For Quick Alerts
  ALLOW NOTIFICATIONS  
  For Daily Alerts

  ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್

  |

  ಬಾಲಿವುಡ್‌ನಲ್ಲಿ ಈಗ 'ಬಯೋಪಿಕ್'ಗಳ ಕಾಲ. ಸಾಲು-ಸಾಲು ಬಯೋಪಿಕ್‌ಗಳು ತಯಾರಾಗಿ ಹಿಟ್ ಸಹ ಆಗಿವೆ. ಕೆಲವು ಮುಗ್ಗರಿಸಿವೆ ಕೂಡ. ಇನ್ನೂ ಕೆಲವು ಬಯೋಪಿಕ್‌ ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿವೆ.

  ಅದರಲ್ಲಿಯೂ ಕ್ರೀಡಾ ತಾರೆಗಳ ಜೀವನವನ್ನು ತೆರೆಗೆ ತರಲು ಬಾಲಿವುಡ್ ನಿರ್ದೇಶಕ, ನಿರ್ಮಾಪಕರುಗಳು ನಾ-ಮುಂದು, ತಾ ಮುಂದು ಎಂದು ನೂಕುನುಗ್ಗಲಾಡುತ್ತಿದ್ದಾರೆ. ಹಲವಾರು ಮಂದಿ ಕ್ರೀಡಾಪಟುಗಳ ಜೀವನವನ್ನು ಸಿನಿಮಾ ಮಾಡಲಾಗಿದೆ. ಯುವ ಕ್ರೀಡಾಪಟುಗಳ ಜೀವನವೂ ಸಿನಿಮಾ ಆಗುತ್ತಿದೆ.

  ಅಮೀರ್ ಖಾನ್‌ ಸಿನಿಮಾದಿಂದ ಹೊರಬಂದಿದ್ದಕ್ಕೆ ನಿಜ ಕಾರಣ ಕೊಟ್ಟ ವಿಜಯ್ ಸೇತುಪತಿಅಮೀರ್ ಖಾನ್‌ ಸಿನಿಮಾದಿಂದ ಹೊರಬಂದಿದ್ದಕ್ಕೆ ನಿಜ ಕಾರಣ ಕೊಟ್ಟ ವಿಜಯ್ ಸೇತುಪತಿ

  ಹಲವು ಸ್ಟಾರ್ ನಟರು ಬಯೋಪಿಕ್‌ಗಳಲ್ಲಿ ನಟಿಸಲು ಉತ್ಸುಕರಾಗಿ ಕಾಯುತ್ತಿದ್ದಾರೆ. ಇದೀಗ ನಟ ಅಮೀರ್ ಖಾನ್ ಅವರು ಕ್ರೀಡಾಪಟು ಒಬ್ಬರ ಜೀವನದ ಬಗ್ಗೆ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ.

  ವಿಶ್ವನಾಥನ್ ಆನಂದ್ ಪಾತ್ರದಲ್ಲಿ ಅಮೀರ್ ಖಾನ್

  ವಿಶ್ವನಾಥನ್ ಆನಂದ್ ಪಾತ್ರದಲ್ಲಿ ಅಮೀರ್ ಖಾನ್

  ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್, ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಜೀವನ ಕುರಿತ ಸಿನಿಮಾ ತಯಾರಾಗುತ್ತಿದ್ದು. ಆ ಸಿನಿಮಾದಲ್ಲಿ ಖ್ಯಾತ ನಟ ಅಮೀರ್ ಖಾನ್ ನಟಿಸಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಮೊದಲು ದೊರೆತಿದ್ದು ಅಮೀರ್ ಖಾನ್ ಗೆ ಅಲ್ಲ.

  ಧನುಷ್ ಅನ್ನು ಆಯ್ಕೆ ಮಾಡಲಾಗಿತ್ತು

  ಧನುಷ್ ಅನ್ನು ಆಯ್ಕೆ ಮಾಡಲಾಗಿತ್ತು

  ಆನಂದ್ ಎಲ್ ರಾಯ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ನಟ ಧನುಶ್ ಅವರನ್ನು ವಿಶ್ವನಾಥನ್ ಆನಂದ್ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ನಿರ್ಮಾಪಕ ಮಹಾವೀರ್ ಜೈನ್ ಅವರಿಗೆ ಆಯ್ಕೆ ಸರಿಬರದ ಕಾರಣ ಈಗ ಅಮೀರ್ ಖಾನ್ ಅವರನ್ನು ಕೇಳಲಾಗಿದ್ದು, ಅಮೀರ್ ಖಾನ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಶ್ವನಾಥನ್ ಆನಂದ್ ಪಾತ್ರಕ್ಕೆ ಧನುಷ್‌ಗಿಂತಲೂ ಅಮೀರ್ ಖಾನ್ ಹೆಚ್ಚು ಸೂಕ್ತವೂ ಹೌದು.

  ಆನಂದ್ ಎಲ್ ರಾಯ್‌ಗೆ ಓಕೆ ಎಂದಿರುವ ವಿಶ್ವನಾಥನ್

  ಆನಂದ್ ಎಲ್ ರಾಯ್‌ಗೆ ಓಕೆ ಎಂದಿರುವ ವಿಶ್ವನಾಥನ್

  ವಿಶ್ವನಾಥನ್ ಆನಂದ್ ಅವರ ಜೀವನವನ್ನು ಸಿನಿಮಾ ಮಾಡಲು ಹಲವರು ಅನುಮತಿಗಾಗಿ ಕೇಳಿದ್ದರು. ಆದರೆ ಬೇಡವೆಂದೇ ಹೇಳಿಕೊಂಡು ಬರುತ್ತಿದ್ದ ವಿಶ್ವನಾಥನ್ ಆನಂದ್ ಈಗ ಆನಂದ್ ಎಲ್ ರಾಯ್‌ಗೆ ಓಕೆ ಎಂದಿದ್ದಾರೆ. ಲಾಲ್‌ ಸಿಂಗ್ ಛಡ್ಡಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಮೀರ್ ಖಾನ್, ಆ ಸಿನಿಮಾದ ಬಳಿಕ ಬಯೋಪಿಕ್‌ನಲ್ಲಿ ನಟಿಸುವ ಸಾಧ್ಯತೆ ಇದೆ.

  ವೈರಲ್ ಆಗೋಯ್ತು ರಾಬರ್ಟ್ ಚಿತ್ರದ ಡಿ ಬಾಸ್ ಡೈಲಾಗ್ | Filmibeat Kannada
  ಹಲವು ಬಯೋಪಿಕ್‌ ಸಿನಿಮಾಗಳು ಬರುತ್ತಿವೆ

  ಹಲವು ಬಯೋಪಿಕ್‌ ಸಿನಿಮಾಗಳು ಬರುತ್ತಿವೆ

  ಮಿಲ್ಕಾ ಸಿಂಗ್, ಮೇರಿ ಕೋಂ, ಅಜರುದ್ದೀನ್ ಕುರಿತ ಸಿನಿಮಾ, ಎಂ.ಎಸ್.ಧೋನಿ, ಹಾಕಿ ಆಟಗಾರ ಸಂದೀಪ್ ಸಿಂಗ್ ಕುರಿತ 'ಸೂರ್ಮಾ', 'ಪಾನ್ ಸಿಂಗ್ ತೋಮರ್', ಪೋಗಟ್ ಸಹೋದರಿಯರ ಬಗ್ಗೆ 'ದಂಗಲ್' ಇನ್ನೂ ಅನೇಕ ಬಯೋಪಿಕ್ ಸಿನಿಮಾಗಳು ಬಂದಿವೆ. ಇದೀಗ ಕಪಿಲ್ ದೇವ್ ಬಗ್ಗೆ '83' ಸಿನಿಮಾ, ಹಾಗೂ ಫುಟ್‌ಬಾಲ್ ಕೋಚ್ ವಿಜಯ್ ಬಾರ್ಸೆ ಬಗ್ಗೆ 'ಜುಂಡ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸೈನಾ ನೆಹ್ವಾಲ್, ಪಿವಿ ಸಿಂಧು ಬಗ್ಗೆ ಸಿನಿಮಾಗಳು ಸಹ ತೆರೆಗೆ ಬರುತ್ತಿವೆ.

  English summary
  Aamir Khan to act in Vishwanathan Anand's biopic movie which is going to be directed by Anand L Roy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X