ಮುನ್ನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಅದಾಗಲೇ, ಸಿನಿಮಾ ಮೇಕಿಂಗ್ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಆಮೀರ್ ಖಾನ್ ಹೀರೋ ಆಗಿ ಅಭಿನಯಿಸಿದ ಚೊಚ್ಚಲ ಚಿತ್ರ 'ಖಯಾಮತ್ ಸೇ ಖಯಾಮತ್ ತಕ್'. 80-90 ರ ದಶಕದಲ್ಲಿ ಬಾಲಿವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ ಈ 'ಖಯಾಮತ್ ಸೇ ಖಯಾಮತ್ ತಕ್'. ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿದ್ದರೂ, ಆಮೀರ್ ಖಾನ್ ಕೈಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ.? ಉತ್ತರ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಆಮೀರ್ ಖಾನ್ ಮೊದಲ ಸಂಭಾವನೆ ಎಷ್ಟು.?
ಹೀರೋ ಆಗಿ ಆಮೀರ್ ಖಾನ್ ಪಡೆದ ಮೊದಲ ಸಂಭಾವನೆ 11 ಸಾವಿರ ರೂಪಾಯಿ. ''ಖಯಾಮತ್ ಸೇ ಖಯಾಮತ್ ತಕ್' ಚಿತ್ರಕ್ಕೆ ನನಗೆ ಸಿಕ್ಕ ಸಂಭಾವನೆ 11 ಸಾವಿರ ರೂಪಾಯಿ. ಈ ಚಿತ್ರಕ್ಕಾಗಿ ನಾನು ಒಂದು ವರ್ಷ ಕೆಲಸ ಮಾಡಿದ್ದೆ'' ಅಂತಾರೆ ನಟ ಆಮೀರ್ ಖಾನ್.

ದುಡ್ಡು ಇರಲಿಲ್ಲ
''ಖಯಾಮತ್ ಸೇ ಖಯಾಮತ್ ತಕ್' ಅಂತ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರೂ, ಒಂದು ಕಾರ್ ಖರೀದಿ ಮಾಡುವಷ್ಟು ದುಡ್ಡು ನನ್ನ ಬಳಿ ಇರಲಿಲ್ಲ. ಎಲ್ಲರಂತೆ ನಾನು ಬಸ್ ನಲ್ಲಿ ಓಡಾಡುತ್ತಿದ್ದೆ'' ಎಂದು ಸಂದರ್ಶನವೊಂದರಲ್ಲಿ ಆಮೀರ್ ಖಾನ್ ಹೇಳಿಕೊಂಡಿದ್ದಾರೆ.

ಈಗ ಆ ಸಿನಿಮಾ ಮಾಡಬೇಕಿತ್ತು.!
''ಜೋ ಜೀತಾ ವೊಹೀ ಸಿಖಂದರ್' ಅಂತಹ ಸಿನಿಮಾಗಳನ್ನ ಈಗ ಮಾಡಿದ್ದರೆ, ಸೂಪರ್ ಹಿಟ್ ಆಗುತ್ತಿದ್ದವು. ಯಾಕಂದ್ರೆ, ಅಂತಹ ಚಿತ್ರಗಳನ್ನು ಈಗಿನ ಜನ ಇಷ್ಟ ಪಡುತ್ತಾರೆ. ನನಗೆ ಖುಷಿ ಕೊಟ್ಟಂತಹ ಚಿತ್ರಗಳನ್ನು ಮಾತ್ರ ನಾನು ಮಾಡುತ್ತಾ ಬಂದೆ, ಆದರೆ ಅದಕ್ಕೆ ಮಾರ್ಕೆಟ್ ಇರುತ್ತಿರಲಿಲ್ಲ. ನಾನು ಅಲೆಯ ವಿರುದ್ಧವಾಗಿ ಈಜುತ್ತಿದ್ದೆ'' ಎಂದು ತಮ್ಮ ಸಿನಿಮಾ ಜರ್ನಿ ಬಗ್ಗೆ ಆಮೀರ್ ಖಾನ್ ಹೇಳಿದ್ದಾರೆ.

'ಖಯಾಮತ್ ಸೇ ಖಯಾಮತ್ ತಕ್' ಕುರಿತು...
ಆಮೀರ್ ಖಾನ್ ಹೀರೋ ಆಗಿ, ಜೂಹಿ ಚಾವ್ಲಾ ಹೀರೋಯಿನ್ ಆಗಿ ಅಭಿನಯದ ಮೊದಲ ಚಿತ್ರ 'ಖಯಾಮತ್ ಸೇ ಖಯಾಮತ್ ತಕ್'ಗೆ ಆಕ್ಷನ್ ಕಟ್ ಹೇಳಿದವರು ಮನ್ಸೂರ್ ಖಾನ್. ಆನಂದ್-ಮಿಲಿಂದ್ ಸಂಗೀತ ಸಂಯೋಜಿಸಿದ ಈ ಚಿತ್ರಕ್ಕೆ ಬಂಡವಾಳ ಹಾಕಿದವರು ನಾಸಿರ್ ಹುಸೇನ್. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದ್ದವು.


Click it and Unblock the Notifications











