»   » 'ಭಜರಂಗಿ ಭಾಯ್ ಜಾನ್' ನೋಡಿ ಕಣ್ಣೀರಿಟ್ಟ ಅಮೀರ್ ಖಾನ್

'ಭಜರಂಗಿ ಭಾಯ್ ಜಾನ್' ನೋಡಿ ಕಣ್ಣೀರಿಟ್ಟ ಅಮೀರ್ ಖಾನ್

Posted By:
Subscribe to Filmibeat Kannada

ಸೋಲಿಲ್ಲದ ಸರದಾರ ಸಲ್ಮಾನ್ ಖಾನ್ ಅವರ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಭಜರಂಗಿ ಭಾಯ್ ಜಾನ್' ವಿಶ್ವದಾದ್ಯಂತ ಕಳೆದ ವಾರ ತೆರೆ ಕಂಡು ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿದೆ.

ಅಮೇರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ 5000 ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದ 'ಭಜರಂಗಿ ಭಾಯ್ ಜಾನ್' ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ವಿಶೇಷವಾಗಿ ಬಿಟೌನ್ ನ ಹಲವಾರು ಬಿಗ್ ಸ್ಟಾರ್ ಗಳು ಸಲ್ಲು ಭಾಯ್ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.['ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

Aamir Khan in tears after Watching Salman Khan's 'Bajrangi Bhaijaan'

ಅದರಲ್ಲೂ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಸಲ್ಲು ಅಭಿನಯದ 'ಭಜರಂಗಿ ಭಾಯ್ ಜಾನ್' ವೀಕ್ಷಿಸಿ ಭಾವುಕರಾಗಿ ಆನಂದ ಭಾಷ್ಪ ಸುರಿಸಿದ್ದಾರೆ. ಅಲ್ಲದೆ, ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ಕೊಂಡಾಡಿದ್ದಾರೆ. [ಮೋದಿಗೆ ಮನವಿ ಮಾಡಿಕೊಂಡ ಸಲ್ಲೂ 'ಭಾಯಿ ಜಾನ್']


''ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಸಲ್ಲು ಅಭಿನಯ ಔಟ್ ಸ್ಟ್ಯಾಂಡಿಂಗ್ ಆಗಿದೆ. ಇದುವರೆಗೂ ಸಲ್ಲು ಇಂತಹ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ನಿರ್ದೇಶಕ ಕಬೀರ್ ಖಾನ್ ಅವರು ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾವನ್ನು ನೀಡಿದ್ದಾರೆ'' ಅಂತ ತುಂಬು ಹೃದಯದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


''ಚಿತ್ರದಲ್ಲಿ ಮುನ್ನಿ ಪಾತ್ರ ಮಾಡಿರುವ ಪುಟ್ಟ ಹುಡುಗಿ ಹರ್ಷಾಲಿ ಮಲ್ಹೋತ್ರ ನಟನೆ ಎಲ್ಲರ ಮನಸ್ಸಲ್ಲಿ ಹಾಗೆ ಉಳಿದು ಬಿಡುವಂತೆ ಮಾಡುತ್ತದೆ'' ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ['ಭಜರಂಗಿ ಭಾಯ್ ಜಾನ್' ಬಗ್ಗೆ ಯಾರು ಏನಂದ್ರು?]


ಒಟ್ನಲ್ಲಿ 'ಭಜರಂಗಿ ಭಾಯ್ ಜಾನ್' ಬಗ್ಗೆ ಎಲ್ಲರ ಬಾಯಲ್ಲೂ ಒಳ್ಳೆ ಮಾತುಗಳು ಕೇಳಿಬರುತ್ತಿವೆ. ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಗೆ ಇದಕ್ಕಿಂತ ಬೇರೇನು ಬೇಕು?

English summary
Bollywood Actor Salman Khan starrer 'Bajrangi Bhaijaan' movie has hit the screens last week. Watching this movie Bollywood Actor Aamir Khan has taken his twitter account to appreciate Salman Khan and Child Artist Harshali Malhotra's acting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada