Just In
Don't Miss!
- News
ಸಿದ್ದರಾಮಯ್ಯಗೆ ''ಹೌದು ಹುಲಿಯಾ'' ಎಂದವ ಇಂದು ಬಿಜೆಪಿಗೆ
- Automobiles
ಐಷಾರಾಮಿ ಕಾರಿನ ಡೀಲರ್ ಆದ ಟೀ ಮಾರುತ್ತಿದ್ದ ಕನ್ನಡಿಗನ ರೋಚಕ ಕಥೆ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಕರ್ನಾಟಕ vs ತಮಿಳುನಾಡು ರಣಜಿ: ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಆಲೌಟ್
- Lifestyle
ಇಬ್ಬರು ಸಲಿಂಗಿ ತಾಯಿಂದಿರ ಗರ್ಭದಲ್ಲಿ ಬೆಳೆದ ಮಗು
- Technology
2020ಕ್ಕೆ ಬರಲಿವೆ ಹಾರ್ಮನಿ ಓಎಸ್ ಒಳಗೊಂಡ ಹುವಾವೇ ಸ್ಮಾರ್ಟ್ಫೋನ್ಗಳು!
- Finance
ಸದ್ಯದಲ್ಲೇ ಹೆಚ್ಚಾಗಲಿದೆ ನಿಮ್ಮ ತಿಂಗಳ ಸಂಬಳ: EPFನಲ್ಲಿ ಬದಲಾವಣೆ
- Travel
ಉತ್ತರ ಭಾರತಕ್ಕೆ ಪ್ರವಾಸ ಹೋದ್ರೆ ಈ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲು ಮರೀಬೇಡಿ
ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಲುಕ್ ಗೆ ಬಾಲಿವುಡ್ ಮಂದಿ ಫಿದಾ
ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಈಗ 'ಲಾಲ್ ಸಿಂಗ್ ಚಡ್ಡಾ' ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಹೌದು, ಆಮೀರ್ ಖಾನ್ ಅಭಿನಯದ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆಮೀರ್ ಖಾನ್ ನಯ ಲುಕ್ ನೋಡಿ ಅಭಿಮಾನಿಗಳು ಮಾತ್ರವಲ್ಲದೆ ಇಡೀ ಬಾಲಿವುಡ್ ಮಂದಿ ಫಿದಾ ಆಗಿದ್ದಾರೆ. ಸಾಕಷ್ಟು ನಟ-ನಟಿಯರು ಆಮೀರ್ ಖಾನ್ ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿಂಕ್ ಬಣ್ಣದ ಶರ್ಟ್ ಧರಿಸಿ, ಉದ್ದ ದಾಡಿ ಮತ್ತು ಮೀಸೆ ಬಿಟ್ಟಿರುವ ಆಮೀರ್ ಕೈಯಲ್ಲಿ ಕೆಂಪು ಬಣ್ಣದ ಬಾಕ್ಸ್ ಹಿಡಿದುಕೊಂಡು ರೈಲಿನಲ್ಲಿ ಕುಳಿತಿದ್ದಾರೆ.
ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಟೈಟಲ್ ಪೋಸ್ಟರ್ ಬಿಡುಗಡೆ
ಅಂದ್ಹಾಗೆ 'ಲಾಲ್ ಸಿಂಗ್ ಚಡ್ಡಾ' ಹಾಲಿವುಡ್ ಸಿನಿಮಾ ರಿಮೇಕ್. 1994ರಲ್ಲಿ ರೀಲೀಸ್ ಆಗಿದ್ದ ಆಸ್ಕರ್ ಮುಡಿಗೇರಿಸಿಕೊಂಡಿರುವ 'ಫಾರೆಸ್ಟ್ ಗಂಪ್' ಚಿತ್ರದ ರಿಮೇಕ್. ಈ ಸಿನಿಮಾ ಅಮೀರ್ ಖಾನ್ ಅವರನ್ನ ತುಂಬಾ ಕಾಡಿದ ಚಿತ್ರವಂತೆ. ಹಾಗಾಗಿ ಈ ಚಿತ್ರದ ರಿಮೇಕ್ ನಲ್ಲಿ ನಟಿಸಲು ಆಸಕ್ತಿ ತೋರಿ ಅಭಿನಯಿಸುತ್ತಿದ್ದಾರೆ ಆಮೀರ್ ಖಾನ್.
ಪ್ರತಿಯೊಂದು ಸಿನಿಮಾದಲ್ಲು ವಿಭಿನ್ನವಾಗಿ ಕಾಣಿಸಿಕೊಳ್ಳುವ ಆಮೀರ್ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲೂ ವಿಭಿನ್ನ ಗೆಟಪ್ ನಲ್ಲಿ ಮಿಂಚಿದ್ದಾರೆ. ಚಿತ್ರಕ್ಕಾಗಿ ಲಾಲ್ ಸಿಂಗ್ ಚಡ್ಡಾಗಾಗಿ ಆಮೀರ್ ಸುಮಾರು 6 ತಿಂಗಳಿಂದ ವರ್ಕೌಟ್ ಮಾಡಿ ತಯಾರಿ ನಡೆಸಿದ್ದಾರೆ.
ಆಕ್ಟೋಬರ್ 31ರಿಂದ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದರು ಚಿತ್ರತಂಡ. ಆಮೀರ್ ಖಾನ್ ಅಭಿನಯದ ಈ ಮಹತ್ವಾಕಾಂಕ್ಷೆಯ ಸಿನಿಮಾ ಇದಾಗಿದ್ದು ಮುಂದಿನ ವರ್ಷ ಕ್ರಿಸ್ ಮಸ್ ಗೆ ತೆರೆಗೆ ಬರಲಿದೆ.