ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್: ತಾಯಿಗೆ ಇಂದು ಪರೀಕ್ಷೆ

By Avani Malnad

ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಟ್' ಅಮೀರ್ ಖಾನ್ ಮತ್ತು ಅವರ ಕುಟುಂಬದವರಲ್ಲಿ ಕೊರೊನಾ ವೈರಸ್ ಭೀತಿ ಎದುರಾಗಿದೆ. ಅದೃಷ್ಟವಶಾತ್ ಅವರು ಸುರಕ್ಷಿತವಾಗಿದ್ದಾರೆ. ಆದರೆ ಅವರ ಕೆಲವು ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

Recommended Video

Amir Khan's staff tested corona positive:ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್

ಈ ಮಾಹಿತಿಯನ್ನು ಸ್ವತಃ ಅಮೀರ್ ಖಾನ್ ತಿಳಿಸಿದ್ದು, ಉಳಿದ ಸಿಬ್ಬಂದಿ ಹಾಗೂ ಕುಟುಂಬದ ಎಲ್ಲರ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದನ್ನು ಅಮೀರ್ ಖಾನ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ. ಆದರೆ ಅಮೀರ್ ಖಾನ್ ಅವರ ತಾಯಿ ಜೀನತ್ ಹುಸೈನ್ ಅವರ ಕೊರೊನಾ ವೈರಸ್ ಪರೀಕ್ಷೆ ನಡೆಯಬೇಕಿದೆ. ತಾಯಿಯ ವರದಿಯಲ್ಲಿ ನೆಗೆಟಿವ್ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿ ಎಂದು ಅಮೀರ್ ಮನವಿ ಮಾಡಿದ್ದಾರೆ. ಮುಂದೆ ಓದಿ...

ಸಿಬ್ಬಂದಿಯಲ್ಲಿ ಕೊರೊನಾ

ಸಿಬ್ಬಂದಿಯಲ್ಲಿ ಕೊರೊನಾ

'ನನ್ನ ಸಿಬ್ಬಂದಿಯಲ್ಲಿ ಕೆಲವರು ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿರುವುದನ್ನು ತಿಳಿಸುತ್ತಿದ್ದೇನೆ. ಅವರೆಲ್ಲರನ್ನೂ ತಕ್ಷಣವೇ ಕ್ವಾರೆಂಟೈನ್ ಮಾಡಲಾಗಿತ್ತು. ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಬಹಳ ಪ್ರಾಮಾಣಿಕರು ಮತ್ತು ದಕ್ಷರಾಗಿದ್ದು, ಅವರನ್ನು ವೈದ್ಯಕೀಯ ಸೌಲಭ್ಯದೆಡೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಅಮೀರ್ ಹೇಳಿದ್ದಾರೆ.

ಉಳಿದವರಲ್ಲಿ ನೆಗೆಟಿವ್

ಉಳಿದವರಲ್ಲಿ ನೆಗೆಟಿವ್

ಅವರ ಮೇಲೆ ಅಷ್ಟು ಕಾಳಜಿಯ ಆರೈಕೆ ಮಾಡುತ್ತಿರುವುದಕ್ಕೆ, ಇಡೀ ಪ್ರದೇಶವನ್ನು ಸೋಂಕು ನಿವಾರಣೆಯ ಔಷಧ ಸಿಂಪಡಿಸಿ ಸ್ವಚ್ಛಗೊಳಿಸಿದ ಬಿಎಂಸಿಗೆ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ಉಳಿದಂತೆ ನಮ್ಮೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರಲ್ಲಿಯೂ ವರದಿ ನೆಗೆಟಿವ್ ಬಂದಿದೆ.

ತಾಯಿಯ ಪರೀಕ್ಷೆ ಬಾಕಿ

ತಾಯಿಯ ಪರೀಕ್ಷೆ ಬಾಕಿ

ಪ್ರಸ್ತುತ ನಾನು ನನ್ನ ತಾಯಿಯನ್ನು ಪರೀಕ್ಷೆಗೆ ಕರೆದೊಯ್ಯುತ್ತಿದ್ದೇನೆ. ಈ ಪರೀಕ್ಷೆಗೆ ಒಳಪಡುತ್ತಿರುವ ಕೊನೆಯ ವ್ಯಕ್ತಿ ಅವರು. ಆಕೆಯಲ್ಲಿಯೂ ನೆಗೆಟಿವ್ ವರದಿ ಬರಲಿ ಎಂದು ದಯವಿಟ್ಟು ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ

ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ

ಪ್ರಾಮಾಣಿಕ, ವೃತ್ತಿಪರ ಮತ್ತು ಕಾಳಜಿಯ ಮನೋಭಾವದಿಂದ ನಮಗೆ ಸಹಾಯ ಮಾಡುತ್ತಿರುವ ಬಿಎಂಸಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ಹಾಗೆಯೇ ಕೋಕಿಲಾಬೆನ್ ಆಸ್ಪತ್ರೆ, ಅಲ್ಲಿನ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗೆ ದೊಡ್ಡ ಧನ್ಯವಾದಗಳು. ಅವರು ಬಹಳ ಕಾಳಜಿಯಿಂದ ಪರೀಕ್ಷೆಯ ಪ್ರಕ್ರಿಯೆ ನಡೆಸುತ್ತಿದ್ದಾರೆ. ದೇವರ ಆಶೀರ್ವಾದ ಇರಲಿ. ಸುರಕ್ಷಿತರಾಗಿರಿ ಎಂದು ಅಮೀರ್ ಖಾನ್ ಬರೆದಿದ್ದಾರೆ.

More from Filmibeat

English summary
Bollywood actor Aamir Khan said he is taking his mother for coronavirus tast after some of his staff tests positive for COVID 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X