Aamir Khan: ಮಹಾ ಕುಡುಕ ಅಮೀರ್ ಖಾನ್ ಕುಡಿತ ಬಿಟ್ಟಿದ್ದು ಹೇಗೆ?

ನಟ ಅಮೀರ್ ಅದ್ಭುತ ನಟ, ಪಾತ್ರದ ಪರಿಪಕ್ವತೆಗಾಗಿ ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲರು. ನಟನೆಯಲ್ಲಿ 'ಫರ್ಫೆಕ್ಷನ್' ಹುಡುಕುವುದು ಅವರ ಗೀಳು. ಅವರಿಗಿದ್ದ ಇನ್ನೊಂದು ಗೀಳು ಕುಡಿತ.

Recommended Video

ಕೆಜಿಎಫ್2 ರಿಲೀಸ್ ದಿನವೇ ಅಮೀರ್ ಖಾನ್ ಸಿನಿಮಾ ರಿಲೀಸ್‌ ಆಗ್ತಿರೋದು ಯಾಕೆ? | Yash | Aamir Khan |

ಹೌದು, ನಟ ಅಮೀರ್ ವಿಪರೀತ ಕುಡಿಯುತ್ತಿದ್ದರು. ಅವರೇ ಹೇಳಿಕೊಂಡಿರುವಂತೆ ಒಮ್ಮೆ ಕುಳಿತರೆ ಬಾಟಲಿ ಖಾಲಿಯಾದ ಮೇಲೆಯೇ ಏಳುತ್ತಿದ್ದಿದ್ದು! ಹೀಗಿದ್ದ ಅಮೀರ್ ಖಾನ್ ಒಮ್ಮೆಲೆ ಕುಡಿತ ಬಿಟ್ಟುಬಿಟ್ಟರು. ತಮ್ಮ ಕುಡಿತದ ಚಟ, ಅದರಿಂದ ತಾವು ಅನುಭವಿಸಿದ ಕಷ್ಟ ಹಾಗೂ ತಾವು ಕುಡಿತ ಬಿಟ್ಟ ಕತೆಯನ್ನು ಅಮೀರ್ ಖಾನ್ ಮುಚ್ಚು ಮರೆಯಿಲ್ಲದೆ ಹೇಳಿಕೊಂಡಿದ್ದಾರೆ.

ಪ್ರಮುಖ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಮೀರ್ ಖಾನ್, ''ನಾನು ಪ್ರತಿದಿನವೂ ಕುಡಿಯುತ್ತಿರಲಿಲ್ಲ ಆಗಾಗ್ಗೆ ಕುಡಿಯುತ್ತಿದ್ದೆ. ಆದರೆ ಕುಡಿಯಲು ಕೂತೆನೆಂದರೆ ಮುಗಿಯಿತು, ಒಂದೆರಡು ಪೆಗ್‌ಗೆ ಸುಮ್ಮನಾಗುತ್ತಿರಲಿಲ್ಲ. ಬಾಟಲಿ ಖಾಲಿ ಮಾಡಿಯೇ ಏಳುತ್ತಿದ್ದೆ'' ಎಂದಿದ್ದಾರೆ.

''ನಮ್ಮ ವರ್ತನೆಗಳ ಮೇಲೆ ನಿಯಂತ್ರಣ ಇರುವುದಿಲ್ಲ''

''ನಮ್ಮ ವರ್ತನೆಗಳ ಮೇಲೆ ನಿಯಂತ್ರಣ ಇರುವುದಿಲ್ಲ''

''ಆದರೆ ಬರಬರುತ್ತಾ ಕುಡಿತ ಬೇಡ ಎನಿಸಿತೊಡಗಿತು. ಮದ್ಯದ ನಶೆ ಏರಿದಾಗ ನಾವು ಏನೇನೊ ಮಾತನಾಡುತ್ತಿರುತ್ತೇವೆ. ಏನೇನೋ ಮಾಡುತ್ತೇವೆ. ನನಗೆ ಈ ವರೆಗೆ ಆ ಅನುಭವ ಆಗಿಲ್ಲವಾದರೂ ಕುಡಿದಾಗ ನಾವು ನಮ್ಮ ನಿಯಂತ್ರಣದಲ್ಲಿಯಂತೂ ಇರುವುದಿಲ್ಲ. ನನ್ನ ವ್ಯಕ್ತಿತ್ವಕ್ಕೆ ಅದು ಸೂಟ್ ಆಗುವುದಿಲ್ಲ ಎನಿಸಿತು ಹಾಗಾಗಿ ನಾನು ಕುಡಿತ ಬಿಟ್ಟುಬಿಟ್ಟೆ'' ಎಂದಿದ್ದಾರೆ ಅಮೀರ್ ಖಾನ್.

ಕುಟುಂಬದ ಬಗ್ಗೆ ಅಮೀರ್ ಖಾನ್ ಮಾತು

ಕುಟುಂಬದ ಬಗ್ಗೆ ಅಮೀರ್ ಖಾನ್ ಮಾತು

ಅದೇ ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿರುವ ಅಮೀರ್ ಖಾನ್, ''ನಾನು ನನ್ನ ಕುಟುಂಬವನ್ನು ಲಘುವಾಗಿ ಪರಿಗಣಿಸಿದೆ. ಅವರಿಗೆ ನಾನು ಹೆಚ್ಚು ಮೌಲ್ಯ ಕೊಡಲಿಲ್ಲ, ಅವರೊಟ್ಟಿಗೆ ಸರಿಯಾಗಿ ಸಮಯ ಕಳೆಯಲಿಲ್ಲ. ನನ್ನದೇ ವೃತ್ತಿ ಇನ್ನಿತರೆಗಳಲ್ಲಿ ಬ್ಯುಸಿಯಾಗಿ ಹೋದೆ ಅವರ ಭಾವನೆಗಳಿಗೆ ನಾನು ಕೊಡಬೇಕಾದಷ್ಟು ಗೌರವವನ್ನು ನೀಡಲಿಲ್ಲ'' ಎಂದು ಬೇಸರಪಟ್ಟುಕೊಂಡಿದ್ದಾರೆ.

ವಿಪರೀತ ಕುಡಿಯುತ್ತಿದ್ದ ಸಲ್ಮಾನ್ ಖಾನ್

ವಿಪರೀತ ಕುಡಿಯುತ್ತಿದ್ದ ಸಲ್ಮಾನ್ ಖಾನ್

ಅಮೀರ್ ಖಾನ್ ಮಾತ್ರವೇ ಅಲ್ಲ ಸಲ್ಮಾನ್ ಖಾನ್ ಸಹ ಬಹಳ ಕುಡಿಯುತ್ತಿದ್ದರು. ನಶೆಯಲ್ಲಿ ಸಲ್ಮಾನ್ ಖಾನ್ ಮಾಡಿರುವ ಕರ್ಮಕಾಂಡಗಳ ಪಟ್ಟಿಯೇ ಇದೆ. ಕುಡಿದು ಕಾರು ಚಾಲನೆ, ಕುಡಿದು ಐಶ್ವರ್ಯಾ ರೈ ಮನೆಯ ಮುಂದೆ ಮಾಡಿದ ಜಗಳ, ವಿವೇಕ್ ಒಬೆರಾಯ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ರಣ್ಬೀರ್ ಕಪೂರ್ ಗೆ ಬೆದರಿಕೆ, ಶಾರುಖ್ ಖಾನ್ ಜೊತೆ ಪಾರ್ಟಿಯಲ್ಲಿ ಜಗಳ ಹೀಗೆ ಪಟ್ಟಿ ಸಾಗುತ್ತದೆ. ಆದರೆ ಸಲ್ಮಾನ್ ಸಹ ಇತ್ತೀಚೆಗೆ ಕುಡಿಯುವುದು ಬಿಟ್ಟಿದ್ದಾರೆ ಎಂದು ಅವರ ಗೆಳೆಯರು ಹೇಳಿಕೊಂಡಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ರೆಡಿ

ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ರೆಡಿ

ಅಮೀರ್ ಖಾನ್ ಪ್ರಸ್ತುತ ತಮ್ಮ ಹೊಸ ಸಿನಿಮಾದ ಬಿಡುಗಡೆಗೆ ತಯಾರಾಗಿದ್ದಾರೆ. ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಪುಸ್ತಕ ಆಧರಿಸಿ ಹಿಂದಿಯಲ್ಲಿ 'ಲಾಲ್ ಸಿಂಗ್ ಚಡ್ಡಾ' ಹೆಸರಿನ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ದಾರೆ. ಕರೀನಾ ಕಪೂರ್ ಸಿನಿಮಾದ ನಾಯಕಿ, ತೆಲುಗಿನ ನಟ ನಾಗಚೈತನ್ಯ ಸಹ ಅಮಿರ್ ಖಾನ್ ಜೊತೆ ನಟಿಸಿದ್ದಾರೆ. ಹಾಲಿವುಡ್‌ನಲ್ಲಿ 'ಫಾರೆಸ್ಟ್ ಗಂಫ್' ಹೆಸರಿನ ಸಿನಿಮಾ ಈಗಾಗಲೇ ಬಂದಿದ್ದು ವಿಶ್ವದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿಕೊಂಡಿದೆ. 'ಲಾಲ್ ಸಿಂಗ್ ಚಡ್ಡಾ' ಏಪ್ರಿಲ್ 14 ಕ್ಕೆ 'ಕೆಜಿಎಫ್ 2' ಜೊತೆಗೆ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು ಬಳಿಕ ತಮ್ಮ ಸಿನಿಮಾದ ಬಿಡುಗಡೆಯನ್ನು ಅಮೀರ್ ಖಾನ್ ಮುಂದಕ್ಕೆ ಹಾಕಿಕೊಂಡಿದ್ದಾರೆ. ಈಗದು ಆಗಸ್ಟ್ 11 ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Actor Aamir Khan talked about his drinking habit. He also talked about how he quit alcohol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X