ಅಮೀರ್ ಖಾನ್ ಮಾನ ಕಾಪಾಡಿದ ಟ್ರಾನ್ಸಿಸ್ಟರ್ ಗೆ ಭಾರಿ ಬೆಲೆ

By Rajendra

ನಟ ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪಿಕೆ'. ಆರಂಭದಿಂದಲೂ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಚಿತ್ರರಸಿಕರ ಗಮನಸೆಳೆಯುತ್ತಿದೆ. ಈ ಚಿತ್ರದಲ್ಲಿ ಅಮೀರ್ ಖಾನ್ ಅರೆನಗ್ನವಾಗಿ ತನ್ನ ಮಾವ ಮುಚ್ಚಿಕೊಳ್ಳಲು ಬಳಸಿದ್ದ ಟ್ರಾನ್ಸಿಸ್ಟರ್ ಗೆ ಈಗ ಭಾರಿ ಬೇಡಿಕೆ ಬಂದಿದೆ.

ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಈ ಟ್ರಾನ್ಸಿಸ್ಟರ್ ಗೆ ಒಂದೂವರೆ ಕೋಟಿ ರುಪಾಯಿ ಕೊಡುವುದಾಗಿ ಸಂಸ್ಥೆಯೊಂದು ಮುಂದೆ ಬಂದಿದೆ. ಆದರೆ ಈ ಟ್ರಾನ್ಸಿಸ್ಟರನ್ನು ಕೊಡಲು ಅಮೀರ್ ಖಾನ್ ಮಾತ್ರ ಮನಸ್ಸು ಮಾಡುತ್ತಿಲ್ಲವಂತೆ. ಅಂತಹದ್ದೇನಿದೆಯೋ ಏನೋ ಈ ಟ್ರಾನ್ಸಿಸ್ಟರ್ ನಲ್ಲಿ ಎಂದು ಅಭಿಮಾನಿಗಳೂ ತಲೆಕೆಡಿಸಿಕೊಳ್ಳುವಂತಾಗಿದೆ.

'ಪಿಕೆ' ಚಿತ್ರದ ಮೊದಲ ಪೋಸ್ಟರ್ ನಲ್ಲಿ ಈ ಟ್ರಾನ್ಸಿಸ್ಟರ್ ದರ್ಶನ ಮಾಡಿಸಿದ್ದರು ಅಮೀರ್ ಖಾನ್. ರೈಲ್ವೆ ಹಳಿಗಳ ಮೇಲೆ ನಗ್ನವಾಗಿ ನಿಂತು ಈ ಟ್ರಾನ್ಸಿಸ್ಟರ್ ಮೂಲಕ ತಮ್ಮ ಮಾನ ಮುಚ್ಚಿಕೊಂಡಿದ್ದರು ಅಮೀರ್. ಈ ಪೋಸ್ಟರ್ ಸಹ ಭಾರಿ ವಿವಾದ, ಚರ್ಚೆಗೆ ಗ್ರಾಸವಾಗಿದ್ದು ಬೇರೆ ವಿಚಾರ.

Aamir Khan's PK Transistor receives Rs 1.5 crore offer

ಆ ಬಳಿಕ ಇನ್ನೊಂದಿಷ್ಟು ಪೋಸ್ಟರ್ ಗಳು, ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಅಲ್ಲೆಲ್ಲಾ ಸಾಮಾನ್ಯವಾಗಿ ಕಾಣಿಸುತ್ತಿದ್ದ ಒಂದೇ ಒಂದು ವಸ್ತು ಎಂದರೆ ಅದೇ ಟ್ರಾನ್ಸಿಸ್ಟರ್. ಕೇವಲ ಪ್ರೇಕ್ಷಕರನ್ನಷ್ಟೇ ಅಲ್ಲದೆ ಚಿತ್ರತಂಡವನ್ನೂ ಆಪಾದಮಸ್ತಕ ಕಾಡಿದ ವಸ್ತು ಇದು.

ಈ ಟ್ರಾನ್ಸಿಸ್ಟರ್ ಮೇಲೆ ಎಲ್ಲರ ಕಣ್ಣು ಬಿತ್ತು. ಅದರಲ್ಲೂ ಮುಖ್ಯವಾಗಿ ಚಿತ್ರದ ನಾಯಕಿ ಅನುಷ್ಕಾ ಶರ್ಮಾ ನೇರವಾಗಿ ಈ ಟ್ರಾನ್ಸಿಸ್ಟರ್ ಗೆ ಕೈಹಾಕಿ ಇದು ತಮಗೆ ಬೇಕು ಎಂದು ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಅಮೀರ್ ಅವರನ್ನು ಕೇಳಿದರಂತೆ. "ನಿಮಗಷ್ಟೇ ಅಲ್ಲ ನಮಗೂ ಆ ಟ್ರಾನ್ಸಿಸ್ಟರ್ ಎಂದರೆ ತುಂಬಾ ಇಷ್ಟ" ಎಂದು ಹೇಳಿ ಅನುಷ್ಕಾ ಆಸೆಗೆ ತಣ್ಣೀರೆರಚಿದ್ದಾರೆ.

ಏತನ್ಮಧ್ಯೆ ಈ ಟ್ರಾನ್ಸಿಸ್ಟರ್ ಮೇಲೆ ಆನ್ ಲೈನ್ ಹರಾಜು ಸಂಸ್ಥೆಯೊಂದರ ಕಣ್ಣೂ ಬಿತ್ತು. ತಾವು ರು.1.5 ಕೋಟಿ ಕೊಡ್ತೀವಿ ಆ ಟ್ರಾನ್ಸಿಸ್ಟರ್ ಕೊಡಿ ಎಂದು ಕೇಳಿದರಂತೆ. ಹೆಚ್ಚೆಂದರೆ ರು.200-300 ಬೆಲೆ ಬಾಳುವ ಟ್ರಾನ್ಸಿಸ್ಟರ್ ಗೆ ಈ ಪಾಟಿ ಹಣ ಕೊಡ್ತೀವಿ ಎಂದರೂ ಅಮೀರ್ ಒಲ್ಲೆ ಎಂದಿದ್ದಾರೆ.

"ಈ ಟ್ರಾನ್ಸಿಸ್ಟರ್ ಎಂದರೆ ನನಗೆ ತುಂಬಾ ಇಷ್ಟ. ಇದನ್ನು ನಾನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದನ್ನು ಭಾರಿ ಮೊತ್ತ ಕೊಟ್ಟು ಕೊಂಡುಕೊಳ್ಳಲು ಸಂಸ್ಥೆಯೊಂದು ಮುಂದೆ ಬಂದದ್ದು ನಿಜ" ಎಂದಿದ್ದಾರೆ ಅಮೀರ್.

ಇನ್ನು ಚಿತ್ರದಲ್ಲಿ ಅನುಷ್ಕಾ ಶರ್ಮಾ ಸಹ ನಗ್ನವಾಗಿ ಕಾಣಿಸಲಿದ್ದಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಆ ರೀತಿಯ ಯಾವುದೇ ಸನ್ನಿವೇಶಗಳು ಇಲ್ಲ ಎಂದಿದೆ ಚಿತ್ರತಂಡ. ಇನ್ನು ಚಿತ್ರದಲ್ಲಿ ಅಮೀರ್ ಖಾನ್ ಒಂಬತ್ತು ಗೆಟಪ್ ಗಳಲ್ಲಿ ಕಾಣಿಸಲಿದ್ದಾರೆ.

ಈ ಚಿತ್ರದಲ್ಲಿ ಅಮೀರ್ ಖಾನ್ ಕಣ್ಣೆವೆ ಮಿಟುಕಿಸದೆ ಕಾಣಿಸುತ್ತಾರೆ. ಅದೇಗೆ ಸಾಧ್ಯವಾಯಿತು ಎಂದರೆ, "ಅನುಷ್ಕಾ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಿದ್ದೆ" ಎಂದು ಚಟಾಕಿ ಸಿಡಿಸಿದ್ದಾರೆ ಅಮೀರ್! ಈ ಚಿತ್ರದಲ್ಲಿ ಸುದೀರ್ಘ ಚುಂಬನ ದೃಶ್ಯವೂ ಇದೆ. ಬಾಲಿವುಡ್ ತೆರೆಯ ಮೇಲೆ ಬಂದಿರುವ ಅತ್ಯಂತ ಸುದೀರ್ಘ ಚುಂಬನ ಇದು ಎನ್ನಲಾಗಿದೆ. (ಏಜೆನ್ಸೀಸ್)

More from Filmibeat

English summary
The Transistor used by Bollywood superstar Aamir Khan in the first look poster of his upcoming flick 'PK' received Rs 1.5 crore offer. This item was actually bought from Chor Bazaar for just 227 rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X