'ಧುರಂಧರ್' ಚಿತ್ರಕ್ಕೆ ಅದೇ ದೊಡ್ಡ ಮೈನಸ್ ಆಗಿಬಿಡ್ತು.. ಇಲ್ಲ ಅಂದಿದ್ರೆ?- ಆಮೀರ್ ಖಾನ್

ಆದಿತ್ಯಾಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ 'ಧುರಂಧರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ನಟನೆಯ ಸಿನಿಮಾ 1400 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಮಾರ್ಚ್ 19ಕ್ಕೆ ಚಿತ್ರದ ಸೀಕ್ವೆಲ್ ತೆರೆಗೆ ಬರಲಿದೆ. ಇದೆಲ್ಲದರ ನಡುವೆ 'ಧುರಂಧರ್' ಚಿತ್ರದ ಬಗ್ಗೆ ನಟ ಆಮೀರ್ ಖಾನ್ ಹೇಳಿಕೆ ವೈರಲ್ ಆಗುತ್ತಿದೆ.

ಸದ್ಯ ಆಮೀರ್ ಖಾನ್ ಸಿನಿಮಾಗಳ ಕ್ರೇಜ್ ಕಮ್ಮಿ ಆಗಿದೆ. ಒಂದ್ಕಾಲದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ ಆಮೀರ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ. ಒಂದೇ ಒಂದು ಹಿಟ್ ಕೊಡಲು ಹರಸಾಹಸ ಪಡುತ್ತಿದ್ದಾರೆ. 'ಸಿತಾರೆ ಜಮೀನ್ ಪರ್' ಬಳಿಕ ಯಾವುದೇ ಸಿನಿಮಾ ಶುರು ಮಾಡಿಲ್ಲ. ಆಮೀರ್ ಖಾನ್ ಮಾತನಾಡಿ 'ಧುರಂಧರ್' ಚಿತ್ರ ಇನ್ನು ದೊಡ್ಡಮಟ್ಟದಲ್ಲಿ ತೆರೆಗೆ ಬರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Aamir Khan s Dhurandhar Comment Goes Viral as Blockbuster Sequel Gears Up for Massive Release

ಆಮೀರ್ ಖಾನ್ Variety ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. ಭಾರತದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಮ್ಮಿ ಇದೆ. ಹೆಚ್ಚು ಚಿತ್ರಮಂದಿರಗಳಿದ್ದರೆ ಹೆಚ್ಚು ಜನರನ್ನು ಸಿನಿಮಾ ತಲುಪುತ್ತದೆ. ಹೆಚ್ಚಿನ ಬ್ಯುಸಿನೆಸ್ ಆಗುತ್ತದೆ ಎಂದು ಆಮೀರ್ ಹೇಳಿದ್ದಾರೆ. "ಚೀನಾದಲ್ಲಿ ಹೆಚ್ಚು ಕಮ್ಮಿ 1 ಲಕ್ಷ ಚಿತ್ರಮಂದಿರಗಳಿವೆ. ಭಾರತದಲ್ಲಿ ಕೇವಲ 9 ಸಾವಿರ ಸ್ಕ್ರೀನ್‌ಗಳಿವೆ. ಅಂದರೆ ಚೀನಾಗೆ ಹೋಲಿಸಿದರೆ 10ನೇ 1 ಭಾಗ ಮಾತ್ರ. ಹಾಗಾಗಿ ಚೀನಾದಲ್ಲಿ ದೊಡ್ಡ ಸಿನಿಮಾ ಹೆಚ್ಚು ಗಳಿಕೆ ಕಾಣುತ್ತವೆ. ಎರಡು ಬಿಲಿಯನ್ ಯುಎಸ್ ಡಾಲರ್‌ ಗಳಿಕೆ ಮಾಡುವ ಸಿನಿಮಾಗಳಿವೆ. ನಾವು ನಮ್ಮ ಪರದೆಗಳ ಸಂಖ್ಯೆಯನ್ನು ಹೆಚ್ಚಿಸಿದರೆ ನಮ್ಮ ಸಿನಿಮಾಗಳ ಗಳಿಕೆ ಹೆಚ್ಚುತ್ತದೆ" ಎಂದಿದ್ದಾರೆ.

ಮಾತು ಮುಂದುವರೆಸಿರುವ ಆಮೀರ್ ಖಾನ್ ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಚೀನೀ ಚಿತ್ರ 'ನೆ ಝಾ 2'. ಒಟ್ಟು 2 ಬಿಲಿಯನ್ ಡಾಲರ್ ಗಳಿಸಿತು. 2025 ರ ಭಾರತದ ಅತಿ ಹೆಚ್ಚು ಗಳಿಕೆ ಕಂಡ 'ಧುರಂಧರ್' ಸಿನಿಮಾ ಗಳಿಸಿದ್ದು 115 ಮಿಲಿಯನ್ ಡಾಲರ್ ಮಾತ್ರ" ಎಂದಿದ್ದಾರೆ. ಸಾವಿರ ಕೋಟಿ ಕಲೆಕ್ಷನ್ ಮಾಡಿರುವ 'ಧುರಂಧರ್' ಚಿತ್ರದ 5000 ಸ್ಕ್ರೀನ್ ಬದಲು 15 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿದ್ದರೆ ಹೇಗಿರುತ್ತಿತ್ತು ಯೋಚಿಸಿ. ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾದರೆ ಎಲ್ಲವೂ ಬದಲಾಗುತ್ತದೆ" ಎಂದು ತಿಳಿಸಿದ್ದಾರೆ.

Aamir Khan s Dhurandhar Comment Goes Viral as Blockbuster Sequel Gears Up for Massive Release

ಮಾರ್ಚ್ 19ಕ್ಕೆ 'ಟಾಕ್ಸಿಕ್' ಎದುರು 'ಧುರಂಧರ್- 2' ಸಿನಿಮಾ ಬಿಡುಗಡೆ ಆಗ್ತಿದೆ. ಸಾಲು ಸಾಲು ರಜೆಗಳನ್ನು ಟಾರ್ಗೆಟ್ ಮಾಡಿ ಸಿನಿಮಾ ರಿಲೀಸ್ ಪ್ರಯತ್ನ ಮಾಡಲಾಗ್ತಿದೆ. ಯುಗಾದಿ ಹಾಗೂ ಈದ್ ರಜೆಗಳು ಚಿತ್ರಗಳ ಗಳಿಕೆಗೆ ವರವಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದು 'ಧುರಂಧರ್' ಸಿನಿಮಾ ಗೆದ್ದುಬಿಡ್ತು.

'ಕಾಂತಾರ- 1' ಕಳೆದ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿತ್ತು. ಆದರೆ ಕೇವಲ 20 ದಿನಗಳಲ್ಲಿ 'ಧುರಂಧರ್' ಈ ದಾಖಲೆ ಮುರಿದು ಮೊದಲ ಸ್ಥಾನಕ್ಕೆ ಏರಿಬಿಡ್ತು. ಇತ್ತೀಚೆಗೆ ಸಿನಿಮಾ ಓಟಿಟಿಗೂ ಬಂದು ಸದ್ದು ಮಾಡ್ತಿದೆ. ನಾಲ್ಕೈದು ದಿನಗಳ ಹಿಂದೆ 'ಧುರಂಧರ್'-2 ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ನಾನ್‌ ಥ್ರಿಯೇಟ್ರಿಕಲ್ ರೈಟ್ಸ್ 250 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ.

'ಧುರಂಧರ್' ಚಿತ್ರದ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಆದರೆ ಸೀಕ್ವೆಲ್ ಚಿತ್ರವನ್ನು ಕನ್ನಡ ಸೇರಿ 5 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗ್ತಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ನಡೀತಿದೆ.

More from Filmibeat

Read more about: aamir khan ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X