ನಾಯಕಿಯರ ಕೈ ಮೇಲೆ ಉಗುಳುವುದ್ಯಾಕೆ ಆಮೀರ್ ಖಾನ್? ಏನಿದು ವಿಚಿತ್ರ ಅಭ್ಯಾಸ?

ಬಾಲಿವುಡ್ ನಟ ಆಮೀರ್ ಖಾನ್ ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು. ಆದರೆ ಇತ್ತೀಚೆಗೆ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಷ್ಟ್ ಮ್ಯಾಜಿಕ್ ನಡೀತಿಲ್ಲ. ಸತತ ಸೋಲುಗಳಿಂದ ಆಮೀರ್ ಕಂಗೆಟ್ಟಿದ್ದಾರೆ. ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಅದೊಂದು ಕಾರಣಕ್ಕೆ ಆಮೀರ್ ಟ್ರೋಲ್ ಆಗುತ್ತಿದ್ದಾರೆ.

ಆಮೀರ್ ಖಾನ್ ಬಹಳ ಹಿಂದೆ ವೇದಿಕೆಯೊಂದರಲ್ಲಿ ತಮಾಷೆಯಾಗಿ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. ತನ್ನೊಟ್ಟಿಗೆ ನಟಿಸುತ್ತಿದ್ದ ನಾಯಕಿಯರ ಕೈ ಮೇಲೆ ನಾನು ಉಗಿಯುತ್ತಿದ್ದೆ ಎಂದು ಹೇಳಿದ್ದರು. ಆ ವೀಡಿಯೋ ನೋಡಿ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಎದುರಿಸುವಂತಾಗಿದೆ.

Aamir Khan Says he spits on his heroines hands old video goes viral

ಬಾಲಿವುಡ್ ನಟ ಆಮೀರ್ ಖಾನ್ ಕೊನೆಯದಾಗಿ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ನಟಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಹೀನಾಯವಾಗಿ ಸೋತಿತ್ತು. ಅದಕ್ಕೂ ಮುನ್ನ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಇದೇ ಕಾರಣಕ್ಕೆ ಆಮೀರ್ ಸಿನಿಮಾಗಳ ಮೇಲಿನ ಕ್ರೇಜ್ ಕಮ್ಮಿ ಆಗಿದೆ. ಹಿಂದಿ ಬೆಲ್ಟ್‌ನಲ್ಲಿ ಈಗ ಸೌತ್ ಸಿನಿಮಾಗಳು ಕಾರುಬಾರು ಜೋರಾಗಿದೆ.

ಇತ್ತೀಚೆಗೆ 'ಲಪತ್ತಾ ಲೇಡಿಸ್' ಚಿತ್ರವನ್ನು ಆಮೀರ್ ಖಾನ್ ನಿರ್ಮಿಸಿದ್ದರು. ಮಾಜಿ ಪತ್ನಿ ಕಿರಣ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೀಗ 'ಸಿತಾರೆ ಜಮೀನ್ ಪರ್' ಎಂಬ ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಚಿತ್ರವಿಚಿತ್ರ ಹೇಳಿಕೆಗಳಿಗೆ ಆಮೀರ್ ಖಾನ್ ಸುದ್ದಿಯಲ್ಲಿದ್ದಾರೆ. ಅದೆಲ್ಲದರ ನಡುವೆ ಈ ಹಳೇ ವೀಡಿಯೋ ವೈರಲ್ ಆಗಿ ಟ್ರೋಲ್ ಎದುರಿಸುವಂತಾಗಿದೆ.

Aamir Khan Says he spits on his heroines hands old video goes viral

MAMI 18ನೇ ಮುಂಬೈ ಚಲನಚಿತ್ರೋತ್ಸವ. ವೇದಿಕೆಯಲ್ಲಿ 'ಜೋ ಜೀತ ವೋಹಿ ಸಿಕಂದರ್' ಚಿತ್ರತಂಡದ ಜೊತೆ ಟಾಕ್ ಶೋ ನಡೆದಿತ್ತು. ನಿರ್ದೇಶಕ ಮನ್ಸೂರ್ ಖಾನ್, ನಟ ಆಮೀರ್ ಖಾನ್, ನಿರ್ದೇಶಕಿ ಫರಾ ಖಾನ್, ನಟಿ ಪೂಜಾ ಬೇಡಿ ಸೇರಿದಂತೆ ಹಲವರು ವೇದಿಕೆಯಲ್ಲಿ ಇದ್ದರು. ಈ ವೇಳೆ ಆಮೀರ್ ಖಾನ್ ತಮ್ಮ ಸಿನಿಜರ್ನಿಯನ್ನು ನೆನಪಿಸಿಕೊಂಡಿದ್ದರು. ಈ ವೇಳೆ ಆಮೀರ್ ನಾಯಕಿಯರ ಕೈ ಮೇಲೆ ಉಗಿಯುತ್ತಿದ್ದ ಬಗ್ಗೆ ಫರಾ ಖಾನ್ ಮಾತನಾಡಿದ್ದರು.

ನಟಿ ಪೂಜಾ ಬೇಡಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಬಳಿಕ ಅದನ್ನು ಫರಾ ಖಾನ್ ಮುಂದುವರೆಸಿದ್ದರು. ಶೂಟಿಂಗ್ ವೇಳೆ ಆಮೀರ್ ಖಾನ್ ಬಹಳ ತಮಾಷೆ ಮಾಡುತ್ತಿದ್ದರು. ಫ್ರಾಂಕ್ ಕೂಡ ಮಾಡುತ್ತಿದ್ದರು. ನಾಯಕಿಯರ ಕೈ ನೋಡಿ ಭವಿಷ್ಯ ಹೇಳುತ್ತೇನೆ ಎನ್ನುತ್ತಿದ್ದರು. ಅದನ್ನು ಕೇಳಿ ನಿಜವೇನೋ ಎಂದುಕೊಂಡು ನಾಯಕಿಯರು ಕೈ ತೋರಿಸುತ್ತಿದ್ದರು. ಕೂಡಲೇ ಆಮೀರ್ ಖಾನ್ ಅವರ ಕೈ ಮೇಲೆ ಉಗಿಯುತ್ತಿದ್ದರು ಎಂದು ಫರಾ ಹೇಳಿದ್ದಾರೆ.

ಫರಾ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಆಮೀರ್ ಖಾನ್ "ನಾನು ಆ ರೀತಿ ಕೈ ಮೇಲೆ ಉಗಿದ ನಾಯಕಿಯರೆಲ್ಲಾ ಮುಂದೆ ನಂಬರ್ ವನ್ ಆಗಿದ್ದಾರೆ. ಮಾಧುರಿ, ಜ್ಯೂಹಿ ಚಾವ್ಲಾ ಹೀಗೆ ಎಲ್ಲರಿಗೂ ಹೀಗೆ ಮಾಡಿದ್ದೀನಿ. ಅದು ನನ್ನ ಜವಾಬ್ದಾರಿ" ಎಂದು ನಕ್ಕಿದ್ದಾರೆ. ವೇದಿಕೆಯಲ್ಲಿದ್ದ ಸಹನಟರೊಬ್ಬರು ಮಾತನಾಡಿ ಒಂದು ವೇಳೆ ಸಹನಟರ ಕೈ ಮೇಲೆ ಉಗಿದಿದ್ದರೆ ಏನಾಗುತ್ತಿತ್ತು ಎಂದಿದ್ದಾರೆ. ಅದಕ್ಕೆ ಆಮೀರ್ ಅದು ಬರೀ ನಾಯಕಿಯರಿಗೆ ಮಾತ್ರ ವರ್ಕ್ ಆಗುತ್ತಿತ್ತು ಎಂದಿದ್ದಾರೆ.

ಸದ್ಯ ಈ ವೀಡಿಯೋ ನೋಡಿ ಆಮೀರ್ ಖಾನ್‌ನ ಬಹಳ ಟ್ರೋಲ್ ಮಾಡಲಾಗುತ್ತಿದೆ. ಇದು ಎಂಥಹ ವಿಚಿತ್ರ ಅಭ್ಯಾಸ? ಆ ನಟಿಯರು ಇದನ್ನೆಲ್ಲಾ ಹೇಗೆ ಸಹಿಸಿಕೊಳ್ಳುತ್ತಿದ್ದರು? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
When Aamir Khan revels why he spits on his heroines' hands; Mr perfectionist Gets Trolled For His Old video;
Read more about: aamir khan bollywood hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X