ಅಮಿರ್ ಖಾನ್ ಜೊತೆ ನಟಿಸಿದ್ದ ನಟ ಇಂದು ಬೀದಿಯಲ್ಲಿ ತರಕಾರಿ ಮಾರುತ್ತಿದ್ದಾನೆ

ಸಿನಿಮಾ ರಂಗದ ಥಳುಕು-ಬಳುಕಿಗೆ ಮಾರುಹೋಗಿ ಸಿನಿಮಾ ನಟರಾಗಲು ನೂರಾರು-ಸಾವಿರಾರು ಜನರು ಮಹಾನಗರಗಳಿಗೆ ವಲಸೆ ಬರುತ್ತಾರೆ ಆದರೆ ಸಿನಿಮಾರಂಗದಲ್ಲಿ ಯಶಸ್ಸುಗಳಿಸುವುದು ಕೆಲವರು ಮಾತ್ರ.

Recommended Video

Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

ಒಂದು ಕಾಲದಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದವರು ನಂತರ ಬೀದಿ ಪಾಲಾದ ಎಷ್ಟೋ ಉದಾಹರಣೆಗಳು ಸಿನಿ ಉದ್ಯಮದಲ್ಲಿ ಇವೆ. ಈ ರೀತಿಯ ಉದಾಹರಣೆಗಳು ಎಲ್ಲಾ ಸಿನಿರಂಗದಲ್ಲೂ ಸಿಗುತ್ತವೆ.

ಬಾಲಿವುಡ್‌ನ ಖ್ಯಾತ ನಟ, ಸ್ಟಾರ್ ಅಮೀರ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದ ನಟನೊಬ್ಬ ಜೀವನ ಸಾಗಿಸಲು ಇಂದು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಈ ನಟನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಅಮಿರ್ ಖಾನ್ ಜೊತೆ ಗುಲಾಮ್ ಸಿನಿಮಾದಲ್ಲಿ ನಟನೆ

ಅಮಿರ್ ಖಾನ್ ಜೊತೆ ಗುಲಾಮ್ ಸಿನಿಮಾದಲ್ಲಿ ನಟನೆ

1998 ರಲ್ಲಿ ಬಿಡುಗಡೆಯಾಗಿದ್ದ ಅಮಿರ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ 'ಗುಲಾಮ್‌' ನಲ್ಲಿ ನಟಿಸಿದ್ದ ಜಾವೇದ್ ಹೈದರ್ ಎಂಬ ನಟ ಬದುಕು ನಡೆಸಲು ಇಂದು ರಸ್ತೆ ಬದಿ ತಳ್ಳುಬಂಡಿಯಲ್ಲಿ ತರಕಾರಿ ಮಾಡುತ್ತಿದ್ದಾರೆ.

ತರಕಾರಿ ಮಾರುತ್ತಿರುವ ವಿಡಿಯೋ ವೈರಲ್

ತರಕಾರಿ ಮಾರುತ್ತಿರುವ ವಿಡಿಯೋ ವೈರಲ್

ಜಾವೇದ್ ಹೈದರ್ ಅವರು ತಮಾಷೆಯಾಗಿ ನಗುತ್ತಾ, ಹಾಡುತ್ತಾ ತರಕಾರಿ ಮಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಾಳು ಡಾಲಿ ಬಿಂದ್ರಾ ಹಂಚಿಕೊಂಡಿದ್ದಾರೆ.

ಹಲವು ಸಿನಿಮಾಗಳಲ್ಲಿ ನಟಿಸಿರುವ ಜಾವೇದ್

ಹಲವು ಸಿನಿಮಾಗಳಲ್ಲಿ ನಟಿಸಿರುವ ಜಾವೇದ್

ಜಾವೇದ್ ಹೈದರ್ ಕೇವಲ ಗುಲಾಮ್ ಸಿನಿಮಾದಲ್ಲಿ ಮಾತ್ರವಲ್ಲದೆ 2009 ರಲ್ಲಿ ಬಿಡುಗಡೆಯಾದ ಬಾಬರ್ ನಂತರ ಲೈಫ್ ಕಿ ಐಸಿ ಕಿ ಥೈಸಿ ಸಿನಿಮಾದಲ್ಲಿ ನಟಿಸಿದ್ದರು. 2012 ರಲ್ಲಿ ಜೀನಿ ಔರ್ ಜೂಜು ಧಾರಾವಾಹಿಯಲ್ಲಿ ಸಹ ನಟಿಸಿದ್ದರು.

ಟಿಕ್‌ಟಾಕ್‌ ಖ್ಯಾತವಾಗಿರುವ ಜಾವೇದ್

ಟಿಕ್‌ಟಾಕ್‌ ಖ್ಯಾತವಾಗಿರುವ ಜಾವೇದ್

ಜಾವೇದ್ ಹೈದರ್ ಟಿಕ್‌ಟಾಕ್‌ ಖಾತೆ ಹೊಂದಿದ್ದು ಸಾವಿರಾರು ಸಂಖ್ಯೆಯ ಫಾಲೋವರ್‌ಗಳನ್ನು ಸಹ ಹೊಂದಿದ್ದಾರೆ. ಅವರು ಹಾಡುತ್ತಾ ತರಕಾರಿ ಮಾಡುವ ಹಲವು ವಿಡಿಯೋಗಳನ್ನು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

More from Filmibeat

English summary
Aamir Khan's co actor in movie Gulaam today selling vegetables in the street to lead life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X