'ದಂಗಲ್' ಜೋಡಿಯಿಂದ ಮತ್ತೊಂದು ಅದ್ಭುತ ಕಥೆಯ ಸಿನಿಮಾ
'ದಂಗಲ್' ಸಿನಿಮಾದ ಸೂಪರ್ ಸಕ್ಸಸ್ ನಂತರ ಮತ್ತೆ ಅಮೀರ್ ಖಾನ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಅಮೀರ್ 'ಸೀಕ್ರೆಟ್ ಸೂಪರ್ ಸ್ಟಾರ್' ಎಂಬ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ಈಗ ರಿಲೀಸ್ ಆಗಿದೆ.
'ದಂಗಲ್' ಸಿನಿಮಾದಲ್ಲಿ ಅಮೀರ್ ಖಾನ್ ಅವರ ಪುಟ್ಟ ಮಗಳ ಪಾತ್ರವನ್ನು ಮಾಡಿದ್ದ ಝಯಿರಾ ವಾಸಿಮ್ ಇಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸು ಇಟ್ಟುಕೊಂಡಿರುವ ಸಣ್ಣ ಹುಡುಗಿಯ ಕಥೆ ಇದಾಗಿದೆ.

ತಮ್ಮ ನಿರ್ಮಾಣದಲ್ಲಿ ಒಳ್ಳೆಯ ಕಥೆಯ ಸಿನಿಮಾಗಳನ್ನು ಮಾಡುವ ಅಮೀರ್ ಮತ್ತೊಂದು ಅದ್ಭುತ ಕಥೆಯ ಚಿತ್ರ ಮಾಡಿದ್ದಾರೆ. 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರಕ್ಕೆ ಅದ್ವೈತ್ ಚಂದನ್ ನಿರ್ದೇಶನವಿದೆ. ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಆಗಸ್ಟ್ 2ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ.
English summary
Aamir Khan's 'Secret Superstar' movie first look released


Click it and Unblock the Notifications