For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್‌ ಆಫೀಸ್‌ನಲ್ಲಿ ಖಾನ್-ಖಿಲಾಡಿ ಎದುರು-ಬದುರು! ಗೆಲ್ಲೋದು ಯಾರು?

  |

  ಸ್ಟಾರ್ ನಟರಿಬ್ಬರು ಸಿನಿಮಾಗಳು ಪರಸ್ಪರ ಎದುರಾಗಿ ಬರುವುದು ಇತ್ತೀಚೆಗೆ ಕಡಿಮೆ ಆಗಿದೆ ಎಂದೇ ಹೇಳಬೇಕು. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನಾ ಬಂದ ಬಳಿಕವಂತೂ ಸಿನಿಮಾ ನಟರು ತಮ್ಮ ಸಿನಿಮಾ ಇನ್ನೊಬ್ಬ ನಟರ ಸಿನಿಮಾದೊಂದಿಗೆ ಕ್ಲ್ಯಾಶ್ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

  ಒಂದೊಮ್ಮೆ ಕ್ಲ್ಯಾಶ್ ಆದರೂ ಎರಡು ಬೇರೆ ಬೇರೆ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು ಪರಸ್ಪರ ಎದುರಾಗಬಹುದು. 'ಕೆಜಿಎಫ್ 2' ಸಿನಿಮಾಕ್ಕೆ ವಿಜಯ್‌ ನಟನೆಯ 'ಬೀಸ್ಟ್' ಸಿನಿಮಾ ಎದುರಾದಂತೆ. ಆದರೆ ಒಂದೇ ಉದ್ಯಮದ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಎದುರುಬದುರಾಗುವುದು ಬಹಳ ಅಪರೂಪ.

  ಆದರೆ ಈಗ ಈ ಅಪರೂಪದ ಸಂಗತಿ ಘಟಿಸುತ್ತಿದೆ. ಬಾಲಿವುಡ್‌ ಮಾತ್ರವಲ್ಲ ಭಾರತೀಯ ಚಿತ್ರರಂಗದ ಸ್ಟಾರ್ ನಟರುಗಳಾದ ಅಕ್ಷಯ್ ಕುಮಾರ್ ಹಾಗೂ ಆಮಿರ್ ಖಾನ್ ಅವರುಗಳು ಪರಸ್ಪರ ಬಾಕ್ಸ್ ಆಫೀಸ್‌ನಲ್ಲಿ ಎದುರಾಗುತ್ತಿದ್ದಾರೆ. ಇಬ್ಬರ ನಟನೆಯ ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿವೆ.

  ಇಬ್ಬರು ಸ್ಟಾರ್‌ಗಳ ಮುಖಾ-ಮುಖಿ

  ಇಬ್ಬರು ಸ್ಟಾರ್‌ಗಳ ಮುಖಾ-ಮುಖಿ

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಆಗಸ್ಟ್ 11 ರಂದು ಬಿಡುಗಡೆ ಆಗುತ್ತಿದೆ. ಆಮಿರ್ ಖಾನ್ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಂಗಳುಗಳ ಮೊದಲೇ ಘೋಷಿಸಿದ್ದರು. ಅದರಲ್ಲಿಯೂ ಎರಡು ಬಾರಿ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಲಾಗಿ ಕೊನೆಗೆ ಆಗಸ್ಟ್ 11 ಕ್ಕೆ ಬಿಡುಗಡೆ ಫಿಕ್ಸ್ ಆಗಿತ್ತು. ಆಮಿರ್ ಖಾನ್ ಸಹ ಬಹಳ ಬಿರುಸಿನಿಂದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

  ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆ

  ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆ

  ಆದರೆ ವರ್ಷಕ್ಕೆ ಐದಾರು ಸಿನಿಮಾಗಳನ್ನು ಬಿಡುಗಡೆ ಮಾಡುವ ಅಕ್ಷಯ್ ಕುಮಾರ್, ಹಠಾತ್ತನೆ ಬಂದು ತಮ್ಮ ಹೊಸ ಸಿನಿಮಾ 'ರಕ್ಷಾ ಬಂಧನ್' ಅದೇ ಆಗಸ್ಟ್ 11 ರಂದು ಬಿಡುಗಡೆ ಆಗಲಿದೆ ಎಂದಿದ್ದಾರೆ. ಹೌದು, ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗುತ್ತಿದೆ. ಆಮಿರ್ ಖಾನ್ ಸಿನಿಮಾಕ್ಕೆ ಎದುರಾಗಿ ಅಕ್ಷಯ್‌ರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಯಾರ ಸಿನಿಮಾ ನೆಲೆ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  ರಕ್ಷಾ ಬಂಧನ್ ಇರುವ ಕಾರಣ ಅದೇ ದಿನ ಬಿಡುಗಡೆ

  ರಕ್ಷಾ ಬಂಧನ್ ಇರುವ ಕಾರಣ ಅದೇ ದಿನ ಬಿಡುಗಡೆ

  ಆಗಸ್ಟ್ 11 ರಂದು ರಕ್ಷಾ ಬಂಧನ್ ಇರುವ ಕಾರಣ ಹಾಗೂ ತಮ್ಮ ಸಿನಿಮಾ ಅದೇ ವಿಷಯದ ಬಗ್ಗೆ ಆಧಾರವಾಗಿರುವ ಕಾರಣ ಅದು ನಮಗೆ ಸೂಕ್ತ ಸಮಯ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಕ್ಷಯ್ ಕುಮಾರ್‌ರ 'ರಕ್ಷಾ ಬಂಧನ್' ಸಿನಿಮಾ ಅಣ್ಣ-ತಂಗಿಯ ಬಾಂಧವ್ಯ ಹಾಗೂ ರಕ್ಷಾ ಬಂಧನದ ಪ್ರಾಮುಖ್ಯತೆಯನ್ನು ಸಾರುವ ಸಿನಿಮಾ ಆಗಿದೆ. ಸಿನಿಮಾ ತಂಡವು ಪ್ರಚಾರ ಕಾರ್ಯವನ್ನು ಶುರು ಮಾಡಿದೆ. ಸತತ ಜಾಹೀರಾತುಗಳನ್ನು ಟಿವಿಗಳನ್ನು ಪ್ರಸಾರ ಮಾಡಲಾಗುತ್ತಿದೆ.

  ಆಮಿರ್ ಖಾನ್ ನಿರ್ಮಾಣದ ಸಿನಿಮಾ

  ಆಮಿರ್ ಖಾನ್ ನಿರ್ಮಾಣದ ಸಿನಿಮಾ

  ಇನ್ನು 'ಲಾಲ್ ಸಿಂಗ್ ಚಡ್ಡ' ಸಿನಿಮಾವು ಆಮಿರ್ ಖಾನ್‌ರ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಈ ಸಿನಿಮಾ ಮೇಲೆ ಸ್ವತಃ ಆಮಿರ್ ಖಾನ್ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ಈ ಸಿನಿಮಾ ಆಗಿದೆ. ಆಮಿರ್ ಖಾನ್ ಅರೆ ಬುದ್ಧಿಮಾಂಧ್ಯ ಪಂಜಾಬಿ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶನವನ್ನು ಅದ್ವೈತ್ ಚಂದನ್ ಮಾಡಿದ್ದಾರೆ. ನಿರ್ಮಾಣ ಆಮಿರ್ ಖಾನ್ ಅವರದ್ದೇ. ನಟ ಚಿರಂಜೀವಿ ಈ ಸಿನಿಮಾವನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರೆಸೆಂಟ್ ಮಾಡುತ್ತಿದ್ದಾರೆ.

  English summary
  Aamir Khan's Laal Singh Chaddha and Akshay Kumar's Raksha Bandhan movie releasing on the same day that is August 11.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X