For Quick Alerts
  ALLOW NOTIFICATIONS  
  For Daily Alerts

  'ಥಗ್ಸ್ ಆಫ್ ಹಿಂದೂಸ್ತಾನ್' ಸೋಲಿನ ಹೊಣೆ ಹೊತ್ತ ಅಮೀರ್

  |

  ನಟ ಅಮೀರ್ ಖಾನ್ ಸಿನಿಮಾಗಳು ಅಂದರೆ ಬಾಕ್ಸ್ ಆಫೀಸ್ ಚಿಂದಿ ಮಾಡುವ ಚಿತ್ರಗಳು ಎನ್ನುವ ನಂಬಿಕೆ ಅಭಿಮಾನಿಗಳಲ್ಲಿ ಇದೆ. ಅದೇ ರೀತಿ ಅಮೀರ್ ಕೂಡ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತ ಬಂದಿದ್ದರು. ಆದರೆ, ಅವರ ಇತ್ತೀಚಿಗಿನ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಮಾತ್ರ ಸೋಲನ್ನು ಕಂಡಿದೆ.

  ಅಮೀರ್ ಖಾನ್ ಸಿನಿಮಾ ಎಂದು ನಿರೀಕ್ಷೆ ಇಟ್ಟಿಕೊಂಡು ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ದೊಡ್ಡ ನಿರಾಸೆ ಆಗಿತ್ತು. ಮೊದಲ ದಿನ ಜನರಿಂದ ತುಂಬ ಚಿತ್ರಮಂದಿರಗಳು ಬರು ಬರುತ್ತಾ ಖಾಲಿಯಾದವು.

  ವರ್ಲ್ಡ್ ವೈಡ್ 5ನೇ ಸ್ಥಾನ ಪಡೆದ ಅಮೀರ್ ಖಾನ್ 'ದಂಗಲ್' ವರ್ಲ್ಡ್ ವೈಡ್ 5ನೇ ಸ್ಥಾನ ಪಡೆದ ಅಮೀರ್ ಖಾನ್ 'ದಂಗಲ್'

  ಸದ್ಯ, ಈ ಸಿನಿಮಾದ ಸೋಲಿನ ಬಗ್ಗೆ ಅಮೀರ್ ಖಾನ್ ಮಾತನಾಡಿದ್ದಾರೆ. ಪ್ರೇಕ್ಷಕರಿಗೆ ಸಿನಿಮಾ ನಿರಾಸೆ ಮಾಡಿದೆ ಅದಕ್ಕೆ ಕ್ಷಮೆ ಇರಲಿ. ಮುಂದೆ ಈ ರೀತಿ ಆಗುವುದಿಲ್ಲ ಎಂದಿದ್ದಾರೆ. ಜನರಿಗೆ ಸಿನಿಮಾವನ್ನು ತಿಳಿಸುವುದರಲ್ಲಿ ನಾವು ಸೋತಿದ್ದೇವೆ ಎಂದು ಈ ಸಿನಿಮಾ ಸೋಲಿನ ಪೂರ್ಣ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ.

  ಜನರ ನಿರೀಕ್ಷೆಗೆ ತಕ್ಕ ಮನರಂಜನೆ ನಾವು ನೀಡಿಲ್ಲ. ಆದರೆ, ಕೆಲವರಿಗೆ ಸಿನಿಮಾ ಇಷ್ಟ ಆಗಿದೆ. ಸಿನಿಮಾದಲ್ಲಿ ಕೆಲವು ತಪ್ಪುಗಳಾಗಿವೆ ಎಂದು ಅಮೀರ್ ಹೇಳಿದ್ದಾರೆ.

  2000 ಕೋಟಿ ಗಳಿಸಿದ 'ದಂಗಲ್': ಸಾರ್ವಕಾಲಿಕ ದಾಖಲೆ ಬರೆದ ಅಮೀರ್ 2000 ಕೋಟಿ ಗಳಿಸಿದ 'ದಂಗಲ್': ಸಾರ್ವಕಾಲಿಕ ದಾಖಲೆ ಬರೆದ ಅಮೀರ್

  ಇನ್ನು 300 ಕೋಟಿ ಬಜೆಟ್ ನಲ್ಲಿ ನಿರ್ಮಾಣದಲ್ಲಿ 'ಥಕ್ಸ್ ಆಫ್ ಹಿಂಧೂಸ್ತಾನ್' ಸಿನಿಮಾ ಇಲ್ಲಿಯವರೆಗೆ 261 ಕೋಟಿ ಗಳಿಸಿದೆಯಾಷ್ಟೆ. ಈ ಚಿತ್ರಕ್ಕೆ ಹಾಕಿದ ಬಂಡವಾಳ ಕೂಡ ಇನ್ನು ವಾಪಸ್ ಬಂದಿಲ್ಲ.

  Aamir Khan takes responsibility for failure of Thugs of Hindostan movie

  ಅಂದಹಾಗೆ, 'ಥಕ್ಸ್ ಆಫ್ ಹಿಂಧೂಸ್ತಾನ್' ಅಮೀರ್ ಖಾನ್ ಹಾಗೂ ಅಮೀತಾಬ್ ಅವರ ಮೊದಲ ಕಾಂಬಿನೇಶನ್ ಸಿನಿಮಾವಾಗಿತ್ತು. ದಂಗಲ್ ಗರ್ಲ್ ಫಾತಿಮಾ ನಟನೆಗೆ ದೊಡ್ಡ ಪ್ರಶಂಸೆ ಸಿಕ್ಕಿತು. ಯಶ್ ಚೋಪ್ರಾ ನಿರ್ಮಾಣ ಮತ್ತು, ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನ ಸಿನಿಮಾಗಿದೆ.

  English summary
  Aamir Khan takes responsibility for failure of 'Thugs of Hindostan' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X