For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' Vs 'ರಕ್ಷಾಬಂಧನ್' ಫೈಟ್; ಕಲೆಕ್ಷನ್ ಲೆಕ್ಕಾಚಾರ ಹೇಗಿದೆ?

  |

  ಬಾಲಿವುಡ್‌ನಲ್ಲಿಂದು ಸೂಪರ್ ಸ್ಟಾರ್‌ಗಳಿಬ್ಬರ ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸಿವೆ. ಒಂದ್ಕಡೆ ಆಮಿರ್ ಖಾನ್ ನಟನೆಯ 'ಲಾಲ್‌ ಸಿಂಗ್ ಚಡ್ಡಾ' ಮತ್ತೊಂದ್ಕಡೆ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್'. ಎರಡೂ ಸಿನಿಮಾಗಳಲ್ಲಿ ಯಾವ ಸಿನಿಮಾ ಬಾಕ್ಸಾಫೀಸ್ ಭವಿಷ್ಯ ಏನಾಗಲಿದೆ ಅನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ.

  ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾ ರೀಮೇಕ್ 'ಲಾಲ್‌ ಸಿಂಗ್ ಚಡ್ಡಾ'. ಅದ್ವೈತ್ ಚಂದನ್ ನಿರ್ದೇಶನದ ಈ ಕಾಮಿಡಿ ಡ್ರಾಮಾ ಸಿನಿಮಾದಲ್ಲಿ ಆಮಿರ್ ಖಾನ್ ಜೋಡಿಯಾಗಿ ಕರೀನಾ ಕಪೂರ್ ಮಿಂಚಿದ್ದಾರೆ. ಟಾಲಿವುಡ್ ನಟ ನಾಗಚೈತನ್ಯಾ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗಿತ್ತು. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ 'ಲಾಲ್‌ ಸಿಂಗ್ ಚಡ್ಡಾ' ಟ್ರೆಂಡ್ ಕೂಡ ನಡೀತಿದೆ. ಅಂತೂ ಇಂತೂ ಸಿನಿಮಾ ಇಂದು (ಆಗಸ್ಟ್ 11) ಪ್ರೇಕ್ಷಕರ ಮುಂದೆ ಬಂದಿದೆ.

  'ಲಾಲ್ ಸಿಂಗ್ ಚಡ್ಡಾ' 57 ಸಾವಿರ ಅಡ್ವಾನ್ಸ್ ಬುಕಿಂಗ್: ಆಮಿರ್ ಸಿನಿಮಾ ಭವಿಷ್ಯವೇನು?'ಲಾಲ್ ಸಿಂಗ್ ಚಡ್ಡಾ' 57 ಸಾವಿರ ಅಡ್ವಾನ್ಸ್ ಬುಕಿಂಗ್: ಆಮಿರ್ ಸಿನಿಮಾ ಭವಿಷ್ಯವೇನು?

  'ರಕ್ಷಾಬಂಧನ್' ಅಕ್ಷಯ್ ಕುಮಾರ್ ನಟನೆಯ ಫ್ಯಾಮಿಲಿ ಕಾಮಿಡಿ ಸಿನಿಮಾ. ಟೈಟಲ್‌ಗೆ ತಕ್ಕಂತೆ ಅಣ್ಣ-ತಂಗಿಯರ ಬಾಂಧವ್ಯ ಕಥೆ ಇದದು. ನಾಲ್ವರು ತಂಗಿಯರನ್ನು ಮದುವೆ ಮಾಡಲು ಕಷ್ಟಪಡುವ ಅಣ್ಣನ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಸಿನಿಮಾ ಟ್ರೈಲರ್ ಹಾಗೂ ಸಾಂಗ್ಸ್‌ ಕೂಡ ರಿಲೀಸ್ ಆಗಿ ಗಮನ ಸೆಳೆದಿತ್ತು. ರಕ್ಷಾಬಂಧನ್ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬಂದಿರುವುದು ವಿಶೇಷ. ಈ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬಂದಿರೋದ್ರಿಂದ ಯಾವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನುವ ಕುತೂಹಲ ಗರಿಗೆದರಿದೆ.

   ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಚಡ್ಡಾಗೆ ಮುನ್ನಡೆ

  ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಚಡ್ಡಾಗೆ ಮುನ್ನಡೆ

  ಆಮಿರ್ ಖಾನ್ ಸಿನಿಮಾ ಅಂದರೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿರುತ್ತದೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನಿಮಾಗಳ ಖದರ್ರೇ ಅಂಥಾದ್ದು. ಒಳ್ಳೆ ಕಥೆ, ಅತ್ಯದ್ಭುತ ನಟನೆಯಿಂದ ಆಮಿರ್ ಯಾವಾಗಲೂ ಗೆಲ್ತಾರೆ. 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಫಸ್ಟ್ ಡೇ ಓಪನಿಂಗ್ ಜೋರಾಗಿತ್ತು. 'ಲಾಲ್‌ ಸಿಂಗ್ ಚಡ್ಡಾ'ಗೆ ಹೋಲಿಸಿದರೆ 'ರಕ್ಷಾಬಂಧನ್' ಸಿನಿಮಾ ಬಗ್ಗೆ ಕ್ರೇಜ್ ಕಮ್ಮಿ ಇದೆ. ಅಡ್ವಾನ್ಸ್ ಟಿಕೆಟ್‌ ಬುಕ್ಕಿಂಗ್‌ನಲ್ಲೂ ಆಮಿರ್ ಖಾನ್ ಕೈ ಮೇಲಾಗಿದೆ. 'ಲಾಲ್‌ ಸಿಂಗ್ ಚಡ್ಡಾ' ಅಂದಾಜು 55 ಸಾವಿರ ಟಿಕೆಟ್ ಅಡ್ವಾನ್ಸ್ ಆಗಿ ಬುಕ್ ಆಗಿದ್ದರೆ 'ರಕ್ಷಾಬಂಧನ್' ಚಿತ್ರದ 35 ಸಾವಿರ ಟಿಕೆಟ್ ಮಾರಾಟವಾಗಿತ್ತು.

   ನಿಧಾನವಾಗಿ ಗೆಲ್ಲುತ್ತಾ 'ರಕ್ಷಾಬಂಧನ್'?

  ನಿಧಾನವಾಗಿ ಗೆಲ್ಲುತ್ತಾ 'ರಕ್ಷಾಬಂಧನ್'?

  ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಸಿನಿಮಾಗಳು ಬಿಗ್ ಓಪನಿಂಗ್ ಪಡೆದುಕೊಳ್ಳುವುದಿಲ್ಲ. ಆದರೆ ನಿಧಾನವಾಗಿ ಮೌತ್‌ ಟಾಕ್‌ನಿಂದ ಗೆಲ್ತಾವೆ. ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರುತ್ತವೆ. 'ರಕ್ಷಾಬಂಧನ್' ಫ್ಯಾಮಿಲಿ ಸಬ್ಜೆಟ್ ಆಗಿರುವುದರಿಂದ ಫಸ್ಟ್‌ ವೀಕೆಂಡ್ ನಂತರ ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆ ಇದೆ ಎಂದು ಬಾಲಿವುಡ್ ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ಇನ್ನು ಗುರುವಾರವೇ ಎರಡೂ ಸಿನಿಮಾಗಳು ರಿಲೀಸ್ ಆಗಿರುವುದರಿಂದ ಲಾಂಗ್ ವೀಕೆಂಡ್ ಕಲೆಕ್ಷನ್‌ಗೆ ಪ್ಲಸ್ ಆಗುತ್ತದೆ ಅನ್ನುವ ಲೆಕ್ಕಾಚಾರವೂ ಇದೆ.

   ಬಾಯ್‌ಕಾಟ್ ಆಮಿರ್ ಸಿನಿಮಾ ಟ್ರೆಂಡ್

  ಬಾಯ್‌ಕಾಟ್ ಆಮಿರ್ ಸಿನಿಮಾ ಟ್ರೆಂಡ್

  ಕೆಲ ವರ್ಷಗಳ ಹಿಂದೆ ನಟ ಆಮಿರ್ ಖಾನ್ 'ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ' ಎಂದು ಹೇಳಿದ್ದರು. ಈ ಹೇಳಿಕೆಯನ್ನು ಜನ ಇನ್ನು ಮರೆತ್ತಿಲ್ಲ. ಇದೇ ಕಾರಣಕ್ಕೆ ಆಮಿರ್ ನಟನೆಯ 'ಲಾಲ್‌ ಸಿಂಗ್ ಚಡ್ಡಾ' ಬಹಿಷ್ಕರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ದಿನಗಳಿಂದ ಟ್ರೆಂಡ್ ನಡೀತಿದೆ. ಆಮಿರ್ ಖಾನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದರು. ಜೊತೆಗೆ ಯಾರು ನನ್ನ ಸಿನಿಮಾ ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದ್ದರು. ಬಾಲಿವುಡ್ ಪಂಡಿತರ ಪ್ರಕಾರ ಇಂತಹ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳು ಸಿನಿಮಾ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಜನ ನೋಡೇ ನೋಡುತ್ತಾರೆ ಅನ್ನುವುದು ಅವರ ಅಭಿಪ್ರಾಯ.

   2 ಚಿತ್ರಗಳ ಫಸ್ಟ್‌ ಡೇ ಕಲೆಕ್ಷನ್?

  2 ಚಿತ್ರಗಳ ಫಸ್ಟ್‌ ಡೇ ಕಲೆಕ್ಷನ್?

  ಈಗಾಗಲೇ 'ಲಾಲ್‌ ಸಿಂಗ್ ಚಡ್ಡಾ' ಸಿನಿಮಾ ಪ್ರೀಮಿಯರ್ ಶೋಗಳು ನಡೆದಿದ್ದು, ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. 'ರಕ್ಷಾಬಂಧನ್' ಸಿನಿಮಾ ಪ್ರದರ್ಶನಗಳು ಶುರುವಾಗಿದೆ. ಸದ್ಯದ ಅಂದಾಜಿನ ಪ್ರಕಾರ ಮೊದಲ ದಿನ 'ಲಾಲ್‌ ಸಿಂಗ್ ಚಡ್ಡಾ' 15 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಆದರೆ 'ರಕ್ಷಾಬಂಧನ್' ಕಲೆಕ್ಷನ್ 12 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗುತ್ತಿದೆ.

  Recommended Video

  Laal Singh Chadda ಆಮೀರ್ ಸಿನಿಮಾಗೆ ಸಂಕಷ್ಟ! | *Entertainment | Filmibeat Kannada
  English summary
  Aamir Khan Starrer Laal Singh Chaddha vs Akshay Kumar Starrer Raksha Bandhan Box Office Prediction. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X