ನಾನು ಸಡನ್ ಆಗಿ ಸತ್ತು ಹೋದ್ರೆ? ಏನ್ ಮಾಡ್ಬೇಕು ಅಂತ ಮೊದ್ಲೆ ಹೇಳಿಬಿಡ್ತೀನಿ; ಆಮೀರ್ ಖಾನ್
ಬಾಲಿವುಡ್ ನಟ ಆಮೀರ್ ಖಾನ್ ಹವಾ ಕಮ್ಮಿ ಆಗಿದೆ. ಮೊದಲಿನಂತೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನಿಮಾಗಳು ಸದ್ದು ಮಾಡ್ತಿಲ್ಲ. ಸದ್ಯ ಅವರ ಪುತ್ರ ಜುನೈದ್ ಖಾನ್ ನಟನೆಯ 'ಏಕ್ ದಿನ್' ಸಿನಿಮಾ ಬಿಡುಗಡೆಯಾಗಿದೆ. ಮಗನ ಸಿನಿಮಾ ಬೆಂಬಲಕ್ಕೆ ಆಮೀರ್ ಖಾನ್ ನಿಂತಿದ್ದಾರೆ. ಚಿತ್ರ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ.
'ಏಕ್ ದಿನ್' ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿರುವುದು ವಿಶೇಷ. ಆಮೀರ್ ಖಾನ್ ತನ್ನ ಸೋದರ ಸಂಬಂಧಿ ಮನ್ಸೂರ್ ಖಾನ್ ಜೊತೆ ಈ ರೊಮ್ಯಾಂಟಿಕ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ದಿ ಹಾಲಿವುಡ್ ರಿಪೋರ್ಟರ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಇಬ್ಬರೂ ಭಾಗಿ ಆಗಿದ್ದಾರೆ. ಈ ವೇಳೆ ಆಮೀರ್ ಖಾನ್ ತಮಗೆ ವಿಮಾನದಲ್ಲಿ ಪ್ರಯಾಣಿಸುವಾಗ ಜೀವಭಯ ಆಗುತ್ತದೆ ಎಂದು ಹೇಳಿರುವುದು ವೈರಲ್ ಆಗ್ತಿದೆ.

ಆಮೀರ್ ಹಾಗೂ ಮನ್ಸೂರ್ ನಡುವೆ ದಶಕಗಳ ಒಡನಾಟವಿದೆ. ಇಬ್ಬರೂ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಖಯಾಮತ್ ಸೆ ಖಯಾಮತ್ ತಕ್' ಸೇರಿದಂತೆ ಮೂರ್ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಒಂದೆರಡು ಸಿನಿಮಾ ನಿರ್ಮಿಸಿದ್ದಾರೆ. ಕ್ರಿಯೇಟಿವ್ ವಿಚಾರದಲ್ಲಿ ಮನ್ಸೂರ ಅವರನ್ನು ಆಮೀರ್ ಖಾನ್ ಬಹಳ ನಂಬುತ್ತಾರೆ. ಒಂದು ವೇಳೆ ನನ್ನ ಸಿನಿಮಾ ಬಿಡುಗಡೆಗೂ ಮುನ್ನ ನಾನು ಸತ್ತು ಹೋದ್ರೆ, ಮನ್ಸೂರ್ ಸಲಹೆ ಸೂಚನೆ ಪಡೆದು ಸಿನಿಮಾ ಮುಗಿಸಿ ರಿಲೀಸ್ ಮಾಡಿ ಎಂದು ಹೇಳುವುದಾಗಿ ಆಮೀರ್ ಖಾನ್ ಹೇಳಿದ್ದಾರೆ.
ವಿಮಾನದಲ್ಲಿ ಓಡಾಡುವುದು ಅಂದ್ರೆ, ನನಗೆ ಭಯ.. ದಿಢೀರನೆ ವಿಮಾನ ದುರಂತದಲ್ಲಿ ನಾನು ಸತ್ತು ಹೋದರೆ ಮನ್ಸೂರ್ ಸಹಾಯ ಪಡೆದು ಸಿನಿಮಾ ಮುಗಿಸಿ ಅಂತ ಹೇಳ್ತೀನಿ ಎಂದು ಆಮೀರ್ ಖಾನ್ ನಕ್ಕಿದ್ದಾರೆ. "ಚಿತ್ರೀಕರಣ ಮುಗಿದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವಾಗ ನಾನು ಮನ್ಸೂರ್‌ಗೆ ಒಂದು ಟಿಪ್ಪಣಿ ಬರೀತ್ತಿದ್ದೆ. ನನ್ನ ವಿಮಾನ ಅಪಘಾತಕ್ಕೀಡಾದರೆ ಅಥವಾ ದಿಢೀರನೆ ಸತ್ರೆ ಎನ್ನುವ ಒತ್ತಡದಲ್ಲಿ ಇರ್ತೀನಿ. ಒಂದು ವೇಳೆ ಏನಾದ್ರು ಆಗಿಬಿಟ್ರೆ ಸಿನಿಮಾದಲ್ಲಿ ತಪ್ಪಾಗಬಾರದು. ಹಾಗಾಗಿ ನಿರ್ದೇಶಕರು ಮನ್ಸೂರ್ ಸಲಹೆ ತಗೊಳ್ಳಿ ಎಂದು ನಾನು ಕೇಳಿಕೊಳ್ತೀನಿ. ಆ ಸಿನಿಮಾವನ್ನು ನೋಡಿಕೊಳ್ಳುವಂತೆ ನಾನು ಮನ್ಸೂರ್ ಅವರಲ್ಲಿ ಮನವಿ ಮಾಡ್ತೀನಿ. ಪ್ರತಿ ಬಾರಿ ವಿಮಾನ ಹತ್ತುವ ಮುನ್ನ ಹೀಗೆ ಮಾಡ್ತೀನಿ" ಎಂದಿದ್ದಾರೆ.

ಮಾತು ಮುಂದುವರೆಸಿರುವ ಆಮೀರ್ ಖಾನ್ " ನಾನು ಸಂಪೂರ್ಣವಾಗಿ ನಂಬುವ ವ್ಯಕ್ತಿ ಮನ್ಸೂರ್. ಇದೇ ಮಾತನ್ನು ನಾನು ಕಿರಣ್ ರಾವ್‌ಗೂ ಹಲವು ಬಾರಿ ಹೇಳಿದ್ದೀನಿ. ಒಂದು ವೇಳೆ ನನಗೇನಾದ್ರು ಆಗಿಬಿಟ್ರೆ ಮನ್ಸೂರ್ ಸಹಾಯ ಪಡೆದು ಸಿನಿಮಾ ಮುಂದುವರೆದು ಅಂದಿದ್ದೀನಿ" ಎಂದಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿರುವ ಮನ್ಸೂರ್ "ನನಗೆ ಇತ್ತೀಚೆಗೆ ಇದೆಲ್ಲಾ ಗೊತ್ತಾಯಿತು, ಅವತ್ತಿಂದ ನಾನು ಬಹಳ ಒತ್ತಡಕ್ಕೆ ಸಿಲುಕಿದ್ದೀನಿ" ಎಂದಿದ್ದಾರೆ.
ಸದ್ಯ ಆಮೀರ್ ಖಾನ್ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವರ್ಷ 'ಕೂಲಿ' ಚಿತ್ರದ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಅದಕ್ಕೂ ಮುನ್ನ 'ಸಿತಾರೆ ಜಮೀನ್ ಪರ್' ಸಿನಿಮಾದಲ್ಲಿ ನಟಿಸಿದ್ದರು. 'ದಂಗಲ್' ಬಳಿಕ ಹೀರೊ ಆಗಿ ಮಿಸ್ಟ್ ಪರ್ಫೆಕ್ಷನಿಸ್ಟ್ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ 'ಥಗ್ಸ್ ಆಫ್ ಹಿಂದೂಸ್ತಾನ್' ಹಾಗೂ 'ಲಾಲ್ ಸಿಂಗ್ ಛಡ್ಡಾ' ಚಿತ್ರಗಳು ಹೀನಾಯವಾಗಿ ಸೋತಿದ್ದವು. ಆಮೀರ್ ಖಾನ್ ಭರ್ಜರಿಯಾಗಿ ಕಂಬ್ಯಾಕ್ ಮಾಡುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.


Click it and Unblock the Notifications