For Quick Alerts
  ALLOW NOTIFICATIONS  
  For Daily Alerts

  ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಲಿದ್ದಾರೆ ಅಮೀರ್ ಖಾನ್

  |

  ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೆಲೆಬ್ರಿಟಿಗಳು ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ದಿನಸಿ ಕಿಟ್, ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್ ಹೀಗೆ ಅನೇಕ ರೀತಿಯಲ್ಲಿ ನೆರವು ನೀಡಿದ್ದಾರೆ.

  ಇದೀಗ, ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಚೆಸ್‌.ಕಾಮ್ ಸಂಸ್ಥೆ 'ಚೆಕ್‌ಮೆಟ್ ಕೋವಿಡ್' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬ ವಿಚಾರ ತಿಳಿದಿದೆ.

  ನನ್ನ ತಪ್ಪಿನಿಂದಲೇ ಅಮೀರ್‌ ಖಾನ್‌ ನನ್ನಿಂದ ದೂರಾದ: ರಾಮ್‌ ಗೋಪಾಲ್ ವರ್ಮಾನನ್ನ ತಪ್ಪಿನಿಂದಲೇ ಅಮೀರ್‌ ಖಾನ್‌ ನನ್ನಿಂದ ದೂರಾದ: ರಾಮ್‌ ಗೋಪಾಲ್ ವರ್ಮಾ

  ಜೂನ್ 13 ರಂದು ಆ ಕಾಂಪಿಟೇಶನ್ ನಡೆಯಲಿದ್ದು, ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಎದುರು ಸೆಲೆಬ್ರಿಟಿಗಳು ಚೆಸ್ ಆಡಲಿದ್ದಾರೆ.

  ಚೆಸ್‌.ಕಾಮ್ ವಿಶ್ವನಾಥ್ ಆನಂದ್ ಎದುರು ಆಡಲಿರುವ ಮೊದಲ ಸೆಲೆಬ್ರಿಟಿ ಹೆಸರು ಬಹಿರಂಗಗೊಂಡಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಚೆಸ್ ಮಾಸ್ಟರ್ ವಿ ಆನಂದ್ ಜೊತೆ ಪ್ರದರ್ಶಕ ಪಂದ್ಯವನ್ನಾಡಲಿದ್ದಾರೆ ಎಂದು ಪ್ರಕಟಿಸಿದೆ.

  ಅಂದ್ಹಾಗೆ, ಈ ಹಿಂದೆಯೇ ವಿಶ್ವನಾಥ್ ಆನಂದ್ ಜೊತೆ ಅಮೀರ್ ಖಾನ್ ಚೆಸ್ ಆಡಿದ್ದಾರೆ. ಚೆಸ್ ಆಟದಲ್ಲಿ ಅಮೀರ್ ಖಾನ್ ಹೆಚ್ಚು ಆಸಕ್ತಿ ಹೊಂದಿದ್ದು, ಚಿತ್ರೀಕರಣದ ಬಿಡುವಿನ ಸಮಯದಲ್ಲೂ ಅಮೀರ್ ಚೆಸ್ ಆಡ್ತಾರೆ ಎಂದು ಸಹಕಲಾವಿದರು ಹೇಳಿಕೊಂಡಿದ್ದಾರೆ.

  ಅಮೀರ್ ಖಾನ್ ಮತ್ತು ವಿಶ್ವನಾಥ್ ಅನಂದ್ ಪಂದ್ಯವನ್ನು ಹಿಂದಿ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಹೃತಿಕ್ ರೋಷನ್ ಪ್ರಚಾರ ಮಾಡುವುದರ ಮೂಲಕ ಚೆಸ್‌.ಕಾಮ್ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ.

  ತಮ್ಮ ಜಿಲ್ಲೆ‌ ಮಾತ್ರವಲ್ಲ ಉತ್ತರ ಕರ್ನಾಟಕದ ಬಡವರಿಗೂ ನೆರವಾದ ಭುವನ್& ಹರ್ಷಿಕಾ | Filmibeat Kannada

  ಜೂನ್ 13 ರಂದು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಸೆಲೆಬ್ರಿಟಿ ಎಡಿಷನ್ ನಡೆಯಲಿದ್ದು, ಆ ಪಂದ್ಯಗಳ ನೇರ ಪ್ರಸಾರ ಚೆಸ್‌.ಕಾಮ್ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಲಿದೆ.

  English summary
  Bollywood actor Aamir Khan to play chess against Vishwanathan Anand in ‘Checkmate COVID’ event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X