ಚಿತ್ರೀಕರಣ ವೇಳೆ ಆಮೀರ್ ಖಾನ್ ಪಕ್ಕೆಲುಬಿಗೆ ಗಾಯ: ಶೂಟಿಂಗ್ ನಿಲ್ಲಿಸದ ಮಿ.ಪರ್ಫೆಕ್ಷನಿಸ್ಟ್

ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಶೂಟಿಂಗ್ ವೇಳೆ ಪಕ್ಕೆಲುಬಿಗೆ ಏಟು ಬಿದ್ದಿದೆ. ತೀವ್ರ ನೋವಿನಿಂದ ಬಳಲುತ್ತಿದ್ದರೂ ಆಮೀರ್ ಖಾನ್ ಚಿತ್ರೀಕರಣ ನಿಲ್ಲಿಸದೆ ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ದೆಹಲಿಯಲ್ಲಿ ನಡೆಯುತ್ತಿದೆ. ಚಿತ್ರದ ಆಕ್ಷನ್ ದೃಶ್ಯವನ್ನು ಸೆರೆಹಿಡಿಯಾಗುತ್ತಿದೆಯಂತೆ. ಈ ಸಮಯದಲ್ಲಿ ಆಮೀರ್ ಖಾನ್ ಪಕ್ಕೆಲುಬಿಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಹಾಗಂತ ಅವರು ಚಿತ್ರೀಕರಣ ನಿಲ್ಲಿಸಲಿಲ್ಲ. ಚಿತ್ರೀಕರಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಶೂಟಿಂಗ್ ಮುಂದುವರೆಸಿದ್ದಾರೆ. ಮುಂದೆ ಓದಿ..

ನೋವು ನಿವಾರಕ ಮಾತ್ರಗಳನ್ನು ತೆಗೆದುಕೊಂಡು ಚಿತ್ರೀಕರಣ

ನೋವು ನಿವಾರಕ ಮಾತ್ರಗಳನ್ನು ತೆಗೆದುಕೊಂಡು ಚಿತ್ರೀಕರಣ

ನೋವು ನಿವಾರಕ ಮಾತ್ರಗಳನ್ನು ತೆಗೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಒಂದು ವೇಳೆ ಚಿತ್ರೀಕರಣ ನಿಲ್ಲಿಸಿದರೆ ಸಿನಿಮಾತಂಡಕ್ಕೆ ತೊಂದರೆ ಆಗುತ್ತೆ ಎನ್ನುವ ಕಾರಣಕ್ಕೆ ಆಮೀರ್ ಖಾನ್ ಶೂಟಿಂಗ್ ಮುಂದುವರೆಸಿದ್ದಾರೆ.

ಬಹುತೇಕ ಚಿತ್ರೀಕರಣ ಮುಕ್ತಾಯ

ಬಹುತೇಕ ಚಿತ್ರೀಕರಣ ಮುಕ್ತಾಯ

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹುತೇತ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ದೆಹಲಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶೂಟಿಂಗ್ ನಲ್ಲಿ ಭಾಗಿಯಾಗಿದೆ. ಇತ್ತೀಚಿಗಷ್ಟೆ ನಟಿ ಕರೀನಾ ಕಪೂರ್ ಪಾತ್ರವನ್ನು ಶೂಟಿಂಗ್ ಮಾಡಿ ಮುಗಿಸಲಾಗಿದೆ. ಈ ಬಗ್ಗೆ ಕರೀನಾ ಭಾವುಕ ಸಂದೇಶ ರವಾನಿಸಿದ್ದರು.

ಕರೀನಾ ಕಪೂರ್ ಭಾವುಕ ಸಂದೇಶ

ಕರೀನಾ ಕಪೂರ್ ಭಾವುಕ ಸಂದೇಶ

'ಎಲ್ಲಾ ಸುಂದರ ಪಯಣಗಳು ಕೊನೆಗೊಳ್ಳಬೇಕು. ಇಂದು ನಾನು ನನ್ನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ್ದೇನೆ.' ಎಂದು ಚಿತ್ರೀಕರಣ ಮುಗಿಸಿದ ಬಗ್ಗೆ ಹೇಳಿದ್ದಾರೆ. ನಂತರ ಚಿತ್ರೀಕರಣ ಮಾಡುವುದು ಎಷ್ಟು ಸವಾಲಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ. 'ನಿಜಕ್ಕೂ ತುಂಬಾ ಕಷ್ಟವಾಗಿತ್ತು. ಒಂದು ಕಡೆ ಕೊರೊನಾ, ಇನ್ನೊಂದು ಕಡೆ ಪ್ರಗ್ನೆನ್ಸಿ ಮತ್ತೊಂದು ಕಡೆ ಭಯ ಇದೆಲ್ಲದರ ನಡುವೆ ಚಿತ್ರೀಕರಣ ಮಾಡಬೇಕಿತ್ತು. ಆದರೆ ಚಿತ್ರೀಕರಣದ ಉತ್ಸಾಹ ಕಮ್ಮಿ ಆಗಿರಲಿಲ್ಲ.ಸುರಕ್ಷಿತವಾಗಿ ಚಿತ್ರೀಕರಣ ಮುಗಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಹಾಲಿವುಡ್ ಸಿನಿಮಾದ ರಿಮೇಕ್

ಹಾಲಿವುಡ್ ಸಿನಿಮಾದ ರಿಮೇಕ್

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟ ಆಮೀರ್ ಖಾನ್ ವಿಬಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್. ಮೂಲ ಸಿನಿಮಾದಲ್ಲಿ ನಟ ಟಾಮ್ ಹ್ಯಾಂಕ್ಸ್ ನಟಿಸಿದ್ದ ಪಾತ್ರದಲ್ಲಿ ಆಮೀರ್ ಖಾನ್ ಅಭಿನಯಿಸಿದ್ದಾರೆ.

More from Filmibeat

English summary
Aamir Khan suffered a rib injury on Laal Singh Chaddha Shooting Set. actor continued the shoot with pain killers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X