For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳ ದಿನಕ್ಕೂ ಮುನ್ನಾ ಬಾಯ್‌ಫ್ರೆಂಡ್ ಚಿತ್ರಹಂಚಿಕೊಂಡ ಅಮೀರ್ ಖಾನ್ ಪುತ್ರಿ

  |

  ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಬಾಲಿವುಡ್‌ನಲ್ಲಿ ಹೊಸ ಪ್ರೇಮ ಜೋಡಿಯ ಅನಾವರಣವಾಗಿದೆ. ಖ್ಯಾತ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಪ್ರೀತಿಯ ಹುಡುಗನ ಚಿತ್ರವನ್ನು ಹಂಚಿಕೊಂಡು ತಮ್ಮ ಪ್ರೀತಿ ವಿಷಯ ಬಹಿರಂಗಗೊಳಿಸಿದ್ದಾರೆ.

  ಸಿನಿಮಾ ನಿರ್ದೇಶಕಿ ಆಗಲಿರುವ 24 ವರ್ಷದ ಇರಾ ಖಾನ್ ತನ್ನ ದೈಹಿಕ ತರಬೇತುದಾರನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು. ಆತನೊಂದಿಗಿನ ರೊಮ್ಯಾಂಟಿಕ್ ಚಿತ್ರಗಳನ್ನು ಇಂದು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ದೈಹಿಕ ತರಬೇತುದಾರ ಆಗಿರುವ ನೂಪುರ್ ಶಿಕಾರೆ ಅನ್ನು ಪ್ರೀತಿಸುತ್ತಿದ್ದಾರೆ ಇರಾ ಖಾನ್. ಈ ವಿಷಯವನ್ನು ಇನ್‌ಸ್ಟಾಗ್ರಾಂ ನಲ್ಲಿ ಬಹಿರಂಗಪಡಿಸಿರುವ ಇರಾ ಖಾನ್, 'ನಿನ್ನಜೊತೆಗೆ, ನಿನಗಾಗಿ ಜೊತೆಯಾಗಿರುವ ಪ್ರತಿಜ್ಞೆ ಮಾಡುವುದಕ್ಕೆ ಬಹಳ ಹೆಮ್ಮೆ ಆಗುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನನ್ನ ಕನಸಿನ ಹುಡುಗ, ನನ್ನ ವ್ಯಾಲೆಂಟೈನ್ ಹ್ಯಾಷ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ.

  ಅಮೀರ್ ಖಾನ್ ಹಾಗೂ ರೀನಾ ದತ್ತಾ ಅವರ ಮಗಳು ಇರಾ ಖಾನ್. ಅಮ್ಮ ರೀನಾ ದತ್ತಾ ಜೊತೆ ಇರಾ ಖಾನ್ ವಾಸಿಸುತ್ತಿದ್ದಾರೆ. ಅಪ್ಪನೊಂದಿಗೂ ಬಹಳ ಆತ್ಮೀಯ ನಂಟು ಹೊಂದಿದ್ದಾರೆ ಇರಾ.

  ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್

  ಇರಾ ಸಿನಿಮಾ ನಿರ್ದೇಶಕಿ ಆಗಲಿದ್ದು, ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಅವರಿಗೆ ಆಕ್ಷನ್ -ಕಟ್ ಹೇಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಇದರ ಜೊತೆಗೆ ಇರಾ ಖಾನ್ ಟ್ಯಾಟೂ ಕಲಾವಿದೆಯೂ ಹೌದು.

  English summary
  Aamir Khan’s daughter Ira Khan reveals her boyfriend Nupur Shikhare on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X