ಬಾಲಿವುಡ್ ನ ಈ ಖ್ಯಾತ ನಟ ಯಾರು ಗೊತ್ತಾ?

ಬಿಳಿ ಕೂದಲು, ದಪ್ಪ ಹೊಟ್ಟೆ, ದೊಡ್ಡ ಕನ್ನಡಕ ಧರಿಸಿರುವ ಈ ಹಣ್ಣು ಹಣ್ಣಾದ ಮುದುಕ ಈಗ ಬಾಲಿವುಡ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅಚ್ಚರಿ ಮೂಡಿಸಿರುವ ಈ ತಾತ ಮತ್ಯಾರು ಅಲ್ಲ ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್.

ಹೌದು, ಆಮೀರ್ ಖಾನ್ ಗೆಟಪ್ ನೋಡಿ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಬಾಲಿವುಡ್ ದಂಗಾಗಿದೆ. ಅತ್ತ ದೀಪಿಕಾ ಪಡುಕೋಣೆ ಅಭಿನಯದ 'ಛಪಾಕ್' ಫಸ್ಟ್ ಲುಕ್ ಸದ್ದು ಮಾಡುತ್ತಿದ್ದರೆ, ಇತ್ತ ಆಮೀರ್ ಖಾನ್ ಹೊಸ ಗೆಟಪ್ ಕೂಡ ಸಂಚಲನ ಮೂಡಿಸಿದೆ.

'ಥಗ್ಸ ಆಫ್ ಹಿಂದೂಸ್ತಾನ್' ಚಿತ್ರದ ನಂತರ ಆಮೀರ್ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್ ಖಾನ್, ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿ ಈ ವರ್ಷದ ಕೊನೆಯಲ್ಲಿ ಸಿನಿಮಾ ಪ್ರಾರಂಭವಾಗಲಿದೆ ಅಂತ ಹೇಳಿದ್ರು.

Aamir Khans transformation for his latest commercial

ಆದ್ರೀಗ, ದಿಢೀರ್ ಅಂತ ಹಣ್ಣು ಹಣ್ಣು ಮುದುಕನಾಗಿ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಅಂದ್ಹಾಗೆ ಆಮೀರ್ ಲುಕ್ ಬದಲಾಯಿಸಿಕೊಂಡಿರುವುದು ಮುಂದಿನ ಸಿನಿಮಾಗಾಗಿ ಅಲ್ಲ ಜಾಹಿರಾತಿಗಾಗಿ. ಮೊಬೈಲ್ ಪೇ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವ ಆಮೀರ್ ಜಾಹಿರಾತಿಗಾಗಿ ಸಂಪೂರ್ಣ ಗೆಟಪ್ ಬದಲಾಯಿಸಿಕೊಂಡು ಮುದುಕರಾಗಿದ್ದಾರೆ.

ಸಿನಿಮಾ ಅಂತ ಬಂದಾಗಲೂ ಆಮೀರ್ ಪಾತ್ರಕ್ಕೆ ಹೇಗೆ ಬೇಕೋ ಹಾಗೆ ದೇಹವನ್ನು ದಂಡಿಸಿ ಸಾಕಷ್ಟು ತಯಾರಿ ಮಾಡಿಕೊಳ್ಳುವ ಅಮೀರ್ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಆಮೀರ್ ಈಗ ತಾತನಾಗಿ ಎಲ್ಲರ ಮನಗೆದ್ದಿದ್ದಾರೆ.

Aamir Khans transformation for his latest commercial

ಇದು ಜಾಹಿರಾತು ಅಷ್ಟೆ. ಇದನ್ನ ನೋಡಿಯೇ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಹಾಗಾಗಿ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಅಮೀರ್ ಗೆಟಪ್ ಹೇಗಿರಲಿದೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಯಾಕೆಂದರೆ ಪಾತ್ರಕ್ಕಾಗಿ ಅಮೀರ್ ಬರೋಬ್ಬರಿ 20 ಕೆಜಿ ಕಮ್ಮಿಯಾಗುತ್ತಿದ್ದಾರೆ, ಹಾಗಾಗಿ 6 ತಿಂಗಳು ತಯಾರಿ ನಡೆಯುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ದೀಪಾವಳಿಗೆ ರಿಲೀಸ್ ಮಾಡುಲು ಪ್ಲಾನ್ ಮಾಡಿದೆ ಚಿತ್ರತಂಡ.

More from Filmibeat

English summary
Aamir Khan's transformation to an old for his latest commercial. Fans are shocked to Amir Khan new look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X